ಒಟ್ಟು 3 ಕಡೆಗಳಲ್ಲಿ , 3 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕಂಡೆ ಕಂಡೆ ಮುಚುಕುಂದವರದ ಮು- ಕುಂದ ಮೂಡಲಗಿರಿ ಗೋವಿಂದನ ಪ ಶರಧಿ ಬಿಟ್ಟು ಈ ಗಿರಿಯಲ್ಯಾಕೊ ನೀ ತೆರೆದ ಕಣ್ಣು ನಾರುವಮೈಗೆ ಬಿಳಿಯ ಕರ್ಪುರ ಪರಿಮಳದ ಸುವಾಸನೆಗೆ ಜರಿದು ಬಂದೆ ನಿನ್ನ ಪರಿಯ ನಾ ಬಲ್ಲೆ 1 ಛಲನ ಮೇಲೆ ನಿನ್ನ ಛಲವು ಯಾಕೊ ನೀ ಸುರರಸುರರ ಕೈಯಲಿ ಸಿಕ್ಕು ಭಾರ ತಿರುಗನುಪಕಾರ ಗಿರಿರಾಜನು ನಿನ್ನ ಸರಿಯೆಂದೆನಿಸುವ 2 ಬಲ್ಲೆ ಬಲ್ಲೆ ಕೋರ್ಹಲ್ಲುಗಳಿಂದ ಮೆಲ್ಲುತ ಬೇರನವಲ್ಯವನು ಎಲ್ಲ ನೀಗಿ ದಧ್ಯಾನ್ಯ ನೈವೇದ್ಯ ಚೆಲ್ವ ಧರಣಿಪತಿ ಬಲ್ಲಿದ ವರಾಹನ 3 ಕಂಬ ಒಡೆದು ಕರುಳ್ಹಾರವಲ್ಲದೆ ಕಂಡು ಅಜನ ಕಂಠಾಭರಣ ನೊಂದ ಮೈಗೆ ಪುನುಕಾಪು ಮಜ್ಜನ ತಾಂಬೂಲ ಮಂಚ ಸುಪ್ಪತ್ತಿಗೆಶಯನ 4 ದಾನ ಬೇಡಿದ ನೆಲ ಭೂಮಿಯ ಬಿಟ್ಟುರ- ಗಾದ್ರಿಯಲಿರುವುದು ಉಚಿತವಲ್ಲ ಸಾಧಿಸಿ ಬಲಿಯ ಪಾತಾಳಕೆ ಮೆಟ್ಟಿದ ಪಾದ ತೋರದಲಾಚ್ಛಾದನ ಮಾಡಿದಿ 5 ಪೊಡವಿದಾನ ನೆಲಬಿಡದೆ ಕೊಟ್ಟು ಅಡವಿ ಗುಡ್ಡದಲ್ಲಾವಾಸ ಕೊಡಲಿಪಿಡಿದು ತನ್ನ ಹಡೆದ ಮಾತೆಶಿರ ಕಡಿದ ಕೈ ಕೆಳಗೆ ಮಾಡ್ಹಿಡಿದಸುರನ 6 ಹೆತ್ತಜನಕ ಮನೆಬಿಟ್ಟು ಹೊರಡಿಸೆ ಉಟ್ಟ ನಾರ್ವಸÀ್ತ್ರ ಸಹಿತಾಗಿ ಲಕ್ಷ್ಮಿ ಲಕ್ಷಿಟ್ಟು ಬಂದ್ವಕ್ಷ ಸ್ಥಳದಲ್ಲಿರೆ ಅಷ್ಟಪದವಿಗಧಿಕಾರಿ ಎನಿಸಿದಿ 7 ಗೊಲ್ಲರೇಶ ಎಲ್ಲರಿಗುತ್ತಮನೆಂದು ಬಲ್ಲಿದಮುನಿ ಪಾದದ್ವೊದೆಯೆ ಕೊಲ್ಲಾಪುರ ಮನೆಮಾಡೆ ಮಹಾಲಕ್ಷುಮಿ ನಿಲ್ಲದೆ ಬಂದ್ವಾಲ್ಮೀಕವ ಸೇರಿದೆ 8 ಸಾರಿ ಹೇಳಿ ನೀ ನಿಗಮವ ನಿಂದ್ಯಮಾಡಿ ನಾರಿಯರ ವ್ರತವಳಿದು ಮಾರಜನಕ ಅಭಿಮಾನ ಬಿಟ್ಟರೆ ಅ- ಪಾರಮಹಿಮ ನಿನ್ನ ನೋಡಿ ನಗುವರೊ 9 ದೊರೆ ನಿನ್ನ ದರುಶನಕೆ ತ್ವರಿತದಿ ಜನರು ಮೂವತ್ತು ಗಾವುದ ಮೂರ್ಹೆಜ್ಜೆಯ ಮಾಡಿ ತುರಗನೇರ್ಹಾರಿಸಿ ಗಿರಿಯ ಬಿಟ್ಟೂ ್ಹೀದರೆ ವರದ ವೆಂಕಟನ್ಹಿಂದೆ ತಿರುಗುವರ್ಯಾರೊ 10 ನಿನ್ನ ನಾಮವ ತಂದೆನ್ನ ಜಿಹ್ವಕೆ ಚೆನ್ನವಾಗಿ ಬಂಧನ ಮಾಡೆ ಘನ್ನ ಮಹಿಮ ಭೀಮೇಶಕೃಷ್ಣ ಬಂದು ಕಣ್ಣಿಗೆ ಸುಳಿವ ಪ್ರಸನ್ನವೆಂಕಟನ 11
--------------
ಹರಪನಹಳ್ಳಿಭೀಮವ್ವ
ಬಲುಕಷ್ಟ ಬರಗಾಲ ಬಂದಿತಯ್ಯ ವೈರಿ ಜನಕೆ ಬರಬಾರದಯ್ಯ ಪ ಶಿಶುಗಳಿಗೆ ಹಾಲಿಲ್ಲ ಪಶುಗಳಿಗೆ ಮೇವಿಲ್ಲ ಉಸರಲು ಬಾಯಿಲ್ಲ ವೃದ್ಧ ಜನಕೇ ಅಶನ ವಸನಕ್ಕಾಗಿ ವ್ಯಸನ ಪೂರಿತರಾಗಿ ನಿಶಿ ಹಗಲು ಜನರೆಲ್ಲ ಉಸುರು ಹಾಕುತಲಿಹರು 1 ಧÀವಸಧ್ಯಾನ್ಯದ ಬೆಲೆಯು ದಿವಸ ದಿವಸಕೆ ಮಹಾ ಪ್ರವಾಹದಂದದಿ ವೃಧ್ಧಿಯಾಗುತಲಿಹುದು ಅವಸರಕೆ ಬೇಡಿದರೆ ಲವಣದೊರೆಯದು ಮೇಲೆ ಶಿವಶಿವಾಯೆಂದು ಭವಣಿಯನನುಭವಿಸುವರು 2 ಶಾರೆ ಕಾಳು ಭಿಕ್ಷೆಕೆರೆಯುವದಕೆ ಗತಿಯಿಲ್ಲಾ ಶರಗೊಡ್ಡಿ ಕರೆದರೂ ಕೊಂಡರೊಬ್ಬರುಯಿಲ್ಲಾ ಅರೆಹೊಟ್ಟಿಯುಂಡು ಹರಕು ಬಟ್ಟಯನುಟ್ಟ ಮರಮರನೆ ಮನದೊಳಗೆ ಮರುಗುವರು ಬಡಜನರೂ 3 ಜೋಳನವಣಿ ಸಜ್ಜಿ ಕಾಳಿಗೇರಿದ ಬೆಲೆಗೆ ತಾಳಿ ಮನದಲಿ ವ್ಯಥಿಯ ಕೂಲಿ ಜನರು ಕೂಳಿಗಾಗದು