ಒಟ್ಟು 3 ಕಡೆಗಳಲ್ಲಿ , 1 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಗುಹ್ಯ ಗುರುತವು ಪೂರ್ಣ ಸುಳ್ಹವುದೋರಿಕೊಡುವ ನಿಜ ಸದ್ಗುರು ಕರುಣ ಧ್ರುವ ಜೀವ ಶಿವ ದಾವ ದೆಂದಿಳಿವ್ಯಾವ ನೋಡಿ ನಾವು ನೀವೆಂದು ಹ್ಯಾವ ಹೆಮ್ಮೆಯ ಹಿಡಿಯ ಬ್ಯಾಡಿ ಮಾವಮಕರ ಗುಣಬಿಟ್ಟು ಭಾವ ಭಕ್ತಿ ಮಾಡಿ ದೇವದೇವೇಶನ ದಿವ್ಯಪಾದಪದ್ಮ ಕೂಡಿ 1 ಬಾಯ್ದೆರೆದು ಬರೆ ಭ್ರಮೆಗೆ ಸಾಯಗೊಂಬುದು ಏನು ನ್ಯಾಯ ಜರೆದು ನೋಯಗೊಂಬುಪಾಯ ನಿನ್ನಾಧೀನ ಮಾಯ ಮರ್ಮಪಾಯವರಿದು ಧ್ಯಾಯಿಸೊ ನಿಧಾನ ಸೋಹ್ಯದೋರುತಿದೆ ನೋಡಿ ಸದ್ಗತಿ ಸಾಧನ 2 ಸಾವಧಾನವೆಂದು ಶ್ರುತಿ ಸಾರುತಿದೆ ನೋಡಿ ಗೋವಿಸುವ ವಿದ್ಯದೊಳು ಸಿಲುಕಿಬೀಳಬ್ಯಾಡಿ ಆವ ಪರಿಯ ಭಾವ ಕಾವ ದೈವ ನೋಡಿ ಜೀವ ಜೀವಾಗಿಹ್ಯ ಮಹಿಪತಿ ನಿಜಗೂಡಿ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ತಿಳಿದು ನೋಡೊ ನಿನ್ನೊಳಗೆ ನಿಜಬಣ್ಣ ಬೆಳಗಿನೊಳು ಬೆಳಗುದೋರುತಿಹ್ಯ ಜಗಜೀವನ ಧ್ರುವ ಒಳಗೆ ವಿಷ ಮ್ಯಾಲೆ ವೇಷ ಇಳೆಯೊಳ್ಯಾಕೆ ಸೋಗು ತಾಪ ತಿಳಿದು ನಿಜವಾಗು 1 ಕೈಯೊಳು ಜಪ ಮೈಯೊಳು ಕೋಪ ಬಾಯೊಳಗ್ಯಾಕ ಮಂತ್ರ ದೇಹ್ಯೊಳಗಿಹ್ಯ ಸೋಹ್ಯವ ತಿಳಿದು ಧ್ಯಾಯಿಸೊ ಸೂತ್ರಾಂತ್ರಾ 2 ಮುಸುಕಿನೊಳು ಹಸಕವಿಟ್ಟು ಠಸಕ ದೋರಬ್ಯಾಡೊ ಉಸುರಿನೊಳು ಹಸನಗೊಂಡು ಮೀಸಲು ಮನಮಾಡೊ 3 ಹಿಡಿದು ಜನ ಪಡೆದಗುಣ ಒಡನೆ ಕೂಡೊ ಸುಪಥ ಹಿಡಿದು ಗುರುಪಾದ ಮಹಿಪತಿ ನೋಡೊ ಸ್ವಹಿತ 4
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ತಿಳಿಯೊ ಮನವೆ ಯುಕ್ತಿಯ ಕಳಿಯೋ ನೀ ವಿಷಯಾಸಕ್ತಿಯ ಬಲಿಯೊ ಭಕ್ತಿಯ ಧ್ರುವ ಪಥ ಹೊಂದು ಈಗ ಹಣ್ಣು ಶರೀರಾಗದಾಗ ನಿನ್ನೊಳು ತಿಳಿ ಬ್ಯಾಗ 1 ಬಲವು ದೇಹಲಿದ್ದಾಗ ಬಲಿಯೊ ಭಾವ ಭಕ್ತಿಲೀಗ ನೆಲೆ ನಿಭಗೊಂಬುವ್ಹಾಂಗೆ ಸಲೆ ಮರೆಹೊಗು ಹೀಂಗ 2 ಬಂದ ಕೈಯಲಿ ಬ್ಯಾಗ ಹೊಂದು ಸದ್ಗುರು ಪಾದೀಗ ಎಂದೆಂದಗಲದ್ಹಾಂಗ ಸಂಧಿಸು ಘನ ಹೀಂಗ 3 ಸೋಹ್ಯದೋರುವ ಕೈಯ ಧ್ಯಾಯಿಸೊ ನೀ ಶ್ರೀಹರಿಯ ನ್ಯಾಯ ನಿನಗೆ ನಿಶ್ಚಯ ಇಹಪರಾಶ್ರಯ 4 ಗುರುಪಾದ ಕಂಡಾಕ್ಷಣ ಎರಗೊ ಮಹಿಪತಿ ಪೂರ್ಣ ಹರಿಯೊ ಅಹಂಭಾವಗುಣ ಬೆರಿಯೊ ನಿರ್ಗುಣ 5
--------------
ಕಾಖಂಡಕಿ ಶ್ರೀ ಮಹಿಪತಿರಾಯರು