ಬಂದದ್ದನುಭವ ಮಾಡ್ವೆ ಕಂದನಾಗಿರುವೆ
ತಂದೆ ನಿನ್ನಯ ದಯವೊಂದಿರಲಿ ಹರಿಯೆ ಪ
ಮಂದಿ ಮಕ್ಕಳು ಎನ್ನ ಕುಂದಿಟ್ಟು ಜರೆಯಲಿ
ಬಂಧು ಬಾಂಧವರೆಲ್ಲ ನಿಂದಿಸಿ ನುಡಿಲಿ
ಬಂಧನವು ಬಿಡರಿರಲಿ ಎಂದೆಂದು ಮರೆಯದಂತೆ
ಇಂದಿರೇಶ ನಿಮ್ಮ ಧ್ಯಾನವೊಂದೇ ಎನಗಿರಲಿ 1
ಭೂಪತಿಗಳೆನ್ನೊಳ್ಕೋಪಮಂ ತಾಳಲಿ
ತಾಪಬಡಿಸಲಿ ಮಹಪಾಪಿವನೆನುತ
ತಾಪತ್ರಯ ಬಿಡದಿರಲಿ ಪಾಪಲೋಪನೆ ಜಗ
ದ್ಯ್ಯಾಪಕನೆ ನಿನ್ನ ಧ್ಯಾಸಪರೂಪ ಎನಗಿರಲಿ 2
ಕಂಡಕಂಡಂತೆ ಜನರು ಭಂಡನೆಂದೆನ್ನಲಿ
ತಂಡತಂಡದಿ ಕಷ್ಟ ಅಂಡಲೆದು ಬರಲಿ
ಹೆಂಡರು ಸೇರದೆ ಗಂಡನೆಲ್ಲೆಂದೆನಲಿ
ಪಂಢರೀಶ ನಿನ್ನ ಪದೆನ್ನ ಮಂಡೆಮೇಲಿರಲಿ 3
ಎತ್ತ ಪೋದರು ಜನರು ಹತ್ರ ಬಡಿಯಲಿ ಎನಗೆ
ವಿತ್ತಕೊಟ್ಟೊಡೆಯರು ನಿತ್ತರಿಸದೊದಿಲಿ
ಮುತ್ತಿಕೊಂಡ್ವೈರಿಗಳು ಕುತ್ತಿಗೆ ಕೊಯ್ಯಲಿ
ಚಿತ್ತಜಪಿತನಿನ್ನ ಭಕ್ತ್ಯೊಂದೆನಗಿರಲಿ 4
ಪೀಡಿಸಲಿ ಬಡತನವು ಕಾಡಿಸಲಿ ದಾರಿದ್ರ್ಯ
ಓಡಿಸಲಿ ಪೊಡವಿಪರು ನಾಡ ಬಿಟ್ಟೆನ್ನ
ನೋಡಲಿ ಮುನಿದೆನ್ನ ನಾಡದೈವಗಳೆಲ್ಲ
ಬೇಡೆನೆ ಶ್ರೀರಾಮ ನಿನ್ನಡಿ ಬಲೊಂದೆನಗಿರಲಿ5