ಸಾರಿ ಧ್ಯಾನ ಒಂದಿದ್ದರೆ ಸಾಕೆಲೊ ಸಂ
ಸಾರ ತ್ಯಜಿಸುವುದ್ಯಾಕೊ ಪ
ಹಿಂಸೆಗುಣಗಳನ್ನು ತ್ಯಜಿಸಿ ಸತತ ಅ
ಹಿಂಸೆಯೆಂಬ ಧರ್ಮ ಗಳಿಸಿದರಾಯ್ತೆಲೊ ಅ.ಪ
ಜಡಭವತೊಡರನು ಕಡಿದುರುಳಿಸುತ
ದೃಢದೆ ಬಿಡದೆ ಕಡುಸತ್ಯ ನುಡಿಯುತ
ಅಡಿಗಡಿಗೊಡಲೊಳು ಜಡಜನಾಭ ಜಗ
ದೊಡೆಯನಡಿಯ ಧ್ಯಾನಿವಿದ್ದರದೊಂದೆ ಸಾಕೊ 1
ಮೋಸ ಠಕ್ಕು ಕ್ಲೇಶಗುಣ ಕಳೆದು ಭವ
ಮೋಸದ ಫಾಸಿಯ ಮೂಲವ ತುಳಿದು
ಆಸೆನೀಗಿ ಮನ ಬೆರಿಯದೆ ಜಗ
ದೀಶನ ಸಾಸಿರನಾಮ ಧ್ಯಾಸದಿರೆ 2
ಶುನಕನ ಕನಸಿನ ಪರಿಭವನೆನುತ
ತನುಮನಧನವೀಡ್ಯಾಡುತ ಅನುದಿನ
ಮನಸಿಜನ ಶ್ರೀರಾಮನ ಚರಣವ
ಘನತರಭಕುತಿಲಿ ನೆನೆಯುತ ಕುಣಿಯಲು 3