ಸ್ಮರಿಸುವುದು ಗುರು ಸಂತತಿಯನೂ ಪ
ನಿತ್ಯ | ಗುರುವರ್ಯ ಸಂತತಿಯ ಹರಿಕರುಣವೂ ದೊರಕಿ | ಸರ್ವ ಆಮಯ ಹರವು ಪರಮ ಪುರುಷಾರ್ಥಕ್ಕೆ ವರ ಮಾರ್ಗವೆಂದೆನಿಪ ಸದ್ಭಕ್ತಿ ಜ್ಞಾನಪ್ರದವು ಅ.ಪ.
ಆದಿ ಮೂರುತಿ ಹಂಸ | ಪಾದಾನುವರ್ತಿ ವಿಧಿಆದಿವಿಧಿ ಸುತರು ಸನ | ಕಾದಿ ಪದ ಪದ್ಮಗಳಮೋದದಿಂ ಭಜಿಪ ದೂ | ರ್ವಾಸ ತತ್ಕರಜ ಸುಜ್ಞಾನ ನಿಧಿಗಳ ಪಾದವ ||ಆದರದಿ ಗರುಡವಾಹನ ತೀರ್ಥ ಕೈವಲ್ಯರಾದರಿಸಿ ಜ್ಞಾನೇಶ ತತ್ಕರಜ ಪರತೀರ್ಥಪಾದಾಬ್ಜ ಸೇವಿಸುವ ಸತ್ಯ ಪ್ರಾಜ್ಞ ಕರಜ ಪ್ರಾಜ್ಞ ತೀರ್ಥರು ಯತಿಗಳ 1
ಅಚ್ಯುತ ಮಾಧವ ತೀರ್ಥ | ಆಕ್ಷೋಭ್ಯ ತೀರ್ಥರೂತತ್ಕರಜ ಪರವಾದಿ | ಗಜಸಿಂಹ ಜಯತೀರ್ಥಯತಿಗಳಾ ವಿದ್ಯಾಧಿ | ರಾಜ ಸತ್ಕವೀಂದ್ರರು ವಾಗೀಶ ರಾಮಚಂದ್ರ 2
ಅತ್ಯಂತ ಮಹಿಮರೆನೆ | ವಿಭುದೇಂದ್ರ ವಿದ್ಯೆನಿಧಿಮತ್ತವರ ಕರಜಾತ | ರಘುನಾಥ ರಘುವರ್ಯಭೃತ್ಯ ವೇದವ್ಯಾಸ | ತೀರ್ಥ ವಿದ್ಯಾಧೀಶ ವೇದನಿಧಿ ಸತ್ಯವ್ರತರ ||ಸತ್ಯನಿಧಿ ಸತ್ಯನಾಥಾಖ್ಯ ಸತ್ಯಾಭಿನವಸತ್ಯ ಪೂರ್ಣಾಖ್ಯ ಯತಿ | ಸತ್ಯ ವಿಜಯಾರ್ಯ ವರಸತ್ಯ ಪ್ರಿಯ ತೀರ್ಥಾಖ್ಯ | ಸತ್ಯ ಬೋಧಾಖ್ಯಮಹ ಸತ್ಯ ಸಂಧಾಖ್ಯ ಮುನಿಯ 3
ಸತ್ಯವರ ಸತ್ಯಧರ್ಮಾಖ್ಯ ಸತ್ಯಸಂಕಲ್ಪಸತ್ಯ ಸಂತುಷ್ಟಾಖ್ಯ | ಸತ್ಯ ಪರೆಯಣ ತೀರ್ಥ ಸತ್ಯ ಕಾಮಾಖ್ಯ ಯತಿ | ಸತ್ಯೇಷ್ಟ ಕರಜರೆನೆ ಸತ್ಯ ಪರಾಕ್ರಮ ತೀರ್ಥರ || ಸತ್ಯ ವೀರಾಖ್ಯಯತಿ | ಸತ್ಯಧೀರಾಖ್ಯರಂತತ್ಕರಜ ಶಿರಿಸತ್ಯ | ಜ್ಞಾನಾಖ್ಯ ಅಗ್ನ್ಯಂಶದುಸ್ತಿಮಿರ ಮಾಯ್ಮತದ | ಮಾರ್ತೆಂಡರೆಂದೆನಿಪ ಶಿರ ಸತ್ಯ ಧ್ಯಾನಾಖ್ಯರ4
ನಿತ್ಯ ಗುರು ಗೋವಿಂದ ವಿಠಲ ತಾ ಪೊರೆವ ಸತ್ಯ 5