ನಗಬೇಡಿ ನಗಬೇಡಿ ನೀವ್
ನಗಬೇಡಿ ನಗಬೇಡಿ ಪ.
ನಿಗಮನುತನ ಭಜಿಸುವ ನಿಜದಾಸರ
ಬಗೆಯರಿಯದೆ ಬಿನ್ನಾಣದಿಂದ ನೀವ್ ಅ.ಪ.
ಹರಿಸರ್ವೋತ್ತಮ ಹೌದ್ಹೌದೆಂಬುವ
ಹರಿದಾಸರ ಲಕ್ಷಣಗಳ ತಿಳಿಯದೆ1
ಸ್ಥಿರವಲ್ಲದ ತನುಭ್ರಾಂತಿಯ ಪೊಂದುತ
ಗುರುಚರಣ ನಂಬಿದ ದಾಸರ ಕಂಡು 2
ಲಜ್ಜೆಯ ತೊರೆಯುತ ಮೂರ್ಜಗದೊಡೆಯನ
ಘರ್ಜಿಸಿ ಪಾಡುವ ಸಜ್ಜನರನೆ ಕಂಡು 3
ಲೋಕವಿಲಕ್ಷಣ ಚರ್ಯೆಯ ಧರಿಸುತ
ಶ್ರೀ ಕಾಂತನ ಧ್ಯಾನಿಪರಿವರನರಿಯದೆ4
ಗೋಪಾಲಕೃಷ್ಣವಿಠ್ಠಲನಂಘ್ರಿಗಳನು
ಭೋಪರಿ ನಂಬಿದ ನಿಜದಾಸರ ಕಂಡು 5