ಎಂದು ಬಾಳುವೆಯ ಗೈಯುವಂಥ ಕೂಲಿವಲ್ಲೆವು ಎನುತ ಗೋಳಿಡುತಲಿಹರು 4 ಕಡಲೆ ಕಾಣದ ಹರಿಯು | ಕಡಲೊಳಡಗಿದ ಮೃಡನು ಸೊಡರೆಣ್ಣೆಸಿಗದೆಂದು ಸುಡುಗಾಡು ಸೇರಿದಾ ಅಡಕಿ ಸಕ್ಕರೆ ಗೋಧಿ ಕೊಡುವ ಬೆಲೆಯನು ಕೇಳಿ ಮಿಡುಕಿ ಮನದೊಳು ಕಣ್ಣ ಬಿಡುತಿಹರು ಸುಮನಸರು 5 ಮಳೆರಾಯ ಮುನಿದುದಕೆ ಹೊಲ ಬೆಳೆಯದಿದ್ದುದಕೆ ಬಳುತಿಹವು ಬಡಜನರ ಕಣ್ಣಿಂದ ನೀರು ಜಲಹರಿಸುವದು ನೋಡಿ ನಲಿದಾಡಿ ನಗುತಿಹಳುಕ್ಷಾಮದೇವಿ 6 ಕ್ಷಾಮದೇವಿಗೆ ತನ್ನ | ಧಾಮಸೇರುವಂತೆ ನೀಡಿ ಮಾಡಿ ಸಾಕು ನಮ್ಮ ಸಕಲ ಜನಕೇ | ಕ್ಷೆಮ ಸೌಖ್ಯವಗರೆದು | ಪ್ರೇಮದಲಿ ಪೊರೆ ಕರವ ನಾ | ಮುಗಿದು ಪ್ರಾರ್ಥಿಸುವೆ ಶಾಮಸುಂದರ ಸ್ವಾಮಿ 7
--------------
ಶಾಮಸುಂದರ ವಿಠಲ
ಮಾನವಜನ್ಮ ದೊಡ್ಡದು - ಇದ |ಹಾನಿ ಮಾಡಲು ಬೇಡಿ ಹುಚ್ಚಪ್ಪಗಳಿರಾ ಪ.ಕಣ್ಣು ಕೈಕಾಲ್ಕಿವಿ ನಾಲಗೆ ಇರಲಿಕ್ಕೆ |ಮಣ್ಣುಮುಕ್ಕಿ ಮರುಳಾಗುವರೆ ||ಹೊನ್ನು ಹೆಣ್ಣಿಗಾಗಿ ಹರಿನಾಮಾಮೃತವನು |ಉಣ್ಣದೆ ಉಪವಾಸವಿರುವರೇನೋ 1ಕಾಲನವರು ಬಂದು ಕರಪಿಡಿದೆಳೆವಾಗ |ತಾಳು ತಾಳೆಂದರೆ ಕೇಳುವರೆ ? ||ವೇಳೆ ಹೋಗದ ಮುನ್ನ ಧರ್ಮವ ಗಳಿಸಿರೊ |ಸುಳ್ಳಿನ ಸಂಸಾರ ಸುಳಿಗೆ ಸಿಲುಕಬೇಡಿ 2ಏನು ಕಾರಣ ಯದುಪತಿಯನು ಮರೆತಿರಿ |ಧ್ಯಾನ್ಯ - ಧನ -ಸತಿ - ಸುತರಿವು ನಿತ್ಯವೆ? ||ಇನ್ನಾದರು ಶ್ರೀ ಪುರಂದರವಿಠಲನ |ಚೆನ್ನಾಗಿ ಭಜಿಸಿ ನೀವ್ ಸುಖಿಯಾಗಿರಯ್ಯ 3
--------------
ಪುರಂದರದಾಸರು