ಭಜಿಸೋ ಮೂಢ ಭಜಿಸದರಿಬೇಡಾ
ತ್ರಿಜಗ ವಂದಿತನಾದ ಶ್ರೀಹರಿ ಗಾಢಾ ಪ
ಛಂದದಿ ಧ್ಯಾನಾದಿಂದ ಉಲ್ಹಾಸಾ 1
ಗೋಪಿಯಕಂದಾ ಗೋಕುಲಾನಂದಾ
ಭೂಪ ಗೋವಿಂದ ಯೆಂದೀಪರಿಯಿಂದಾ 2
ಸುಂದರ ಮೂರುತಿ ಸುಗುಣಾ ಪ್ರಖ್ಯಾತಿ
ಮಂದರಗಿರಿ ಪೊತ್ತ ಪಾವನ ಕೀರುತಿ 3
ಮಂಗಳದಾಯಕಾ ಮನ್ಮಥ ಜನಕಾ
ಗಂಗೆಯ ಪಡೆದಾ ಕರುಣಾನನೇ ಕಾ 4
ನಿಗಮಗೋಚರನಾ ನೀರಜನಾಭನಾ
ಅಗಣಿತ ಮಹಿಮಾನಂತ ಅವತಾರನಾ 5
ಭಕುತ ವತ್ಸಲನ ಮುಕುತಿದಾಯಕನಾ
ಅನುದಿನ ನಿಜ ಮುಕ್ಕುಂದನಾ 6
ಇಂದು ಬಿಡದೆ 'ಹೊನ್ನವಿಠ್ಠಲ' ಶ್ರೀ ಕೃಷ್ಣನಾ 7