ಒಟ್ಟು 5 ಕಡೆಗಳಲ್ಲಿ , 5 ದಾಸರು , 5 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕಮಲ ಭಜಿಸೋ ಮೈಲಾರ ಲಿಂಗನ ಪ ಪುರಹರ ಸ್ವರೂಪನೆ ಎಂದು ಧ್ಯಾನಿಸೋ ಪಾತಕ ತಿಮಿರ ಭಾಸ್ಕರನೆಂದು ನೀ ಸ್ಮರಿಸೋ ಶಿರಬಾಗಿ ನಮಿಸೋ ಅ.ಪ ತುರಗವಾಹನವೇರಿ ಬರುತಿಹನ ಧರೆಯೊಳಗೆ ಮೈಲಾಪುರ ಸುಮಂದಿರನೆಂದು ಕರೆಸುವನಾ ಹೊನಕೆರೆಯ ಜಲದಭಿಷೇಕದಿಂದ ರ್ಚನೆಯ ಕೊಂಬುವನ ಶರಣರನ ಪೊರೆವನ 1 ಕಾಲಕಾಲದಿ ಪಾಲಕಿಯ ಉತ್ಸವದಿ ಮೆರೆಯುವನ ಅನು ಗಾಲಭಕುತರ ಮ್ಯಾಳವನು ಪಾಲಿಸಲು ಬಂದಿಹನ ಕೇಳಿ ದ್ವರಗಳ ಕೊಡುವ ಘನ ತ್ರಿಶೂಲ ಧರಿಸಿಹನ ಮಾಳಸಾಕಾಂತನ 2 ನಿಷ್ಠೆಯಿಂದಲಿ ಭಜಿಪ ಭಕುತರನ ರಕ್ಷಿಸಲು ಕೊಪ್ಪರ ಕಟ್ಟಿಯಲಿ ಸೇವೆಯನ್ನು ಕೊಳುತಿಹನ ಸಿರಿ ವಿಷ್ಣು ಭಕುತರ ಮನೆಗಳಲಿ ಪೂಜೆಯನು ಕೊಂಬುವನ ಇಷ್ಟ ಪ್ರದಾತನ3 ಸಂಚರಿಸುತಲಿ ದಿನಕರನು ಮಕರದಿ ಬರಲು ಸಂಕ್ರಮಣ ಉತ್ಸವದಿ ನೋಡಲು ನೆರೆದ ಬಹು ಜನ ರಿಂದ ಸೇವಿತನ ಗಿರಿಶಿಖರ ಗುಂಡಿನ ಮೇಲೆ ದೀಪೋತ್ಸವದಿ ರಾಜಿತನ ಮಹಿಮಾನ್ವಿತನ 4 ವಿನುತ ಶುಭಚರಣ ಸರೋಜ ಕಾರ್ಪರ ನಾರಸಿಂಹನ ಒಲಿಮೆ ಪಡೆ ದಿಹನಾ ರವಿವಾರ ವಾರದಿ ಮಾರ್ತಾಂಡದೇವನ5
--------------
ಕಾರ್ಪರ ನರಹರಿದಾಸರು
ಜಡಮತಿ ಮನುಜ ಡಂಭವ ತ್ಯಜಿಸೊ ದೃಢದಿಂದ್ಹರಿಪಾದ ಸತತದಿ ಭಜಿಸೋ ಪ ಒಡಲೊಳ್ವಂಚಕನಾಗಿ ಹೊರಗೆ ಬಹುಮಾನವ ಪಡೆದರೆ ಹರಿ ನಿನ್ನ ಮೆಚ್ಚುವ ನೇನೋ ಅ.ಪ ನಿರುತ ಮಾನಸದೊಳ್ ಮನೆಮಾಡಿಹ್ಯ ಪ್ರಭು ಮರೆವೆ ಪರದೆ ತೆಗೆದಿರವಿಟ್ಟು ನೋಡೋ ಅರಿಯದ ನರರು ನಿನ್ಹಿರಿಯನೆನಲು ಕರಿವರದ ಕಮಲನಾಭನರಿಯನೆ ಮರುಳೆ 1 ಮರುಳನೆ ದುರಿತವ ಸ್ಮರಿಸವನಿತರಲಿ ಅರಿಯುವ ಹರಿ ನಿನ್ನಂತರದಲಿ ನಿಂದು ಮರುಳುಮತಿಯ ನೀಗಿ ಹೊರಒಳಗೊಂದಾಗಿ ಅರೆಲವನಿಲ್ಲದೆ ಪರಮನಂ ಧ್ಯಾನಿಸೋ 2 ಧರೆಮೆಚ್ಚಿ ನಡೆದರೆ ಬರುವುದೇನೆಲೊ ನಿನ ಗ್ಹರಿಮೆಚ್ಚಿ ನಡೆವುದೆ ಪರಮಸೌಭಾಗ್ಯ ಧರೆಯಾಣ್ಮ ಶ್ರೀರಾಮ ಮರೆಯಾಗುವನೆಲೋ 3
--------------
ರಾಮದಾಸರು
