1. ರಾಮಾನುಜರು
ಆಚಾರ್ಯ ಪ್ರಾಚಾರ್ಯ ಪರಮಾಚಾರ್ಯಾ
ನೀಚತೆ ನೀಗಿಸಿ ನಿನ್ನಂತೆ ಗೈದೇ ಪ
ಸರ್ವಗುರುವೇ ನಮಿಪೆ ಧ್ಯಾನಿಪೆ ಶ್ರೀನಿವಾಸಾ ಅ.ಪ
ಪಾದೋದಕದಿಂ ಪಾವನಗೈದೇ
ಸಾಧು ಸಂಗತಿಗಳ ಸಂತಸದಿ ಪೇಳ್ದೇ1
ಭೇದವ ತೊರೆದೇ ವೇದಗಳೊರೆದೇ
ಸಾದರದಿಂ ಸದ್ಬಂಧು ನೀನಾದೇ 2
ಪಾಪವ ಕಳೆದೇ ಗೋಪ್ಯಗಳುಸುರಿದೆ
ಶ್ರೀಪತಿಮೂರ್ತಿಯ ಹೃದಯದಿ ತೋರ್ದೆ 3
ಕೃಪೆಯನ್ನು ತೋರ್ದೆ ಅಪಾರ ಮಹಿಮ
ಉಪಕರಿಸುತ ಎನ್ನ ಉನ್ನತಿಗೆ ತಂದೆ 4
ಸಂಸಾರಾಂಬುಧಿ ಹಿಂಸೆ ದಾಂಟಿಸಿದೆ
ಹಂಸನೆ ಸಿಂಹ ಕಿಶೋರ ನ್ಯಾಯದಿ 5
ವಿಪರೀತಮತಿಯನ್ನ ಪರಿಹರಿಸಿದೆ ನೀಂ
ಸುಪಥದಿ ಸುಖದಾನಂದನಿಧಿಯಿತ್ತೇ 6
ಜಾಜೀಶನಿಗೆ ಪ್ರೇಮಪುತ್ರನು ನೀಂ
ಪೂಜಿಪೆ ಪದಯುಗ ಶರಣನೆ ಕರುಣಿಸು 7