ಶ್ರೀ ಗೌರೀವರೇಂದ್ರನೇ ನಮೋ ನಮೋ ನಮೋ
ಯೋಗಮಯನೆ ಭೋಗದಯನೆ ನಾಗಾಭರಣನೆ
ಭೋಗೀ ಭೂಷಣ ವ್ಯಾಘ್ರವಸನನೆ ಪ
ವಾಸುದೇವ ಪ್ರಿಯನೇ ಸದಾ ಶಿವಾ ಶಿವಾ
ಶಶಾಂಕಧರನೇ ಕ್ಲೇಷಹಾರನೇ ದೋಷನಾಶನೇ
ಭಾಸುರ ಪ್ರಕಾಶಾ ತೋಷದಾತನೇ 1
ಪಂಚ ಪ್ರಾಣಧಾರನೇ ಪರಾತ್ಪರಾವರಾ
ಸಂಚಿತ ಅಘದೋಷಹರಣ ಸರ್ವಸುಖಕರಾ
ಪಂಚವದನಾ ಪಂಚಶರಹರಾ 2
ಜ್ಞಾನಮಯ ಸುಚೇತನಾ ಕೃತಾಘನಾವನಾ
ಸ್ವಾನುಭವ ಸ್ವಶಾಂತಿದಾತ ಧ್ಯಾನಿಪಾಜನಾ
ದೀನೋದ್ಧಾರಕಾ ವಿಜ್ಞಾನಮಯನೇ 3