ಏನಾಯ್ತು ಹರಿಪಾದ ನೆನೆವಲ್ಲಿ ಮನವೆ
ದೀನನೆ ನಿನ್ನ ಬಾಯಿಗ್ಹುಣ್ಣ್ಹುಟ್ಟಿತೇನೋ ಪ
ನಿಷ್ಠೆಯಿಂ ಕೈತಾಳವಿಟ್ಟು ಉಲ್ಲಾಸದಿ
ಕಷ್ಟಹರನಂಘ್ರಿ ಮನಮುಟ್ಟಿ ಪಾಡುವಲ್ಲಿ
ಕೆಟ್ಟಾಸೆಯಿಂ ಪರರಲ್ಹೊಟ್ಟ್ಹೊಟ್ಟ್ಹೊಡಕೊಂಡು ಬೇಡ್ದ
ಪೆಟ್ಟಿಗೆ ಕರವರೆಡು ಮುರಿದಿರುವವೇನೋ 1
ವನಜನಾಭನ ದಿವ್ಯ ವನರುಹಂಘ್ರಿಯ ಚರಿತ
ಘನವಾಗಿ ಪೊಗಳುತ ಕುಣಿದಾಡವಲ್ಲಿ
ಮೊಣಕಾಲು ಕೀಲ್ಮುರಿದು ನೆಲಕಿ ಬಿದ್ದಿಹ್ಯವೆ 2
ನೀಲಶಾಮನ ವಿಮಲಲೀಲೆಗಳು
ಶೀಲಮನದಾಲಸಾನಂದೊಳು ಲೋಲ್ಯಾಡವಲ್ಲಿ
ಹಾಳು ಸಂಸಾರದ ಗೋಳಾಟ ಕೇಳಿ ಕೇಳಿ
ಶೂಲೆಯೆದ್ದೆರಡು ಕಿವಿ ಕಿವುಡಾದವೇನು 3
ಸಾಗರನಿಲಯನ ನೀಗದ ಮಹಿಮೆಗಳ
ಜಾಗರದಿಂ ಪಾಡಿ ಭವರೋಗ ಗೆಲಿವಲ್ಲಿ
ಸೋಗಿನ ಸೂಳೆಸುದ್ದಿ ರಾಗದ್ಹಾಡ್ಹ್ಯಾಡಿ ಭವ
ಜಿಹ್ವೆ ಕಳಕೊಂಡಿದ್ಯೇನೋ 4
ದಾಸನುದಾಸರ ವಾಸದಿಗೂಡಿಯನು
ಮೇಷನು ವಿಚಾರದಿಂ ಶ್ರೀಶನ ಚರಣ
ಧ್ಯಾಸದೊಳಗಿರ್ದು ಯಮಪಾಶವನು ಗೆಲಿದು ದಯ
ಭೂಷ ಶ್ರೀರಾಮನ ಮುಕ್ತಿ ಪಡಿವಲ್ಲಿ 5