ಒಟ್ಟು 1 ಕಡೆಗಳಲ್ಲಿ , 1 ದಾಸರು , 1 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ನಿನ್ನ ಮಹಿಮೆ ತಿಳಿಯುವುದೊಂದಗಾಧ ದೇವ ಉನ್ನತೋನ್ನತಚರಿತ ನುತಸಹಜಭಾವ ಪ ಯೋಗಿ ನೀನಾದಯ್ಯ ಜೋಗಿಯೆಂದೆನಿಸಿದಿ ಆಗಾಧ ದೇಹ ತಾಳ್ದಿ ಬಾಗಿಲವ ಕಾಯ್ದಿ ಮಿಗಿಲಾದ ರೂಪಾದಿ ಜಗವ ಪಾಲಿಸಿದಿ 1 ಕರುಣದಿಂದಾಳಿದಿ ವರವಿತ್ತು ಕಳುಹಿದಿ ಧರೆಗೆ ಭಾರೆನಿಸಿದಿ ತಿರುಗಿ ನೀ ಮುನಿದಿ ಘಟ ನೀಡ್ದಿ ಪರಮಭಟನೆನಿಸಿದಿ ಶರಗಳನು ಪೋಣಿಸಿದಿ ಧುರದೊಳಗೆ ಕೊಂದಿ 2 ತಮ್ಮನ ಪಕ್ಷ್ಹಿಡಿದಿ ತಮ್ಮನಣ್ಣನಕೊಂದಿ ತಮ್ಮಗಧಿಕಾರ ಗೈದಿ ಸಮ್ಮತದಿ ಕಾಯ್ದಿ ತಮ್ಮನಿಗೆ ಭಾವನಾದಿ ತಮ್ಮನಿಗೆ ಬೋವನಾದಿ ತಮ್ಮನಿಂ ಕೊಲ್ಲಿಸಿದಿ ಸಮ್ಮತವ ಗೈದಿ 3 ಮಾವಗಳಿಯನಾದಿ ಮಾವಗೆ ವೈರ್ಯಾದಿ ಮಾವನ ಕುಲವಳಿದಿ ತಾಯನ್ನ ಕಾಯ್ದಿ ಗೋವು ಪಾಲಕನಾದಿ ಗೋವಿಗೆ ಮಗನಾದಿ ಗೋವುಗಳನಾಳಿದಿ ಗೋವುಕುಲ ಪೊರೆದಿ 4 ಮೀನಾದಿ ಕೂರ್ಮಾದಿ ದಾನ ಬೇಡುವನಾದಿ ಕಾನನ ಮೃಗನಾಗಿ ಧ್ಯಾನಿಪರಕಾಯ್ದಿ ದೀನಪಾಲನೆ ನಿನ್ನ ಜಾಣಮಹಿಮಂಗಳನ್ನು ಹೀನರರಿವರೆ ಮಮಪ್ರಾಣ ಶ್ರೀರಾಮ 5
--------------
ರಾಮದಾಸರು