ನಾನಿನ್ನ ಧ್ಯಾಸದೊಳಿರುವೆ ಹರಿ
ನೀನೆನ್ನ ಧ್ಯಾಸದೊಳಿರಬೇಕು ಸತತ ಪ
ಬೆಳಗು ನಿನ್ನೊಳಗಯ್ಯ ಬೆಳಗಿನೊಳಗೆ ನೀನು
ಕಳೆಯೊಳಗೆ ನೀನಯ್ಯ ಕಳೆಯು ನಿನ್ನೊಳಗೆ
ಇಳೆಮೂರು ನಿನ್ನೊಳಗೆ ಇಳೆಯೊಳು ನೀನಯ್ಯ
ಒಲಿದು ನೀ ಎನ್ನನು ಸಲಹಯ್ಯ ಸತತ 1
ವೇದದೊಳಗೆ ನೀನು ವೇದ ನಿನ್ನೊಳಗಯ್ಯ
ನಾದ ನಿನ್ನೊಳು ದೇವ ನಾದದಿ ನೀನು
ಬೋಧ ನಿನ್ನೊಳು ಪ್ರಭು
ಮಾಧವ ಸತತ 2
ನೀನಿಟ್ಟ ಸೂತ್ರದಿಂ ನಾನಾ ಸೃಷ್ಟಿಗಳೆಲ್ಲ
ನಾನುತಾನೆನ್ನುತ ಕುಣೀತಿಹ್ಯವೊ
ನಾನು ನಿನ್ನೊಳು ಜೀಯಾ ನೀನು ನಿನ್ನೊಳು ತಂದೆ
ಧ್ಯಾನದಾಯಕ ಶ್ರೀರಾಮಯ್ಯ ಸತತ 3