ಲೋಕನೀತಿ
ಅಧಿಕಾರಿಯಾಗಬೇಕು ಅದಕಾಗಿ ದುಡಿಯಬೇಕು ಪ
ಅಧಿಕಾರಿಯಾಗುವುದು ಸುಲಭವಲ್ಲ
ಎದೆಚಾಚಿ ಜಗದಿ ಹೆಮ್ಮೆಯ ತೋರುವ ಅ.ಪ
ಶಾಶ್ವತವಿರಬೇಕು ಅದನೀಶ್ವರ ಕೊಡಬೇಕು
ವಿಶ್ವವಿದ್ಯಾನಿಲಯವ ಸೇರುತಲಿ
ಶಶ್ವದಿ ಪರವಿದ್ಯಾಶಾಖೆಯಲಿ 1
ಭೂಷಣವೆನಗೆಂದು ನೀ ಮೋಸ ಹೋಗಬೇಡ
ಸಾಸಿರ ಸಾಸಿರ ಸ್ಥಾನಗಳಿಗೆ ನೀ
ಆಸೆ ಪಡದೆ ಹರಿಶಾಸನ ಸಭೆಯ 2
ಕಮ್ಮಿಯ ಪ್ರತಿಫಲಕೆ ನೀ ಸಮ್ಮತಿ ಕೊಡದಿರೆಲೊ
ಮರ್ಮವರಿತು ಪರಲೋಕವ ಪಡೆಯಲು
ಹಮ್ಮನು ಮುರಿಯುವ ಕಾರ್ಮಿಕ ಸಭೆಯ 3
ಕಾಲವರಿತು ಸತತ ನೀ ಮೇಲಕೇಳಬೇಕು
ಬಾಲಗೋಪಾಲನು ನೆಲೆಸುವುದಕೆ ಹೃದ
ಯಾಲಯ ರಚನೆಯ ಚತುರ ಶಿಲ್ಪಿಯ 4
ಶ್ರವಣ ಮಾಡಬೇಕು ಶಾಸ್ತ್ರವ ಮನನ ಮಾಡಬೇಕು
ಶ್ರವಣ ಮನನ ನಿಧಿ ಧ್ಯಾಸನದಿಂದ ಪ್ರ
ಸನ್ನ ಹರಿದಯದಿ ಸಿಗುವ ಮುಕುತಿಗೆ 5