ಒಟ್ಟು 6 ಕಡೆಗಳಲ್ಲಿ , 5 ದಾಸರು , 6 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಇಷ್ಟಾದರು ದಯಮಾಡು ಪಂಡರಿನಾಥ ಪಾದ ಮುಟ್ಟಿ ಪ್ರಾರ್ಥಿಪೆನು ಪ ದಾನಧರ್ಮವು ಮಾಡಬೇಕೆಂದು ಮನವಿರೆ ದಾನವಾಂತಕ ಕೃಷ್ಣ ಧನವಿಲ್ಲವಯ್ಯ ಗಾನಲೋಲನೆ ಭಕ್ತಪಾಲ ನಿನ್ನಯ ಪಾದ ಧ್ಯಾನವ ಮಾಳ್ಪರ ಪಾದಧ್ಯಾನ ಕೊಡಿಸುದೇವ 1 ತೀರ್ಥಯಾತ್ರೆಗಳಿಂದ ಪಾರ್ಥಸಾರಥಿ ಕೃಷ್ಣ- ಮೂರ್ತಿ ಸೇವಿಸಲಸಮರ್ಥನಾಗಿರುವೆ ಮಾತು ಮಾತಿಗೆ ಕೃಷ್ಣಗೋವಿಂದ ಮಾಧವ ಶ್ರೀಪತಿ ಶ್ರೀಧರ ಸಲಹೆಂಬ ಸ್ಮರಣೆ 2 ಜ್ಞಾನಿಗಳೊಡನಾಡಿ ಶ್ರೀನಿವಾಸನೆ ನಿನ್ನ ನಾನಾಲೀಲೆಗಳ ಧ್ಯಾನಿಸಲಿಲ್ಲ ಹರಿಯೆ ಜ್ಞಾನಿಗಳರಸ ಭಕ್ತರ ಸುರಧೇನು ಅಜ್ಞಾನಿಗಳಳಿದು ಸುಜ್ಞಾನಜನರ ಸಂಘ 3 ಅಗಣಿತ ಮಹಿಮನೆ ನಿಗಮಗೋಚರ ಕೃಷ್ಣ ಖಗವಾಹನ ಕಂಸಾರಿಯೆ ದೇವ ಹಗಲು ಇರುಳು ನಿನ್ನ ಬಗೆಬಗೆ ಸ್ತುತಿಪರ ಪಾದಗಳು ಸೇವಿಪ ಪರಮಲಾಭವನು 4 ಕರೆ ಕರೆಗೊಳಿಸದೆ ಕಡಲಶಯನನೆ ಎನ್ನ ತೊಡರುಗಳನೆ ಬಿಡಿಸೆಂದು ಮೊರೆ ಇಡುವೆ ಮಡುವಿನೊಳ್ ಗಜವನುದ್ಧರಿಸಿ ರಕ್ಷಿಸಿದಂಥ ಕಮಲನಾಭ ವಿಠ್ಠಲನೆ ನಿನ್ನ ಸ್ಮರಣೆ 5
--------------
ನಿಡಗುರುಕಿ ಜೀವೂಬಾಯಿ
ಏನಿದ್ದರೇನಯ್ಯ ಜ್ಞಾನವಿಲ್ಲದಿರೆ ಶ್ರೀನಾಥನಂ ನೆನೆಯದಿಹ ಹೀನಮಾನವಗೇ ಪ. ಗುರುವ ಸೇವಿಸಲಿಲ್ಲ ಹರಿಯ ಧ್ಯಾನಿಸಲಿಲ್ಲ ಅರಿತವರ ಸಂಗತಿಯೊಳ್ವೆರಯಲಿಲ್ಲವಲ್ಲಾ 1 ಹರಿಕತೆಯ ಭಕ್ತಿಯೊಳು ಪ್ರಕಟಮಾಡಿಸಲಿಲ್ಲ ಪರಿಪರಿಯ ಭೋಗದಿಂ ಮರುಳಾದೆನಲ್ಲ 2 ಬಂದೇ ದಾನವಿರದ ಧನವೇಕೆ ಪೇಳು ತಿಂದುಂಡು ಮಲಗುವಾನರಜನ್ಮ ಹಾಳು3 ಕರ ಚರಣ ಮೊದಲಾದ ಕರಣಂಗಳಂ ಪಡೆದು ಹರಿಪದವ ಪೊಂದುವಾ ಪರಿಯುಂಟೆ ಪೇಳು 4 ಆನಂದ ಸಾಮ್ರಾಜ್ಯ ನಿನಗಹುದು ಕೇಳು 5
--------------
ನಂಜನಗೂಡು ತಿರುಮಲಾಂಬಾ
