ಒಟ್ಟು 1 ಕಡೆಗಳಲ್ಲಿ , 1 ದಾಸರು , 1 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ದಾಸನಾದ ಮೇಲೆ ಈಶ ದೂರುಂಟೆ ಆಸೆನೀಗಲು ಸುಖದ ರಾಶಿ ಬೇರುಂಟೆ ಪ ದೋಷಕ್ಕಂಜಿದಮೇಲೆ ಸನ್ಮಾರ್ಗ ಬೇರುಂಟೆ ಕ್ಲೇಶ ನೀಗಿದಮೇಲೆ ಪುಣ್ಯ ಇನ್ನುಂಟೆ ಹೇಸಲು ಪ್ರಪಂಚಕೆ ಸತ್ಸಂಗ ಬೇರುಂಟೆ ವಾಸನ್ಹಿಂಗಿದಮೇಲೆ ವೈರಾಗ್ಯವುಂಟೆ 1 ಜ್ಞಾನಗೂಡಿದಮೇಲೆ ಮತ್ತೆ ತೀರ್ಥಗಳುಂಟೆ ಧ್ಯಾನವಿಡಿದಮೇಲೆ ಅನ್ಯಮೌನುಂಟೆ ಹೀನಗುಣ ತೊಳೆದಮೇಲಿನ್ನು ಸ್ನಾನಗಳುಂಟೆ ಮಾನಸವು ಶುದ್ಧಿರಲು ಬೇರೆ ಮಡಿಯುಂಟೆ 2 ಕೈವಲ್ಯ ಇನ್ನುಂಟೆ ಶರಣು ಪೊಂದಿದಮೇಲೆ ಪರಮಾರ್ಥ ಬೇರುಂಟೆ ಅರಿವನರಿತರೆ ಬೇರೆ ಪರಲೋಕ ಇರುಲುಂಟೆ ಶರಣರೊಲಿದಮೇಲ್ಹರಿಚರಣ ಹೊರತುಂಟೆ 3 ಸಫಲನಾದಮೇಲೆ ವ್ರತನೇಮ ಬೇರುಂಟೆ ಗುಪಿತವರಿತಮೇಲೆ ಪರತತ್ವವುಂಟೆ ಅಪರೂಪ ಧ್ಯಾನಿರಲು ತಪ ಬೇರೆ ಇರಲುಂಟೆ ಅಪರೋಕ್ಷಜ್ಞಾನ್ಯಾದ ಮೇಲೆ ಮಿಕ್ಕಸಾಧನುಂಟೆ 4 ಮಾನಹೋದಮೇಲೆ ಮರಣ ಬೇರಿರಲುಂಟೆ ನಾನತ್ವ ಪೋದಮೇಲೆ ಸತ್ಕರ್ಮವುಂಟೇ ಧ್ಯಾನದಾಯಕ ಮಮಪ್ರಾಣ ಶ್ರೀರಾಮನಡಿ ಖೂನ ತಿಳಿದ ಮೇಲೆ ಮುಕ್ತಿ ಬೇರುಂಟೆ 5
--------------
ರಾಮದಾಸರು