ಇನ್ನೆಷ್ಟು ಹರಿಮಹಿಮೆ ಬಣ್ಣಿಸ್ಹೇಳಲಿ ನಿನಗೆ
ನಿನ್ನೊಳು ನೀ ತಿಳಿದು ಧನ್ಯಾನಾಗೆಲೊ ಮನಸೆ ಪ
ತನ್ನನ್ನು ಭಜಿಪರ ತನ್ನಂತೆ ನೋಡುವ
ಉನ್ನತ ಕರುಣ್ಯೆಂದು ಚೆನ್ನಾಗಿ ನೆರೆನಂಬಿ 1
ಮೊರೆಯಿಟ್ಟು ಬೇಡುವ ಚರಣದಾಸರನಗಲಿ
ಅರೆಗಳಿಗೆಯಿರ ಹರಿ ಚರಣಕ್ಕೆ ಮರೆಬೀಳು 2
ನಂಬಿದ ಭಕುತರ ಚರಣದಾಸರನಗಲಿ
ನಂಬಿ ನೀ ನಗಲದೆ ಗುಂಭದಿಂ ಸ್ಮರಿಸೆಲೊ 3
ಮಾನವು ಪೋದರೇನು ಹಾನಿಯೊದಗಿದರೇನು
ಪ್ರಾಣಪೋದರು ಹರಿಧ್ಯಾನ ಮರೆಯದಿರು 4
ನಾಶವಿಲ್ಲದೆ ತನ್ನ ದಾಸರ ಕಾಯ್ವನನು
ಮೇಷ ಶ್ರೀರಾಮಪಾದ ಧ್ಯಾಸದೊಳಿಡು ಗಟ್ಟಿ 5