ಪಾದ - ಮೋದದಿ ಭಜಿಸಿದ ಮನುಜನೆ ಬಲು ಧನ್ಯನೋ ಪ
ಬೋಧ ಪಾದ ಸೇವಕರಾದ ಮಹಸುಸ್ವಾದಿ ಪುರದೊಳು | ವೇದ ವಿನುತನ ಸ್ತುತಿಸಿ ಮೋದಿಪ ಅ.ಪ.
ವಾಗೀಶ ಮುನಿಪ ಸದಾಗಮಜ್ಞನ ವರ | ವೇಗದಿಂದಲಿ ಫಲಿಸಲುಜಾಗು ಮಾಡದೆ ಗೌರಿ ತತ್ಪತಿ | ರಾಗ ರಹಿತರು ನಿನ್ನನೊಪ್ಪಿಸೆ |ರೋಗಹರ ಹಯವದನ ಪದವನು | ರಾಗದಿಂದಲಿ ಭಜಿಪ ಯತಿ 1
ತಿಮಿರ ತಾಮರಸ ಬೋಧ ಶಾಸ್ತ್ರವ | ಪ್ರೇಮದಿಂದಲಿ ಪೇಳ್ದಯತಿವರ 2
ಮೂರ್ತಿ ಪ | ರಾಕ್ರಮನಿಂ ತರಿಸೀಚಕ್ರಿಯನೆ ನಿಲಿಸ್ಯುತ್ಸವದಿ ಸುರಪನ | ವಿಕ್ರಮದ ಆಳ್ಬಂದು ಕರೆಯಲು |ಉತ್ಕ್ರಮಣ ತೊರೆದವರ ಕಳುಹುತ | ವಿಕ್ರಮನ ಪದಕೆರಗಿನಿಂದ3
ನಿಗಮವೇದ್ಯನ ಬಗೆಬಗೆಯಲಿ ಸಂಸ್ಕøತ | ಮಿಗಿಲು ಪ್ರಾಕೃತ ಪದ್ಯದೀಸುಗುಣಮಣಿಮಯ ಮಾಲೆಗಳ ಪ | ನ್ನಗನಗೇಶನ ಕೊರಳೂಳರ್ಪಿಸಿ |ಚಿಗಿ ಚಿಗಿದು ಆನಂದದಿಂದಲಿ | ದೃಗು ಜಲದಿ ಹರಿಪದವ ತೊಳೆದ 4
ಸುರನದಿ ನದಿಧರರಾದಿ ಸ್ಥಾಪಿಸುತಲ್ಲಿ | ಎರಡೆರಡೊಂದು ವೃಂದಾವನವಾ | ಸ್ಥಿರಪಡಿಸಿ ಶ್ರೀವ್ಯಾಸ ಸಮ್ಮುಖ | ವರ ನರೇಯಣ ಭೂತಬಲದಲಿಇರಿಸಿ ಗುರು ಗೋವಿಂದ ವಿಠಲನ | ನಿರುತ ಧ್ಯಾನಾನಂದಮಗ್ನ5