ಬಾರೋ ಯಾದವ ಕುಲಚಂದ್ರ ತೋರೊ ಮುಖಾಂಬುಜವ
ಕಾರುಣ್ಯ ಪೂರ್ಣನೆ ಬಾರೊ ಯಾದವ ಕುಲಚಂದ್ರ ಪ
ಮಾರಾರಿ ದಾನವ ಭೀತಿಯ ಪೊಂದಿರೆ
ನಾರೀರೂಪದಿಂದೈದಿ ಪಾಲಿಸಲಿಲ್ಲವೆ 1
ದುರುಳ ದುಶ್ಯಾಸನ ತರಳೆ ದ್ರೌಪದಿ ಸೀರೆ
ಸೆರಗನು ಸೆಳೆಯಲು ಕರುಣಿಸಲಿಲ್ಲವೆ 2
ಪಾಲಿಸು ದೇವನೆ ಕಾಲಕಂಧರಪ್ರಿಯ
ಬಾಲ ಪ್ರಹ್ಲಾದ ವರದ ಲೀಲಾ ನರಹರಿ ರೂಪ 3
ಮೌನಿ ಮಾನಸಪ್ರಿಯ ಗಾನರೂಪನೆ ಹರೆ
ಧೇನುನಗರ ದೊರೆ ಧ್ಯಾನಿಸುವೆನೊ ಶೌರೆ 4