ಬೆಂಕಿಗಿರುವೆಗಳ ಕಾಟುಂಟೇ ಹರಿ
ಭವ ಭಯಮುಂಟೆ ಪ
ಪಂಕಜಸಖನಿಗೆ ಕತ್ತಲಂಜಿಕೆಯುಂಟೆ
ಪಂಕಜಾಕ್ಷನ ಧ್ಯಾನಕ್ಕೆಣೆಯುಂಟೆ ಅ.ಪ
ವಜ್ರಾಯುಧಕೆ ಗಿರಿ ಉಳಿಯಲುಂಟೆ ಗಂಗೆ
ಮಜ್ಜನದಿಂ ಮೈಲಿಗೆಯಿರುಲುಂಟೆ
ಸಜ್ಜನರಿಂಗೂಡಿ ನಿರ್ಜರೇಶನ ಭಜ
ನ್ಹೆಜ್ಜೆಜ್ಜ್ಹಿಗಿರೆ ಜನ್ಮ ಬರಲುಂಟೆ 1
ಮೌನಧಾರಿಗೆ ಅಭಿಮಾನ ಉಂಟೆ ನಿಜ
ಧ್ಯಾನಿಕರಿಗೆ ಹೀನ ಬವಣೆಯುಂಟೆ
ಜ್ಞಾನದೊಳೊಡಗೂಡಿ ಗಾನಲೋಲನ ಪಾದ
ಆನಂದಕರಿಗಿಹ್ಯಸ್ಮರಣುಂಟೆ 2
ತಾಮಸ್ಹೋಗಲು ಕ್ಷೇಮ ಬೇರುಂಟೆ ದು
ಷ್ಕಾಮಿ ತಳೆಯಲು ಮುಕ್ತಿದೂರುಂಟೆ
ಭೂಮಿಗಧಿಕ ನಮ್ಮ ಸ್ವಾಮಿ ಶ್ರೀರಾಮನ
ಪ್ರೇಮಪಡೆದ ಮೇಲೆ ಬಂಧ ಉಂಟೆ 3