ಸಿರಿ ಇಂದಿರೇಶ ದಾಸಜನಪೋಷ
ದಾಸನಾಶೋತ್ತರಕೆ ಬೇಸರಿಯಬೇಡ ಪ
ಭೇದಭಾವನೆ ಬಿಡಿಸು ವಾದಮತಿ ಪರಿಹರಿಸು
ಸಾಧುಸಜ್ಜನರ ಸುಬೋಧನುಡಿಗಲಿಸು
ಕ್ರೋಧ ತಾಮಸ ಕಡಿಸು ವೇದವಾಕ್ಯವ ತಿಳಿಸು
ಸಾಧನದಿ ಪರಲೋಕ ಹಾದಿಯೊಳು ನಡೆಸು 1
ಶಾಂತಿ ಸದ್ಗುಣ ಕಲಿಸು ಶಾಂತಿನುಡಿಗಳು ನುಡಿಸು
ಶಾಂತಿ ಮಂತ್ರವ ಬೋಧಿಸು ಶಾಂತಿಸ್ಥಿರಗೊಳಿಸು
ಶಾಂತರೊಡನಾಟವಿರಿಸು ಶಾಂತಿಸುಖ ಕರುಣಿಸು
ಶಾಂತಜನಪ್ರಭುವೆ ವೇದಾಂತ ಎನಗೊಲಿಸು 2
ಕಾಸಿನಾಸೆಯು ಬಿಡಿಸು ಹೇಸಿ ಬವಣೆಯ ಗೆಲಿಸು
ಮೋಸಮಯಪಹರಿಸು ದೋಷದೂರೆನಿಸು
ದೋಷನಾಶನ ಜಗದೀಶ ಶ್ರೀರಾಮ ನಿನ್ನ
ಸಾಸಿರ ನಾಮ ಎನ್ನ ಧ್ಯಾಸದೊಳು ನಿಲಿಸು 3