ಒಟ್ಟು 1 ಕಡೆಗಳಲ್ಲಿ , 1 ದಾಸರು , 1 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಪಡಕೋ ನೀನ್ಹಿಡಕೋ ರಂಗ ಶಾಯಿನಾಮವ ಕಡಕೋ ನೀ ದುಡಕೋ ನಿಖಿಲೇಶನ ಪ್ರೇಮ ಪ ಜನಮೆಚ್ಚಿ ವಂದಿಸಲು ನಿನಗೆ ಬಂದದ್ದೇನೋ ಜನದೂಷಿಸಳಿದರೆ ನಿನಗೆ ಕುಂದೇನೋ ಮನಮೆಚ್ಚಿ ನಡೆದು ಬಿಡದನುದಿನದಿ ಗಳಿಸುವಿ ನೀ ಚಿನುಮಯ ಮನುಮುನಿವಿನಮಿತರ ಧ್ಯಾನ 1 ಅಹುದೆಂದು ಇಹ್ಯದವರು ಭವಬಂಧ ತೊಲಗಿಪರೆ ಸಹಿಸದೆ ಅಲ್ಲೆಂದು ಭವಕೆ ನೂಕುವರೆ ಕುಹುಕಿಗಳ ಎದೆಮೆಟ್ಟೆ ಸಹಿಸಿಬಂದ ನಿಂದೆಗಳ ಪಡಿ ದೃಢದಿ ಅಹಿಶಾಯೆ ಅಡಿಭಕ್ತಿ 2 ದೂಷಣ ಭೂಷಣನುಮೇಷ ಸಮಭಾವಿಸಿ ನಾಶನೆನಿಸುವ ಜಗದ ವಾಸನೆಯ ಕಡಿದು ದಾಸಜನರೊಡೆಯ ಮಮಶ್ರೀಶ ಶ್ರೀರಾಮನಡಿ ಧ್ಯಾಸದೊಳಗಿಟ್ಟುಪಡಿ ಲೇಸೆನಿಪ ಮುಕ್ತಿ 3
--------------
ರಾಮದಾಸರು