ಎಂಥ ಕರುಣಿಯೋ | ಐಕೂರು ಗುರುಗಳೆಂಥ ಸುಗುಣಿಯೋ
ಎಂಥ ಪರಮ ಕರುಣಿಯೋ ಇವ
ರೆಂಥ ಸುಗುಣ ಶಾಲಿಯೋ ಸು
ಸ್ವಾಂತದಿ ಏಕಾಂತದಿ ಶ್ರೀಕಾಂತನ ಪದಕ್ರಾಂತ
ಶಾಂತರಂತಃಕರುಣಿಯೋ ಅ.ಪ
ವಸುಧಿ ತಳದಲಿ ಶ್ರೀಶನಾಜ್ಞೆಯಿಂದ
ಶಶಿಯಮತದಲಿ ಬಂದು | ಸುನಿತ ಮನದಲಿ
ವಸುಮತಿ ಸುಶಾಸ್ತ್ರಧರ್ಮ | ನಿಶಿಹಗಲಾಚರಿಸಿ ಶಿಷ್ಯ
ಭವ | ಘಸಣೆ ಕರೆದು ಕುಶಲಗರೆದ 1
ನಿತ್ಯ ಉತ್ಕøಷ್ಟ ಭಕುತಿಲಿ
ಮುಟ್ಟಿ ಪಾಡಿ ನೋಡಿ ಕುಭವ ದಟ್ಟುಳಿಯನಿಟ್ಟವರು 2
ಜ್ಞಾನ ಶೀಲರು ದಾಸಕವನ | ಗಾನಲೋಲರು
ನೆರೆನಂಬಿದಂಥ ದೀನಪಾಲರು
ಶ್ರೀನಿಧಿವರ ಶಾಮಸುಂದರ | ಧ್ಯಾನಾಮೃತಪಾನಗೈದು
ಕ್ಷೋಣಿ ಮಂಡಲದಿ | ಮದಿಸಿದಾನೆಯೆಂತೆ ಚರಿಸಿದವರು 3