ಒಟ್ಟು 2 ಕಡೆಗಳಲ್ಲಿ , 2 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಅರಿತುಕೊಳ್ಳಿರೋ ನಿಮ್ಮ ಆತ್ಮವಸ್ತುವನುಪರಮ ಗುರು ಕರುಣದಿ ನೀವು ನಿಮ್ಮನು ಪ ಬಿದಿಗೆ ಚಂದ್ರನು ಆವುದೆಂದು ಕೇಳಲಿಕೆಅದಕೋ ಶಾಖಾಗ್ರ ಎಂದೆನಲು ಅರಿದಂತೆವಿಧಿಸಿ ಗುರುಮುಖದಿ ವಿವರಿಸಿ ಕಂಡು ಅರಿದುಸದಯಲಾನಂದ ತಾವೆಂದು ಭಾವಿಪುದು 1 ಊರು ಆವುದು ಎಂದು ಕೇಳುತಿರಲಿಕೆಊರದಕೋ ಗುಡ್ಡದ ಮೇಲೆನಲು ಅರಿದಂತೆಧೀರ ಗುರು ಮುಖದಿ ದಿಟ್ಟಿಸಿ ಕಂಡು ಅರಿತುಸಾರ ಸಂಪತ್ತು ತಾವೆಂದು ಧ್ಯಾನಿಪುದು 2 ಅರಸು ಅವನು ಎಂದು ಕೇಳುತಿರಲಿಕೆಅರಸ ಅಲ್ಲಿಹನೆಂದು ನಡೆವವನೆ ಅರಿತಂತೆಪರಮ ಗುರು ದಯದಿ ಪಾಟಿಸಿ ಕಂಡು ಅರಿದುಪರಮ ಗುರು ಚಿದಾನಂದ ತಾವೆಂದು ಭಾವಿಪುದು 3
--------------
ಚಿದಾನಂದ ಅವಧೂತರು
ಎಂತೋ ಪೂಜಿಪುದಂತರ್ಯಾಮಿಯನನಂತಾದಿರಹಿತನ ಚಿಂತಾದೂರನ ಚಿನುಮಯರೂಪನನೆಂತೋ ಧ್ಯಾನಿಪುದು ಪ ಈಶ ವೀಸ ವಾಹನಗೀಸನ ಚರಾಚರ ಮೀಸಲಿಗಳವಲ್ಲಾ ವಾಸುಕಿ ಭೋಗ ನಿವಾಸಿಗೆ ತರವಲ್ಲಾ 1 ಚರಣದಿ ಗಂಗೆಯ ಧರಿಸಿತುವಾತನ ಚರಣವ ತೊಳೆಯುವರೇ ತರಣಿಗೆ ತೇಜದ ಭರಣಿಗೆ ದೀಪದ ಸರಣಿಯ ತೋರುವರೆ 2 ವಿಗ್ರಹರಹಿತನಿಗಘ್ರ್ಯದ ಪೂಜೆಯು ದುರ್ಘಟ ಕಾರ್ಯವಲೆ ಭರ್ಗಾದ್ಯಮರರ ವರ್ಗವು ತಮ್ಮ ನಿಸರ್ಗದಿ ಕಾಣದಲೆ 3 ಕಲಶಾಂಬುಧಿಯೊಳು ನೆಲೆಸಿಹ ಮೂರ್ತಿಗೆ ಸಲಿಲ ಸ್ವರ್ಶನವೆ ಜಲರುಹ ನೇತ್ರಗೆ ಜಲರುಹಗಾತ್ರಗೆ ಜಲದಲಿ ಮಜ್ಜನವೆ 4 ಸ್ವರ್ಣಾಂಬರಗಳ ಬಣ್ಣಿಸುತುಡುವಗೆ ಬಣ್ಣದ ವಸ್ತ್ರಗಳೆ ಕೌಸ್ತುಭ ರನ್ನದ ತೊಡವಿಗೆ ಬಿನ್ನಣದೊಡವೆಗಳೆ 5 ಬಿಸಜನಾಭನಿಗೆ ಕುಸುಮಾಸ್ತ್ರನ ಮಾನಸದಿಂ ಪಡೆದವಗೆ ಮಿಸುಪ ತುಲಸಿಯಿಂದೆಸೆವಗೆ ಪೂಗಳ ವಿಸರ ಮನೋಹರವೇ 6 ಗಂಧವಾಹನ ಸುವಿಂದ ಅಸೃಜಿಸಿದ ಗಂಧವತೀತನಿಗೆ ಗಂಧಧೂಪಗಳು ಬಂಧುರಂಗಳೆ ಗಂಧರ್ವಾತನಿಗೆ 7 ವೇದಗೋಚರಿಸುವೇದಾತ್ಮಕನು ವೇದೋದ್ಧಾರಕನು ವೇದವೇಶದಿಂ ಮೋದಿಸುವನೋ ಸಮ್ಮೋದ ಪರಾತ್ಮಕನೇ 8 ಕುತ್ತಿಗೆನೆನೆಯದ ವಸ್ತು ಪರಾತ್ಪರ ಪೊಕ್ಕರೆ ಜಲವನ್ನ ನಿತ್ಯ ತೃಪ್ತನಂ ಚಿತ್ರಾನ್ನಗಳಿಂ ತೃಪ್ತಿಪುದೆಂತು ಜನಾ 9 ಮಂತ್ರ ಮೂರುತಿಗೆ ಮಂತ್ರಜ್ಞನಿಗೆ ಸ್ವತಂತ್ರವಿಹಾರನಿಗೆ ಮಂತ್ರಯಂತ್ರಗಳ ತಂತ್ರವದೆಂತೊ ಮಂತ್ರಾಧಾರನಿಗೆ 10 ಅಂತರ್ಬಹಿಯೊಳಗಂತರ ವಿಲ್ಲದನಂತರ ಗುಣಾತ್ಮಕನ ಎಂತು ಪ್ರದಕ್ಷಿಣಿಯಾಂತು ನಮಿಪೆ ಜಗದಂತರೀಕನ 11 ಸರ್ವಾಧಾರನ ಸರ್ವಶರೀರನ ಸರ್ವವ್ಯಾಪಕ ನಾ ಸರ್ವನ ನಮಿಸುವ ಗರ್ವವೆಂತುಟೊ ಶಕ್ರ ಸಮಸ್ಕøತನಾ12 ಧರೆಯೊಳು ಪುಲಿಗಿರಿವರದ ವಿಠಲನ ಚರಣವ ಭಜಿಸುವರ ನಿರುತದಿ ಪೂಜಿಪ ಹರುಷವು ಸಾಲದೆ ಹರಿ ಸರ್ವೋತ್ತಮ13
--------------
ವೆಂಕಟವರದಾರ್ಯರು