ಕನಿಕರವಿಲ್ಲವೆ | ವನರುಹಲೋಚನಾ ಪ ಘನಕೃಪಾಪೂರ್ಣ ನೀನೆನುವುದು ಜಗವೆಲ್ಲಾ ಎನಗದು ನಿಜವೆಂದು ಅರಿವಾಗಲಿಲ್ಲ ಅ.ಪ ವೇದ ಪುರಾಣವ ಓದಿ ತಿಳಿಯಲಿಲ್ಲ ಸಾಧುಸಂತರ ಸೇವೆ ಸಾಧಿಸಲಿಲ್ಲ ಭಾರ ನಾನಾದೆನಲ್ಲ ಆದಿಮೂರುತಿ ನಿನ್ನಾರಾಧನೆ ಮಾಡಲಿಲ್ಲ 1 ಜ್ಞಾನ ಸುಧಾರಸ ಪಾನವ ಮಾಡಲಿಲ್ಲ ದೀನತೆಯೊಳು ನಿನ್ನ ಧ್ಯಾನಿಸಲಿಲ್ಲ ದೀನರ ಸಂಗದಿ ಶ್ವಾನನಂತಾದೆನಲ್ಲ ನಾನು ನನ್ನದು ನಿನ್ನಾಧೀನವಾಗಲು ಇಲ್ಲ 2 ನಿನ್ನ ಬಿಟ್ಟನ್ಯರ ಇನ್ನು ಸೇವಿಪುದಿಲ್ಲ ಅನ್ನ ಪಾನಂಗಳೊಳಿನ್ನಾಸೆಯಿಲ್ಲ ನಿನ್ನ ನಾಮಾಮೃತವನು ಬಿಡುವವನಲ್ಲ ನಿನ್ನವನೆಂದೆನ್ನ ಮನ್ನಿಸೊ ಮಾಂಗಿರೀಶ 3
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ಚರ್ಯನಾಮುಗಿವೆನು ಕೈಯ್ಯಾ ಪ ಮಂತ್ರಸದನ ಪದ ಚಿಂತಕ ಶ್ರೀ ರಘು ಕಾಂತಕರಜ ರಘು ದಾಂತ ಯತೀಂದ್ರರ ಅ.ಪ ಅಂತರಂಗದಿ ಸಂತತ ಶ್ರೀಹರಿಯ ಚಿಂತಿಸುತಲಿ ಭೂಮಿಯ ಕಾಂತ ದಂಷ್ಟ್ರದಿ ಸಂಜನಿಸಿದ ನದಿಯ ಸಂಗಮ ಶುಭನಿಲಯ ವಿಶ್ರಾಂತ ಸುಮಹಿಮರ 1 ಪತಿ ಲಕ್ಷ್ಮಣರ ಪಾದಾಂಬುಜ ಮಧುಪರ ಮೋದಾಶ್ರು ಸುರಿಸುತ ಪೂಜಿಸಿದವರ ಪುಲಕೀತ ವಿಗ್ರಹರ ವಾದಿವಾರಣ ಮೃಗಾಧಿಪರೆನಿಸುತ ಮೋದತೀರ್ಥ ಸುಮ ತೋದಧಿ ಚಂದಿರ 2 ಇಳಿಯೊಳು ಚರಿಸುತ ಬುಧ ಜನರನ್ನು ಚಲಿಸುತ ಛಾತ್ರರನು ತಿಳಿಸೀ ಸಚ್ಛಾಸ್ತ್ರವ ಮರ್ಮಗಳನ್ನು ಉದ್ಧರಿಸ್ಯವರನ್ನು ಯಳಮೇಲಾರ್ಯರ ಒಲುಮೆ ಪಡೆದು ಭವ ಕಲುಷ ವಿದೂರರ 3 ದಾಸರ ಶುಭಚರಿಯ ಸ್ತುತಿಸಿ ಶೇವಿಸಿ ಪಡೆದರು ಗುರುಕೃಪೆಯ ನೋಳ್ಪರಿಗಾಶ್ಚರ್ಯ ನತ ಜನರಘ ಪರ್ವತ ಪವಿ ಸನ್ನಿಭ ಕ್ಷಿತಿ ಸುರತತಿ ಸೇವಿತ ಪದ ಪದ್ಮರ 4 ಜಾಣ ಮಾನವರನ ಸಾನುರಾಗದಿ ಧ್ಯಾನಿಸಲಿವರನ್ನ ಕಾಮಿತ ಗರಿವರನ ಶ್ರೀನಿಧಿ ಕಾರ್ಪರ ಸ್ಥಾನಗ ನರಪಂಚನನನೊಲಿಸಿದ ಮೌನಿವರೇಣ್ಯರ 5
--------------
ಕಾರ್ಪರ ನರಹರಿದಾಸರು
