ಒಟ್ಟು 3 ಕಡೆಗಳಲ್ಲಿ , 3 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಆತ್ಮನಿವೇದನೆ ನೆಂತು ಪೂಜಿಸಿದೆನೈ ನೀರಜಾಕ್ಷ ಪ ಕಂತುಪಿತ ಎನ್ನ ನೀ ಕಾಯ್ವೆಯೆಂತೊ ಕಮಲಾಕ್ಷ ಅ.ಪ ಗಂಗೆಯುದಕದಿ ಮಿಂದು ಸಿಂಗರದ ಮಡಿಯುಟ್ಟು ಮಂಗಳದ ನಾಮ ಮುದ್ರೆಗಳ ಧರಿಸೀ ಅಂಗಕರಣಗಳ ಶೋಧಿಸಿ ನ್ಯಾಸ ಮಂತ್ರದಿಂ ದಂತ ರಂಗದಿ ಬಿಂಬಮೂರ್ತಿಯ ಚಿಂತಿಸಿದೆನೇ1 ನಿರ್ಮಲೋದಕದಿಂದ ಅಭಿಷೇಚನವ ಗೈದು ನಿರ್ಮಾಲ್ಯ ತೀರ್ಥವನು ಸೇವಿಸಿದೆನೇ ಮರ್ಮವರಿತಾದಿಮೂರ್ತಿಯೆ ನಿನ್ನ ಬಿಂಬವನು ನಿರ್ಮಲಾಂತಃಕರಣ ಪೀಠದಲಿ ನಿಲಿಸಿದೆನೇ 2 ಶುಭ್ರವಸ್ತ್ರಗಳ ಪರಿಮಳ ಗಂಧ ಪುಷ್ಪಗಳ ನಘ್ರ್ಯ ತುಳಸಿಗಳನರ್ಪಿಸಿ ನಲಿದೆನೇ ಅರ್ಭಕನು ನಾ ಕನಕರತ್ನಾಭರಣಗಳನು ಅಬ್ಧಿ ತನಯಳರಮಣ ನಿನಗೆ ಅರ್ಪಿಸಿದೆನೇ 3 ಧೂಪದೀಪಗಳಿಂದ ವಾದ್ಯ ವೈಭವದಿಂದ ರಾತ್ಮನೆಂದರಿತು ನೈವೇದ್ಯವರ್ಪಿಸಿದೆನೇ 4 ವಿವಿಧ ಖಾದ್ಯಗಳಲ್ಲಿ ವಿವಿಧ ರಸ ರೂಪದಲಿ ವಿವಿಧ ಸಾನ್ನಿಧ್ಯಗಳ ಧ್ಯಾನಿಸಿದೆನೇ ಭವರೋಗಪೀಡಿತನು ನಾ ನಿನ್ನ ಹವಣರಿತು ಸುವಿಹಿತ ವಿಧಿಯಂತೆ ಪೂಜಿಸುವ ಪರಿಯೆಂತೋ5 ಸರ್ವಶಕ್ತನು ನೀನು ಸರ್ವಜ್ಞಪತಿ ನೀನು ಸರ್ವದಾ ತೃಪ್ತನೋ ನಿಗಮವೇದ್ಯಾ ಸರ್ವಭೂತಾಂತರ್ಗತನು ನಿನಗೆ ಉಣಬಡಿಸೆ ಗರ್ವಿಶಠನಜ್ಞತಮನೆನಗೆ ವಶವೇ 6 ವೇದಶಾಸ್ತ್ರಗಳ ಗಂಧವನರಿಯೆ ಹರಿಯೆ ನಿನ ಸಾದರದಿ ನಮಿಪೆ ಪೊರೆ ರಘುರಾಮವಿಠಲ 7
--------------
ರಘುರಾಮವಿಠಲದಾಸರು
