ಜಯದೇವ ಜಯದೇವ ಜಯಗುರು ಮಹೇಶಾ
ಭಯವನಿವಾರಿಸಿ ಶ್ರಯಕುಡು ನೋಡದೆ ಗುಣದೋಷಾ ಪ
ಶಿವಶಿವಶಿವಶಿವಯೆಂದು ನೆನಿಯಲು ದೃಡವಾಗಿ
ಅವನಿಲಿಹಿಂಗುದು ಪೂರ್ವದ ದುಷ್ಕøತಗತವಾಗಿ
ಭವಭವ ಭವಭವಯನಲಾಮ್ಯಾಲನಿಶ್ಚಲನಾಗಿ
ಜವದಲಿ ಹರಿವುದುದುರ್ಧರ ಭವಭಯಭಯಾಗಿ 1
ಅನನ್ಯ ಭಾವದಿಹೊಕ್ಕು ಶರಣವ ನಿಮ್ಮಡಿಗೆ
ತನುಮನಧನವನು ಅರ್ಪಿಸಿ ವಂಚನೆ ನಿಲದ್ಹಾಗೆ
ಅನುದಿನ ಮಾಡಿಲು ಧ್ಯಾನಾಸ್ವರೂಪಹೃದಯದೊಳಗೆ
ಘನ ತರದಿಹನಿಜಸ್ಥಾನವು ಸುಲಬಾಗುವದೀಗೆ2
ನಿನ್ನಾ ಮಹಿಮೆಯುತಿಳಿಯದು ನಿಗಮಕ ಶ್ರೀಗುರವೇ
ಇನ್ನು ಅಂತಿಂತೆಂಬುದು ನರಗುರಿಗಳಿಗಳವೇ
ಎನ್ನಾನಯನದಿನೋಡಿ ಸುಮ್ಮನು ಸುರದಿರುವೇ
ಭಿನ್ನವಿಲ್ಲದೆ ಸಲಹು ಮಹಿಪತಿ ಸುತಪ್ರಭುವೇ 3