ಬರಿದೆ ಕಾಲವ ಕಳೆದೆ ನರಹರಿಯ ಧ್ಯಾನಿಸದೆ ಪ. ಪರಿಪರಿಯ ಮೋದದಲಿ ಮರುಳನಂದದಿ ಮೆರೆದೇ ಅ.ಪ. ಗುರುವ ಸೇವಿಸಲಿಲ್ಲ ಹರಿಯ ಧ್ಯಾನಿಸಲಿಲ್ಲ ಹಿರಿಯರೊಲಿವಂತುಪಚರಿಸಲಿಲ್ಲ | ಪರಮ ಭಾಗವತರ ಚರಣಕ್ಕೆ ನಾನೊಮ್ಮೆ | ಶಿರಬಾಗಿ ನಮಿಸಿ ಪರಿಚರಿಸಲಿಲ್ಲವಲ್ಲಾ 1 ಇನ್ನೆನಗೆ ಗತಿಯಾರು - ಮನ್ನಿಸುವರದಾರು ಇನ್ನದಾರಲ್ಲಿ ಪೇಳುವೆನೆನ್ನ ದೂರು ನಿನ್ನನೇ ಮೊರೆಹೊಕ್ಕು ನೀನೆ ಗತಿಯೆಂದಿರುವ ಎನ್ನ ಮನ್ನಿಸಲುಬೇಕು ಪನ್ನಶೇಷಗಿರೀಶ 2
--------------
ನಂಜನಗೂಡು ತಿರುಮಲಾಂಬಾ
ಸೇರಿ ಬದುಕುವೆ ನಮ್ಮ ಸ್ವಾಮಿಯಂಘ್ರಿಯನುಭೂರಿ ದೋಷಗಳನ್ನು ಬಯಲ ಮಾಳ್ಪುದನು ಪನಿರ್ಗುಣದ ರೂಪವದು ನಿಲುಕದೆಂದಿಗೂ ಮನಕೆದುರ್ಗುಣದ ಪುಂಜಕ್ಕೆ ದೊರಕುವುದೆ ಹುಡುಕೆಅರ್ಗಳದ ವೃತ್ತಿಗಳಲಾಳಿ ಮುಳುಗಿರಲಿದಕೆಮುಗ್ಗಿ ಮೋಹಿಪ ನಾನು ಮಥಿಸಲಿನ್ನೇಕೆ 1ಸಗುಣಮೂರ್ತಿಯ ನೋಡೆ ಸ್ಥಿರದಿ ಬುದ್ಧಿಯು ನಿಲದುಅಗಣಿತದ ವಾಸನೆಯೊಳತಿಬದ್ಧವಡೆದುಬಿಗಿ ಭದ್ರವಾಗಿರಲು ಬಹು ಕರ್ಮವೆಳೆದೆಳೆದುಬಗೆಯದನು ನೆರೆ ನೋಡಿ ಬಿಟ್ಟದನು ಜರೆದು 2ಧ್ಯಾನಿಪರು ಧ್ಯಾನಿಸಲಿ ಧೈರ್ಯದಲಿ ಬ್ರಹ್ಮವನುಜ್ಞಾನಿಗಳು ತಿಳಿಯಲಾ ಗೂಢ ತತ್ವವನುಮಾನರಹಿತರು ಹರಿಗೆ ಮಾಡಲಾ ಕರ್ಮವನುನಾನೊಂದನೊಡಬಡೆನು ನೋಡಿ ಕಠಿಣವನು 3ವೇದಶಾಸ್ತ್ರಗಳೋದಿ ವಾದಿಸಲಿ ವಾದಿಗಳುಸಾಧಿಸಲಿ ಸ್ವರ್ಗವನು ಸಕಲ ಶ್ರೌತಿಗಳುಬೋಧಿಸಲಿ ಪರರಿಂಗೆ ಬಹುತತ್ವಭೇದಿಗಳುಮಾಧವನಿಗೆರಗುವದೆ ಮತವೆನಗೆ ಕೇಳು 4ಪಾದಪದ್ಮವನಂಬಿ ಪಡೆದರಮಿತರು ಗತಿಯ ಓದಿದವರೈದಿದರು ವಾಸನೆಯ ಬಗೆಯಕಾದು ರಕ್ಷಿಪುದಂಘ್ರಿ ಕೊಡುವುದಮಿತದ ಸಿರಿಯವಾದಿಸದೆ ನಂಬಿದೆನು ವಿಧಿಜನಕನಡಿಯ 5ಇದು ತಾನೆ ಲೋಕಗಳನೆಲ್ಲವಾಳುವ ದೊರೆಯುಇದು ತಾನೆ ಯೋಗಿಗಳಿಗಿದಿರಾದ ಬಗೆಯುಇದು ವಿಷಯದೊಳಗಿರುವರೆಬ್ಬಿಸುತ್ತಿಹ ಸುಧೆಯುಇದನೆ ನಾನಂಬಿದೆನು ಯಾಕೆ ಕರೆಕರೆಯು 6ತರುಬಿ ನಿಂದಿದೆ ಲೋಕ ತತ್ಪಾದಪದ್ಮವನುಹೊರೆಯುತಿಹುದಾ ಜನವ ಹೊಣೆಯಾಗಿ ತಾನು ತಿರುಪತೀಶ್ವರ ನನಗೆ ತೋರ್ದನೀ ಮತಿಯನ್ನುವರದೇಶ ನನಗೊಲಿದವೊಡೆಯ ವೆಂಕಟನು 7ಓಂ ತೀರ್ಥಪಾದಾಯ ನಮಃ
--------------
ತಿಮ್ಮಪ್ಪದಾಸರು