ಒಟ್ಟು 1 ಕಡೆಗಳಲ್ಲಿ , 1 ದಾಸರು , 1 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ನಾನೇನು ಮಾಡಲಯ್ಯ ಎನ್ನಯ ಮನ ನಿನ್ನ ಧ್ಯಾನಿಸಲೊಲ್ಲದೂ ಪ ಶ್ರೀನಿವಾಸನ ದಯ ಕಾಣುವೋಧ್ಹ್ಯಾಂಗಿನ್ನು ನೀನೆ ದಯಮಾಡೋ ಗುರು ರಾಘವೇಂದ್ರ ಅ.ಪ ಕೀರ್ತಿಸದೆ ನಿನ್ನ ವ್ಯರ್ಥ ಚಿಂತೆಯ ಮಾಡಿ ಪಾರ್ಥಸಾರಥಿ ಮಾರ್ಗಕ್ಹೊರ್ತಾದೆ ನಾ ಮರ್ತೆ ನಿಜಸೌಖ್ಯವನು ಬೆರ್ತೆ ಅನ್ಯರ ಸತಿಯ ಸಾರ್ಥಕಾಗದೇ ಪೋಯಿತೆನ್ನ ಆಯು 1 ಮಾಂಸದಾಸೆಗೆ ಮೀನು ಹಿಂಸೆಪಡುತಿರುವಂತೆ ಕಂಸಾರಿ ಪ್ರಿಯ ಹಂಸರೊಂದಿತ ಎನ್ನ ಸಂಶಯವ ಪರಿಹರಿಸಿ ಸಂಶಾಂತ ಮತಿ ನೀಡೋ ಸಂಶಯ ದೂರನೇ 2 ಎಷ್ಟು ಪೇಳಲಿ ಎನ್ನ ದುಷ್ಟ ಕರ್ಮಗಳನ್ನು ಜೇಷ್ಟ ದೂತನೆ ಎನ್ನ ಕಷ್ಟ ಬಿಡಿಸೋ ವೃಷ್ಣಿಸಖಪ್ರಿಯ ಮನ ತೃಷ್ಣಗಳನೆ ಕಳೆದು ಶ್ರೇಷ್ಠಾ ನರಹರಿ ಚರಣಾಭೀಷ್ಟವ ನೀಡೋ 3
--------------
ಪ್ರದ್ಯುಮ್ನತೀರ್ಥರು