ಏನು ಧನ್ಯನೋ ನಾನೇನು ಮಾನ್ಯನೋ ಪ ದೀನಪಾಲಗಿರಿಯಪರಮಕರುಣಾನಿಧಿಯಕನಸೊಳ ಕಂಡೆನು ಅ.ಪ ಬಾಲನಾಗಿ ಮುದ್ದುಮುಖದೆ ಶ್ರೀಲತಾಂಗಿಯೊಡನೆಬಂದು ಲೋಲತೆಯಿಂ ಮುಗಳುನಗೆಯ ಲೀಲೆಯನ್ನು ತೋರಿಸಿದನ 1 ನಿನ್ನ ತಂದೆ ತಾಯ್ಗಳಾರು ಎನ್ನಲಾಗ ನೀನುಪಿತನು ಎನ್ನ ತಾಯಿಜಗನ್ಮಾತೆ ಸನ್ನುತಕೇಳ್ ಪ್ರವರವೆಂದೆ2 ದುರಿತದೂರ ಶ್ರೀನಿವಾಸ ಶರಣಜನರ ಪೊರೆವ ತ್ರಾಣ ಕರವ ಮುಗಿದು ಧ್ಯಾನಿಸಿದೆನು 3
--------------
ಶಾಮಶರ್ಮರು
ಶ್ರೀ ಮದಾಚಾರ್ಯ ಮುನಿ ಪ್ರೇಮದಲಿ ಸಲಹೊ ಪ. ಕಾಮಪೂರ್ಣನೆ ಎನ್ನ ಕಾಮಿತವನೀಯೊ ಅ.ಪ. ದ್ವಿತೀಯಯುಗದಲಿ ವಾಯುಸುತನಾಗಿ ಅವತರಿಸಿ ಕ್ಷಿತಿಸುತೆಗೆ ಉಂಗುರವ ಹಿತದಿಂದಲಿತ್ತೆ ತೃತಿಯುಗದಲಿ ಕುಂತಿಸುತನಾಗಿ ಕೌರವರ ಹತಗೊಳಿಸಿ ಹರಿಯಪದ ಹಿತದಿ ಧ್ಯಾನಿಸಿದೆ 1 ಕಲಿಯುಗದೊಳವತರಿಸಿ ಕಲಿಕಲ್ಮಷವ ಕಳೆದು ಒಲಿಸಿ ಹರಿಯನು ತುರಿಯ ಆಶ್ರಮದಲಿ ಸುಲಭಮಾರ್ಗವ ತೋರಿ ಸುಜನರನು ರಕ್ಷಿಸಿದೆ ಕಲಿಕಾಲ ಸಲಹೆನ್ನ ನೆಲಸಿ ಹೃದಯದಲಿ 2 ಆಚಾರ್ಯರೂಪದಲಿ ಗೋಚರಿಸಿ ಸ್ವಪ್ನದಲಿ ಸೂಚಿಸಿದೆ ದಾಸತ್ವ ಸಿದ್ಧಿಸಲಿ ಎಂದು ಯಾಚಿಸೆನೊ ಅನ್ಯರನು ನಾಚಿಕೆಯ ತೊರೆದಿನ್ನು ನೀಚತನವನೆ ಬಿಡಿಸಿ ಗೋಚರಿಸೊ ಸತತ 3 ಉಪದೇಶವನೆ ಇತ್ತೆ ಗುಪಿತದಿಂ ಸ್ವಪ್ನದಲಿ ಚಪಲತನದಲಿ ನಾನು ಅರಿಯಲಿಲ್ಲ ಅಪರಿಮಿತ ಮಹಿಮ ಶ್ರೀ ಗುರುಗಳಲಿ ನೀ ನಿಂತು ತಪ್ಪನೆಣಿಸದೆ ಎನ್ನ ನಮನ ಸ್ವೀಕರಿಸೊ 4 ವೇದವ್ಯಾಸರ ಪ್ರಿಯನೆ ಮೋದದಲಿ ಶಿಶುವಾದೆ ಶ್ರೀ ದುರ್ಗೆ ತಾ ಬಂದು ಎತ್ತಿದಳೊ ನಿನ್ನ ವಾದಿಗಳ ಗೆದ್ದ ಅನಾದಿ ಮುನಿ ನಮಿಸುವೆನೊ ಶ್ರೀದ ಗೋಪಾಲಕೃಷ್ಣವಿಠ್ಠಲನ ತೋರೊ 5
--------------
ಅಂಬಾಬಾಯಿ