ಧ್ಯಾನಧಾರಣ ನಾಗಬೇಕಂತೆ ಪ್ರಪಂಚದೊಳಗೆ
ದೀನ ನಾನಾದೊಡೆ ಮುಖ್ಯ ಸಾಕಂತೆ ಪ
ಪ್ರಾಣ ಪಾನ ಸಮಾನ ವ್ಯಾನವು
ದಾನ ಹೀಗೆಂದೆಂಬೊ ಪಂಚಕ
ಜ್ಞಾನಗುರುಗಳು ತೋರಿಸಿದು ನಿಜ 1
ಆಗ ನೀನದು ಕಾಣಬಹುದಂತೇ ಆಧ್ಯಾತ್ಮ ಸತ್ಯವು
ಯೋಗವೆ ನಿಜ ತಾಳಿಯಹುದಂತೆ
ಬಾಗಿ ನಡೆವ ಅವಿಜ್ಞನಿಗೆ ಅದು
ಮುದ್ರೆ ಸಮಾಧಿಹೊಂದುವ 2
ಸ್ಮರಣೆ ನಿಂತೊಡೆ ಧ್ಯಾನಸಾಕಂತೇ ಅಭಯ ಪ್ರಸಿದ್ಧವು
ಕರಣ ನಿಗ್ರಹ ನಿನಗೆ ಬಹುದಂತೇ
ಧರಣಿ ಮದ್ಗುರು ತುಲಸಿರಾಮರ
ದಾಸರಪ್ಪಣೆ ಗುಳುಹಲಾತನ
ಚರಣ ಸೇವೆಯೊಳಿರುತಿಹುದೆ ನಿಜಪರಮ ಪದವಿದು ಸತ್ಯನಿತ್ಯವು 3