ವಿಮಲಮತಿಯ ಪಾಲಿಸಭವ
ಅಮಿತದಯಾರ್ಣವ ದೇವ ಪ
ದೀನಬಂಧು ಜ್ಞಾನಸಿಂಧು
ದೀನನೊಳು ನೀನೆ ನಿಂದು
ಹೀನಮತಿಯ ತರಿದು ತವ
ಧ್ಯಾನ ಸದಾನಂದದಿಡುವ 1
ಆಶಾಪಾಶಗಳನು ತುಳಿದು
ದೋಷರಾಸಿಗಳನು ಕಡಿದು
ಶ್ರೀಶ ನಿಮ್ಮ ಸಾಸಿರನಾಮವ
ಧ್ಯಾಸಕಿತ್ತು ಜ್ಞಾನ ಕೊಡುವ 2
ಸತ್ಯ ಶ್ರೀರಾಮ ನಿಮ್ಮ ಪಾದ
ಭಕ್ತಿಯಿಂದ ಬೇಡ್ವೆ ಸದಾ
ಚಿತ್ತ ಶುದ್ಧಿಗೈದು ಎನಗಾ
ನಿತ್ಯ ಮುಕ್ತಿ ನೀಡಿ ಬೇಗ 3