ಒಟ್ಟು 1 ಕಡೆಗಳಲ್ಲಿ , 1 ದಾಸರು , 1 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ನ್ಯಾಯತಂದಿಹೆನೊ ಹರಿ ನಿನ್ನ ಸಭೆಗೆ ತೀರ್ಪುಮಾಡಿದನು ನ್ಯಾಯತಂದಿಹೆ ಪ ನ್ಯಾಯ ತಂದಿಹೆ ನೋಯದೆ ಉ ಪಾಯದಿಂದ ತೀರ್ಪುಮಾಡುವ ನ್ಯಾಯಾಧೀಶ ದಯಾಳು ಎನ್ನ ನ್ಯಾಯ ತೀರಿಸಿ ಕಾಯ್ವನೆಂದು ಅ.ಪ ಕೊಟ್ಟ ಒಡೆಯರೋ ಬೆನ್ನಟ್ಟಿ ಎನ್ನನು ಕಟ್ಟಿ ಕಾದ್ವರು ಭ್ರಷ್ಟನೆ ಮುಂದಕೆ ಕೊಟ್ಟ್ಹ್ಹೋಗೆನ್ವರು ನಿಷ್ಠುರಾಡ್ವರು ಕೊಟ್ಟು ಮುಕ್ತನಾಗ್ವೆನೆನ್ನಲು ಖೊಟ್ಟಿಕಾಸು ಕೈಯೊಳಿಲ್ಲವು ಭವ ಬೆನ್ನಟ್ಟಿ ಬಿಡದ ಕ ನಿಷ್ಟರಿಣಸೂತಕವ ಕಡಿಯೆಂದು 1 ಅನ್ನ ಕೊಟ್ಟವಗೆ ಅನ್ಯಾಯ ಯೋಚಿಸಿ ಬನ್ನ ಬಡಿಸಿದೆನೊ ಇನ್ನುಳಿಯದೆನೆಂದು ನಿನ್ನ ಸೇರಿದೆನೊ ಪನ್ನಂಗಶಯನ ಮುನ್ನ ಮಾಡಿದ ಎನ್ನ ಅವಗುಣ ಭಿನ್ನವಿಲ್ಲದೆ ನಿನ್ನೊಳ್ಪೇಳುವೆ ಸನ್ನುತಾಂಗನೆ ಮನ್ನಿಸಿ ಇದ ನಿನ್ನು ಎನ್ನಯ ಬನ್ನಬಿಡಿಸಿದೆಂದು 2 ಆಸೆಗೊಳಿಸಿದೆನೋ ಪುಸಿಯನ್ಹೇಳಿನಿ ರಾಸೆಮಾಡಿದೆನೋ ಶಾಶ್ವತದಿ ಕೊಟ್ಟ ಭಾಷೆ ತಪ್ಪಿದೆನೋ ವಸುಧೆಯೊಳು ನಾನು ಈಸುದಿನದಿಂ ಮೋಸಕೃತ್ಯದಿ ಘಾಸಿಯಾದೆನು ಧ್ಯಾಸಮರದು ಶ್ರೀಶ ಶ್ರೀನಿವಾಸ ಶ್ರೀರಾಮ ಪೋಷಿಸೆನ್ನ ಸುಶೀಲ ಗುಣವಿತ್ತು 3
--------------
ರಾಮದಾಸರು