ನೀನಾಗಿ ನಿನ್ನೊಳಗಿರುತಿರುವನ
ಧ್ಯಾನಿಸುತಿರು ಜೀವಾ ಎಲ್ಲ ಅವನ ಸೇವಾ ಪ
ಜ್ಞಾನಿಗಳೊಡನಾಡದೆ ಸಂಸಾರದಿ
ನಾನೆಕರ್ತನೆಂದು ನರಕ ಪೊಂದುವೆ ಯಾಕೆ ಅ.ಪ
ಜಾಗುಮಾಡದೆ ನಿರತಾ
ನಾಗಶಯನ ವಿಶ್ವತೈಜ ಪ್ರಾಜ್ಞ
ನಾಗಿನಿನಗೆ ಕೊಡುವನು ಎಂದರಿಯೊ 1
ಬಿಂಬನವನು ಪ್ರತಿಬಿಂಬನು ನೀನೆಂದು
ಹಂಬಲಿಸುವುದುಚಿತಾ
ಅಂಬುಜಾಕ್ಷಗರ್ಪಿಸಿ ಸುಖಿಯಾಗೊ2
ಸ್ವಾಭಾವ್ಯದಿ ಸತತಾ
ವಿಭೇದ ಲ-
ಕ್ಷ್ಮೀಭೂರಮಣ ಶ್ರೀಗುರುರಾಮವಿಠಲನು 3