ಧ್ಯಾನಿಸೋ ಮಾನವಾ ದೀನೋದ್ಧಾರಿ ವಿಜಯದಾಸರನಾ | ದೇವಮಾನಿತರು ಧೇನು ಸಮ ಪ. ಭೃಗುಮುನಿಯೆ ಈ ಜಗದಿ | ಸಂಜನಿಸಿ ಮದಪಾಲಿಸಿ ಘೋರ ಭವಕ್ಲೇಶ ಪರಿಹರಿಸಿ ಸುಖವಾ ಬೀರಿದಾ1 ಗುರುಪವನ ಶಾಸ್ತ್ರವ ಕನ್ನಡದಿ ವಿರಚಿಸಿ | ಜ್ಞಾನಪಥ ತೋರಿ ಶಿರಿವದನ ಮಹಿಮೆ ಸಾರಿದಾ2 ಶ್ರೀವರ ಶಾಮಸುಂದರನ ಸ್ತವಿಸಿ ಸಂಸೇವಿಸಿ | ಭಾವದಲಿ ನೋಡಿ ನಲಿದವರು ಕರುಣಾಶಾಲಿ 3
--------------
ಶಾಮಸುಂದರ ವಿಠಲ
ಮರುಳು ಮನುಜ ಹರಿಯ ಧ್ಯಾನಿಸೋ ಸ್ಥಿರವಿಲ್ಲವೀದೇಹ ಪ ಬರಿದೆ ಹೊನ್ನು ಮಣ್ಣಿಗಾಗಿ ಇರುಳು ಹಗಲು ವ್ಯರ್ಥವಾಗಿ ಕರೆಕರೆಯನು ಪಡುವೆಯಲ್ಲೊ ಅ.ಪ ತಂದೆ ತಾಯಿ ಸತಿಯು ಸುತರು ಬಂಧು ಬಳಗಗಳಾರಿದ್ದರು ಕರ್ಮ ತಪ್ಪಿಪರಾರು ಸಂದೇಹವಿಲ್ಲೆಂದು ತಿಳಿದು 1 ಜನರು ನಿನ್ನ ಸೇರುತಿಹರು ಕೊನೆಗೆ ಯಾರು ದಿಕ್ಕು ಕಾಣೆ ಮನೆಯಬಿಟ್ಟು ಹೋಗುವಾಗ 2 ಗುರುರಾಮವಿಠಲನಂಘ್ರಿ ಸ್ಮರಿಸಿ ಸ್ಮರಿಸಿ ಹರುಷ ಪೊಂದಿ ಪಾಪಿಯೆನ್ನಿಸಿಕೊಳ್ಳಬೇಡವೊ 3
--------------
ಗುರುರಾಮವಿಠಲ
ಯಾಕೆ ಮೈ ಮರೆತಿದ್ದೆ ಹೇಳೋ ಎಲೆ ಮರುಳೆ ಜೋಕÉ ತೀರೀತು ನಿನ್ನ ಬಾಳು ಪ ನಿಟ್ಟೆಲುಗಳಿಂದ ಕೈ ಕಾಲ್ಗಳೆಂಬುವನು ಮಾಡಿ ಚಿಟ್ಟೆಲುಗಳನು ಸಂದಕೂಡಿ ಪಟ್ಟಿನಲ್ಲಿ ತನುಪುರವ ಕಟ್ಟಿದರು ನರದಿಂದ ಪಟ್ಟಣವ ನಿರ್ಮಿತವ ಮಾಡಿ ಅಷ್ಟಪುರ ಕಲ್ಲಲ್ಲಿ ನವಕವಾಟವ ರಚಿಸಿ ದುಷ್ಟದುರ್ಜನರೆಲ್ಲ ಕೂಡಿ ಕಟ್ಟಿದರು ಜೀವನಿಗೆ ಇವರ ಕೂಡಾಡಿ 1 ರಕ್ತಮಾಂಸವು ಚರ್ಮಪೂಡಿ ಮತ್ತೆ ಮಲ ಮೂತ್ರ ಕ್ರಿಮಿ ಕೀಟ ರುಜೆಬಾಧೆಯಲಿ ವಿಸ್ತರದಲಿದಕೆÉ ನಲಿದಾಡಿ ವ್ಯರ್ಥದಲಿ ದಿನವ ನೀಗಾಡಿ ಅಸ್ಥಿರದ ದೇಹವನು ನಚ್ಚಿಭವ ಶರಧಿಯೊಳು ಕುಸ್ತರಿಸಿ ಬಿದ್ದು ಈಜಾಡಿ 2 ಹೊಲಸು ಹೆಬ್ಬಡಿಕೆ ನಾರುವನರಕ ಕೀವು ಕ್ರಿಮಿ ಯಲು ನರಂಗಳು ಮಜ್ಜೆ ಮಾಂಸ ಕೊಳಕು ನಾರುವ ಹಡಿಕೆಗೆಳಸುತಿಹ ನಾಯಂತೆ ಬಲಿದಿಹುದು ನಿನ್ನ ಮೇಲಂಶ ಬಳಲಿ ಬಸವಳಿದೆಲೋನ ಪುಂಸ ಕೊಳೆಯ ಮೇಧ್ಯದ ಪುಂಜ ತನುವಿದನು ನೆರೆನಂಬಿ ಫಲವಿಲ್ಲ ಹರಿಯಧ್ಯಾನಿಸೋ ಪರಮಹಂಸ 3 ಸತಿ ಹೊಂದುವರು ನಿನ್ನ ಕಣ್ಣಾರೆ ಕೇಳ್ವೆ ಕಿವಿಯಿಂದ ಗುರಿಯಾಗಿ ಇಂದಿರೇಶನ ಪೂಜಿಸಲು ನಾಕೈಯಾರೆ4 ಇದರೊಳಗೆ ಬಾಲ್ಯಕೆನೊರ್ಯ ಯೌವ್ವನವೆಂಬ ಉದಯಾಸ್ತಮಾನ ಪರಿಯಂತರವು ಸುದತಿ ಸುತರಲಿ ಮೋಹವಿರಿಸಿ ದಣಿಯದಿರು ಮನವ ನೆರೆನಿಲಿಸಿ ಲಕ್ಷ್ಮೀರಮಣನನು ಹೃದಯದೊಳುಸ್ಮರಿಸಿ 5
--------------
ಕವಿ ಪರಮದೇವದಾಸರು