ಒಟ್ಟು 1 ಕಡೆಗಳಲ್ಲಿ , 1 ದಾಸರು , 1 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಮನ್ನಿಸಿ ಸಲಹಯ್ಯ ಎನ್ನ ತಪ್ಪು ಒಪ್ಪಿಕೊ ಮಹರಾಯ ಪ ಮನ್ನಿಸಿ ಸಲಹಯ್ಯ ಪನ್ನಂಗಶಯನನೆ ನಿನ್ನ ಧ್ಯಾನಾಮೃತವನ್ನು ಕರುಣದಿತ್ತು ಅ.ಪ ನಾನಾಜನುಮ ಸುತ್ತಿ ಮತ್ತೆ ಹೀನ ಜನುಮವೆತ್ತಿ ಜ್ಞಾನವಿನಿತಿಲ್ಲದೆ ನಾನಾಪಾಪಗೈದೆ ದೀನಜನರ ಬಂಧು ನೀನೆ ಕ್ಷಮಿಸು ತಂದೆ 1 ಮರವೆ ದೇಹವೊದ್ದು ಸಂಸಾರ ಮರವೆಯೊಳಗೆ ಬಿದ್ದು ಶರಣ ಸತ್ಪುರುಷರ ನೆರವಿನಿತರಿಯದೆ ಮರುಳನಾದೆ ಹರಿ ಮುರಹರ ಕ್ಷಮಿಸಯ್ಯ 2 ಬರಬಾರದು ಬಂದೆ ಬಲು ವಿಧ ದುರಿತದೊಳು ಬೆಂದೆ ಕರುಣದಿ ಕ್ಷಮೆಮಾಡಿ ಪೊರೆಯೊ ಶ್ರೀರಾಮನೆ 3
--------------
ರಾಮದಾಸರು