ಒಟ್ಟು 1 ಕಡೆಗಳಲ್ಲಿ , 1 ದಾಸರು , 1 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ತಲೆಯ ತೂಗಿ ನಗುವುದೇನೊ ಚೆಲುವ ತಿಮ್ಮರಾಯ ನೀ ತಿಳಿಸಿದಂತೆ ನುಡಿದೆನಿಂದು ಸಲುಹಬೇಕು ಜೀಯ ಪ. ಯೋಗ ಮಾಯ ಶಕ್ತಿ ತಾಳ ರಾಗ ರಚನೆಯರಿಯೆ ಲಾಘವಾದಿ ವರ್ಣಭೇದವಾಗಲಿದನು ತೊರೆಯೆ ಶ್ರೀಗುರು ಮುಖೇಡ್ಯ ನಿನ್ನಾದಾಗಲು ನಾ ಮರೆಯೆ ನಾಗಶಯನ ನಿನ್ನ ಪದಕೆ ಬಾಗಿ ನುಡಿವೆ ದೊರೆಯೆ 1 ಮಾನಸ ವಾಕ್ಕರ್ಮವೆಲ್ಲ ನೀನೆ ಮಾಳ್ಪಿಯೆಂದು ಧ್ಯಾನಿಸಿಕೊಂಡಿಹೆನು ಭಕ್ತಾದೀನ ಕರುಣಾಸಿಂಧು ಮಾನವಿಯ ನುಡಿಯೊಳಿರುವ ನಾನಾ ಥರವ ಕುಂದು ನೀನೆ ಕ್ಷಮಿಸಬೇಕು ಪದ್ಮಮಾನ ದೀನ ಬಂಧು 2 ಬುದ್ಧಿಹೀನ ಶಿಶುವು ನುಡಿವಾ ಬದ್ಧ ಮಾತಿನಿಂದ ಲೆದ್ದು ಬಂದು ಜನನಿ ತೊಡೆಯೊಳಿದ್ದು ಕೇಳುವಂದ ಸಿದ್ಧವಾಗು ಶ್ರೀನಿವಾಸ ಶುದ್ಧ ಪೂರ್ಣಾನಂದ ಗೋಪಿ ಕಂದ 3
--------------
ತುಪಾಕಿ ವೆಂಕಟರಮಣಾಚಾರ್ಯ