ರವಿಕುಲಾಂಬುಧಿ ಸೋಮನೆ ಭುವನ ಪಾವನ ರಾಮನೆ ಪ
ಕವಿವರಾರ್ಚಿತ ಭೂಮನೆ ದಿವಿಜಸನ್ನುತ ನಾಮನೆ ಅ.ಪ.
ಚಂಡ ರಾವಣನುಪವನದೊಳು
ಚಂದ್ರ ಮಂಡಲಾಸ್ಯೆ ಇರುವಳು 1
ಸುಂದರಿ ನಿನ್ನನು ಧ್ಯಾನಿಪಳು ಕುಂದುತ್ತ ಚಿತ್ತದಿ ಶೋಕಿಪಳು
ಬಿಡುವಳು ಬಂಧನ ದೊಳಿರುವಳು2
ಮಾಸಿದ ಸೀರೆಯನುಟ್ಟಿಹಳು ದೂಸರ ವೇಣಿಯ ಸುತ್ತಿಹಳು
ಭೂಷ ವಿಶೇಷದೊಳಾಸೆಯನಿಡಳುಪವಾಸವನೆ ಗೈವಳು 3
ತಾಮರಸಾಕ್ಷಿಯು ನೊಂದಿಹಳು
ರಾಮ ರಾಮೆನ್ನುವಳು 4
ಜ್ಞಾನ ವಿಜ್ಞಾನವ ಪೊಂದಿಹಳು
ಪತಿ ಭಕ್ತಿದೇವಿಯಾಗಿರುವಳು ಧೇನುಪುರೀಶ ಕೇಳು 5