ಸ್ಮರಣೆ ಮಾತ್ರದಿ ಸ್ವತಂತ್ರ ದೊರಕುವುದು
ಜಗದೊಳಗೆ ಶ್ರೀಹರಿ ಸ್ಮರಣೆ ಪ
ಸ್ಮರಣೆ ಮಾತ್ರ ಸ್ವತಂತ್ರವೆಂದರೆ
ಪರಮ ಭಗವದ್ಗೀತೆ ಅಪ್ಪಣೆ
ಕರುಣಾಸಾಗರ ದಧಿಯಚೋರನೂ
ಶರಣುಪಾರ್ಥಗೆ ಅರುಹು ಮಾಡಿಹ 1
ಸುಲಭದಿಂದಲಿ ಶ್ರವಣಮನನಾಗೀ ಜಗದೊಳಗೆ ನಿನಗೆ
ಫಲಿತವಾಗೊ ನಿಧಿ ಧ್ಯಾನಾಗೀ
ಕೊಲುಮೆತಿತ್ತಿಯನೂದಲಾಗುವ
ಫಲವು ಕಂಡು ಕಾಣದಿರುವೆಯೊ ಕಲೆಯ ತೊಟ್ಟನು ನೀ
ಗಲಾ ಪರಸುಳುಹಿನೊಳಗೆ ಹೊಕ್ಕಿ ಮಾಡೊ 2
ಬೆಂಗಳೂರಿಗೆ ಪೋಗಿ ನಿಂದಲ್ಲಿ ವೋ ಮಾಯಜೀವಾ
ಮಂಗಳಾಂಗ ಶುಭಾಂಗಣದಲ್ಲಿ
ತಂಗಿ ತಾನೆ ನಿಮಿಷ ನಿಮಿಷಕೆ
ಸಂಗಮೇಶ್ವರನಾಗಿ ನಿಜದಾ
ಬಂಗೆಲೆಯೊಳಗಿರುವ ತುಲಶೀರಾಮತಾ ನಿಜಲೀಗನೇಳಿದ 3