ಒಟ್ಟು 1 ಕಡೆಗಳಲ್ಲಿ , 1 ದಾಸರು , 1 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಇಲ್ಲೆಂದೆ ಇಲ್ಲೆಂದೆ ಭಕ್ತಜನಕೆ ಭಯ ಇಲ್ಲೆಂದೆ ಇಲ್ಲೆಂದೆ ಪ ಪಾದ ಎಲ್ಲ ಸಂಪದವೆಂದು ಬಲ್ಲಂಥ ಭಕ್ತರಿಗೆಲ್ಲರೀತಿಲಿ ಭಯಅ.ಪ ವಂದಿಸಿ ನುಡಿದರೆ ಬಂತೇನೆಂದೆ ನಿಂದಿಸಿ ನುಡಿಯಲು ಕುಂದೇನೆಂದೆ ಸಿಂಧುಶಯನನ ತಂದು ಮಾನಸವೆಂಬ ಮಂದಿರದಿಟ್ಟವರಿಗೆಂದೆಂದಿರದು ಭಯ 1 ಬಡತನ ಬಂದರೆ ಮಿಡುಕೇನೆಂದೆ ಕಡುಸಿರಿಯಿರ್ದರೆ ನಿಜವೇನೆಂದೆ ಜಡಭವ ಕನಸೆಂದು ದೃಢವಹಿಸೊಡಲೊಳು ಮೃಡಸಿಧರನೆ ನಿಮ್ಮ ಆಡುವರಿಗೆ ಭಯ 2 ಪೊಡವಿಪ ಮೆಚ್ಚಲು ಕೊಡುವುದೇನೆಂದೆ ಕಡುಕೋಪಗೊಂಡರೆ ಕೆಡುವುದೇನೆಂದೆ ಪೊಡವೀರೇಳನು ಒಡಲೊಳಗಿಟ್ಟವನಡಿ ಬಿಡುದಿರುವರಿಗಿಡಿ ಭುವನದ ಭಯ 3 ಸತಿಸುತರಿದ್ದರೆ ಹಿತವೇನೆಂದೆ ಸತಿಸುತರಿಲ್ಲದಿರೆ ಅಹಿತವೇನೆಂದೆ ರತಿಪತಿಪಿತನಡಿ ಸತತದಿ ಗೂಡಿಟ್ಟು ನುತಿಪ ಭಕ್ತರಿಗೆ ಕ್ಷಿತಿಮೇಲೇತರ ಭಯ 4 ಭೂಷಣ ಮಾಡಲದೊಂದೇ ಅಂದೆ ದೂಷಣ ಮಾಡಲದೊಂದೇ ಅಂದೆ ಶ್ರೀಶ ಶ್ರೀರಾಮನ ಸಾಸಿರ ನಾಮದ ಧ್ಯಾಸದಿಟ್ಟವರಿಗೇಸು ಕಾಲದಿ ಭಯ 5
--------------
ರಾಮದಾಸರು