ಒಟ್ಟು 5 ಕಡೆಗಳಲ್ಲಿ , 1 ದಾಸರು , 5 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಆವಧನ್ಯರೋ ಸುಖಿಸುವರು ಗೋಕುಲದವರು | ಗೋವಿಂದನೊಳು ಕ್ರೀಡಿಸುವರು ಗೋಗೋವಳರು ಧ್ರುವ ಭಾವಿಸೆ ಮಖದಲ್ಲಿದಾವ ಸಾರಾಯ ಕೊಂಬಾ | ದೇವಗೋಪಾಲಕರ ಕರಿಸಿ | ಬುತ್ತಿಯ ತರಿಸಿ | ಸವಿಸವಿದುಂಬುವರ ವೆರಸಿ | ಕೈಯೊಳಿರಿಸಿ | ಅವರತನ್ನಂಜಲೆಂಬ ದೂರಿಸಿ ನಲುವಾದರಿಸಿ 1 ಸಿರಿರಮಣಿಯ ಕೂಡ ಸರಸದಿ ಕುಚವಿಡಿದಾ | ಕರದಿನವೀನ ತೃಣವಾ ಕಡಿದು ಕವಳವಿಡಿದು | ಕರೆದು ಆವಿನ ಪೆಸರಾ ನುಡಿದು ಕುಡವಾವಿ ನಡೆದು | ಕರುಣದಿ ಚಪ್ಪರಿಸುವಾ ಜಡಿದು ಮೈಯನಡದು 2 ಅನಂದಿನ ಧ್ಯಾಯಿಸುವಾ ಮುನಿಮನದಲ್ಲಿ ಹೊಳೆಯಾ | ಚಿನುಮಯ ಗೋಪಿಯರಾವಳಿಯಾ ಯೋದ್ಧುಳಿಯಾ | ಅನುವಾಗಿದೋವರ್ತನಕಳಿಯಾ ವರ ಬಳಿಯಾ | ಘನಮಹಿಪತಿ ಸ್ವಾಮಿ ನೆಲಿಯಾ ಬೊಮ್ಮತಾ ತಿಳಿಯಾ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಜಯ ಜಯವೆನ್ನಿರೊ ಶ್ರೀ ಗುರುವಿಗೆ ದಯಾಸಿಂಧು ಶ್ರೀಸ್ವಾಮಿ ಸದ್ಗುರುವಿಗೆ ಧ್ರುವ ಗುಹ್ಯಗುರುತ ದೋರುವ ಗುರುಮಣಿಗೆ ಮಾಯರಹಿತ ನಿರಾಳ ನಿರ್ವಾಣೆಗೆ ತ್ರೈಲೋಕ್ಯವಂದಿತ ವರಮುನಿಗೆ ದಯಯುಳ್ಳ ಶ್ರೀ ದೇವಶಿಖಾಮಣಿಗೆ 1 ತ್ರಿಗುಣಾತೀತ ತಾರಕ ನಿರಂಜನಗೆ ಝಗಿ ಝಗಿಸುವ ಜಗನ್ಮೋಹನಗೆ ಜಾಗಿಸುವ ಜಗತ್ರಯ ಜೀವನಿಗೆ ಯೋಗಿಜನ ಧ್ಯಾಯಿಸುವ ನಿರ್ವಾಣೆಗೆ 2 ಜಯ ಜಯವೆನ್ನಿರೊ ಗುರುಮೂರ್ತಿಗೆ ಇಹಪರ ಪೂರ್ಣ ಪರಂಜ್ಯೋತಿಗೆ ಬಾಹ್ಯಾಂತ್ರ ಭಾಸುವ ಶ್ರೀಪತಿಗೆ ಮಹಿಪತಿಯ ಶ್ರೀ ಸ್ವಾಮಿ ಜಗತ್ಪಿತಗೆ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ದತ್ತವಧೂತ ಶ್ರೀ ಗುರು ಸಾಕ್ಷಾತ ನಿತ್ಯವಾಗಿಹ್ಯ ನಿಜ ನಿರ್ಗುಣನೀತ ಪ ನಿರ್ಗುಣ ನಿಶ್ಚಲ ಗಗನಾಕಾರ ಸುಗುಣದಲಿ ತಾನೆ ಸಹಕಾರ 1 ಸಹಕಾರನಹುದು ಸದ್ಗುರುನಾಥ ಬಾಹ್ಯಾಂತ್ರದಲಿ ತಾನೆ ಪ್ರಖ್ಯಾತ 2 ಪ್ರಖ್ಯಾತನಹುದು ತ್ರಿಗುಣರಹಿತ ಮುಖ್ಯಮುನಿಗಳಿಗೆ ಮೋಕ್ಷ ಸುದಾತ 3 ದಾತನಹುದು ತ್ರೈಲೋಕ್ಯದೊಳೀತ ಈತನೆ ವಿಶ್ವದೊಳಗೆ ದೈವತ 4 ದೈವತನಹುದು ದೇವಾದಿಗಳಾತ್ಮ ಮೂರ್ತಿ ಶ್ರೀಹರಿ ಸರ್ವಾತ್ಮ 5 ಹರಿ ಸರ್ವಾತ್ಮನಾಗಿಹ ನಿಜಪೂರ್ಣ ಪರಿಪರಿ ಆಗುವ ಅಗಣಿತಗುಣ 6 ಅಗಣಿತಗುಣ ಅಗಾಧ ಅಪಾರ ನಿಗಮಗೋಚರ ನಿರುಮಪ ನಿರ್ಧಾರ 7 ನಿರ್ಧಾರನು ನಿಜನಿಷ್ಟರಪ್ರಾಣ ಸಾಧಕರಿಗೆ ಸದ್ಗತಿ ಸಾಧನ 8 ಸಾಧನದೊಡೆಯನಹುದು ಶಾಶ್ವತ ಆದಿದೇವ ಸಕಲಾಗಮ ಪೂಜಿತ 9 ಪೂಜಿತ ಬ್ರಹ್ಮಾದಿಗಳ ಕೈಯ ಮೂಜಗದೊಳು ರಾಜಿಸುತಿಹ 10 ರಾಜಿಸುತಿಹ ತಾ ರಾಜರಾಜೇಂದ್ರ ಸುಜನರ ದೃಷ್ಟಿಯೊಳಿಡದಿಹ ಸಾಂದ್ರ 11 ಸಾಂದ್ರವಾಗಿಹನು ಸಾರ್ವಭೌಮ ಇಂದ್ರಾಧಿಕÀರೊಂದಿತ ಮಹಿಮ 12 ಮಹಿಮನಹುದು ಮುನಿಜನ ಮಂದಾರ ಧ್ಯಾಯಿಸುವರ ನಿಜ ಸಾಕ್ಷಾತಾರ 13 ಸಾಕ್ಷಾತಾರ ಶ್ರೀಗುರು ಜಗದೀಶ ಮೋಕ್ಷಾಧಿಕರಿಗಳಾತ್ಮ ಉಲ್ಹಾಸ 14 ಉಲ್ಹಾಸವೆ ನಿಜ ವಸ್ತುವೆ ತಾನು ಕಲ್ಪದ್ರುಮ ನಿಜ ಕಾಮಧೇನು 15 ಕಾಮಧೇನುವಾಗಿ ರಕ್ಷಿಸುವ ಬ್ರಹ್ಮನಿಷ್ಠರ ಹೃದಯದಲಿ ಭಾಸಿಸುವ 16 ಭಾಸುವ ಭಾಸ್ಕರಕೋಟಿ ಪ್ರಕಾಶ ಋಷಿ ಮುನಿಗಳ ನಿಜಮಾನಸ ಹಂಸ 17 ಹಂಸನಾಗಿ ವಿಶ್ವಂಭರಿತ ಸೂಸುವ ಸರ್ವಾಂತ್ರಲಿ ಅನಂತ 18 ಅನಂತ ಕೋಟಿ ಬ್ರಹ್ಮಾಂಡನಾಯಕ ಅನುಭವಿಗಳಿಗೆ ದೋರುವ ಕೌತುಕ 19 ಕೌತುಕದೋರಿದ ಕರುಣದಲ್ಯನಗೆ ಜೀವಪಾವನಗೈಸಿದ ಜಗದೊಳಗೆ 20 ಜಗದೊಳು ಸ್ತುತಿಸುವೆನು ಅನುದಿನ ಶ್ರೀಗುರು ದತ್ತವಧೂತ ಪೂರ್ಣ 21 ಪೂರ್ಣ ಸ್ಮರಿಸುವೆನು ಮನದೊಳು ನೋಡಿ ಪುಣ್ಯ ಪ್ರಭೆಯ ನಿಜ‌ಘನ ಒಡಗೂಡಿ22 ಒಡಗೂಡಿದ ನಿಜಾನಂದದ ಗತಿಯು ಕ್ಷಿತಿಯೊಳು ಕೊಂಡಾಡಿದ ಮಹಿಪತಿಯು 23
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಮನೋಮಲಹರವಾಗುದು ಗುರು ಬೋಧದಿಂದ ತನ್ನ ತಾಂ ತಿಳಿಯಲು ಶುದ್ಧ ಬುಧ ಆಹಿರಿ ಧ್ರುವ ಅಂತರಂಗವು ನೋಡಿ ಜರೆವದು ಬಹಿರವಿ ಬೆರೆದು ನೋಡಿಲು ಘನವಸಂತವು ಗುರುಹಸ್ತ ಸ್ಪರ್ಶದಿಂದಲಿ ಕಲ್ಯಾಣ ಅರಿಯಲಾತ್ಮಾನುಭವ ಮುಕ್ತಿಗೆ ದಾರಿಯಯ್ಯ 1 ಸಾಧನವ ಮಾಡಿ ಸದ್ಗತಿಯಕಾಂಬೋದವು ಧನ್ಯ ಧನ್ಯವಾಹುದು ಙÁ್ಞನುಪದೇಶಲಿ ತಿಳಿಯಲಗಾಧ ಬಳಿಲಿ ಶ್ರೀಗುರುವಿನ ಸಕಲಾಭರಣ ಇದೇ ಸದ್ಗುರು ಕೃಪೆಯಯ್ಯ2 ಧ್ಯಾಯಿಸುವ ಆತ್ಮಾರಾಮ ಕ್ರಿಯವರಿದು ಪಯಸ್ವನಿ ಜಿಹ್ವದಲಿ ಗುರುಸ್ಮರಣೆಯು ನಾಟಿ ಗುರುಪಾದ ಹೃದಯದಲಿ ಸಾಳಂಗವನು ಮಾಡಿ ಪಾವನ್ನವಾದ ಮಹಿಪತಿ ಗುರುವಿನ ಪಾಡಿ3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಸ್ವಾಮಿ ಸದ್ಗುರುವೆ ನಿಮ್ಮ ಪಾದಕಮಲಕೆರಗುವೆ ಧ್ರುವ ಹಿಂಡುದೈವಕೆ ಪ್ರಚಂಡಮೂರ್ತಿ ಕೊಂಡಾಡುವ ನಿಮ್ಮ ಅಖಂಡ ಕೀರ್ತಿ 1 ಭಾವಭೋಕ್ತ ದೇವೋತ್ತಮ ಸೇವಿಸುವೆ ನಿಮ್ಮ ದಿವ್ಯನಾಮ 2 ಜಯ ಜಯ ಆನಂದ ಕಂದ ಧ್ಯಾಯಿಸುವೆ ನಿಮ್ಮ ಪಾದಾರವಿಂದ 3 ದಯಾಸಿಂಧು ದೇವ ದೇವ ಕಾಯೋ ಮಹಿಪತಿ ಪ್ರಾಣಜೀವ 4
--------------
ಕಾಖಂಡಕಿ ಶ್ರೀ ಮಹಿಪತಿರಾಯರು