(ಷೋಡಶೋಪಚಾರ ಪೂಜಾ ಕೀರ್ತನೆಗಳು)
ಧ್ಯಾನಿಸಲರಿಯೆ ನಿನ್ನ ಶ್ರೀನಿವಾಸ ಪ
ಧ್ಯಾನಿಸಲರಿಯೆನು ದೀನಮಂದಾರ ನಿ-
ತ್ಯಾನಂದ ಮೂರ್ತಿಯಂದರಿತು ಹೃದಯದೊಳು ಅ.ಪ
ಕ್ರಮದಿ ಪ್ರತ್ಯಾಹಾರದಿ
ಭ್ರಮಗೊಳಿಸುವ ಮನವ ನಿಲಿಸಿಧಾರಣೆಯನು-
ಪಮ ಸಮಾಧಿಯಲಿ ಹಂಮಮಯಂಬುವದು ಬಿಟ್ಟು 1
ಪರಿಪರಿಶಾಸ್ತ್ರ ವೇದ ಪುರಾಣಗಳ
ತರತಮ ಭೇದಾಭೇದದರುವಿಗೆ ಸಾಕ್ಷಿಯಾ-
ಚರಣಕಮಲವರಿತು 2
ಮದಮತ್ಸರಾದಿಗಳು ಕೂಡಿಯನ್ನನು
ಬಾಧಿಸುತಿಪ್ಪವು ಅನುದಿನವು
ಸದಮಲಾತ್ಮಕ ಶ್ರವಣ ಮನನಗಳರಿಯೆ ಮೋ-
ಹದ ಕೂಪದಲ್ಲಿ ಬಿದ್ದೆ ಗುರುರಾಮ ವಿಠಲನೆ 3