ವಿಮಲಮಹಿಮನೆ ದಾಸನಾಸೆಪೂರೈಸೊ
ಅಮಿತ ನಿಮ್ಮಯ ಬಿರುದು ಸತ್ಯವೆಂದೆನಿಸೊ ಪ
ಕಷ್ಟಹರ ನೀನಹುದೆ ದಿಟ್ಟತನ ಕೊಡುಯೆನಗೆ
ಶಿಷ್ಟರೊಡೆಯ ನೀನಹುದೆ ಗಟ್ಟಿಮನವ ಪಾಲಿಸು
ಇಷ್ಟಪೂರ್ಣ ನೀನಹುದೇ ಕೊಟ್ಟು ರಕ್ಷಿಸೆನ್ನ 1
ದೀನರಾಸ್ಪದನಹುದೇ ಧ್ಯಾನ ದಯೆ ಪಾಲಿಸೈ
ಗಾನಲೋಲಹುದೆ ನೀ ಜ್ಞಾನವನು ನೀಡೊ
ಮಾನರಕ್ಷ ನೀನಹುದೇ ಅಭಿಮಾನಯೆನದಿರೆನ್ನ
ಧ್ಯಾನಿಕಧೇನಹುದೇ ಆನಂದ ನೀಡೊ 2
ನ್ಯಾಯವಂತ ನೀನಹುದೇ ಮಾಯೆಮೋಹವನು ಬಿಡಿಸು
ಪಾವನಾತ್ಮ ನೀನಹುದೇ ಸಾವು ಹುಟ್ಟು ಗೆಲಿಸು
ಜಯವಂತ ನೀನಹುದೇ ದೇಹಿಯೆನಿಸದಿರಲ್ಪರಿಗೆ
ಕಾವದೇವ ನೀನಹುದೇ ಭಾವದ್ವಾಸಿಸೆನ್ನ 3
ಪೃಥ್ವಿ ವ್ಯಾಪಕನಹುದೇ ಚಿತ್ತಶುದ್ಧಮಾಡೆನ್ನ ಸತ್
ಚಿತ್ತ ನೀನಹುದೇ ಸತ್ಸಂಗ ನೀಡೊ
ಭಕ್ತವತ್ಸಲನಹುದೇ ಅನಿತ್ಯಗುಣ ಬಿಡಿಸೆನ್ನ
ಕರ್ತನು ನೀನಹದೇ ಸತ್ಪಥದೆನ್ನಿರಿಸೊ 4
ಅಸಮಕರುಣಹುದೇ ನೀ ಪುಸಿಗೊಲಿಸಿದಿರು ಎನ್ನ
ದೋಷಹರ ನೀನಹುದೇ ಹಸನೆನಿಸು ಎನ್ನ
ದಾಸರಭಿಮಾನ್ಯಹುದೇ ಪೋಷಿಸೆಲೊ ತವಪಾದ
ಧ್ಯಾನದಿರಿಸೆನ್ನ ಶ್ರೀಶ ಶ್ರೀರಾಮ5