ಒಟ್ಟು 4 ಕಡೆಗಳಲ್ಲಿ , 1 ದಾಸರು , 4 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ನಾನಾ ಚಿಂತನೆ ಎನಗಿಲ್ಲ ಹರಿ ನಿನ್ನ ಚಿಂತನೆ ಎನಗನುಗಾಲ ಪ ಮಾನಾಪಮಾನದ ಭಯವಿಲ್ಲೆನಗೆ ತವ ಧ್ಯಾನವೊಂದೆ ನೀಡು ಬಹು ಮಿಗಿಲ ಅ.ಪ ಉಪವಾಸಬಿದ್ದರೆ ಆಡ್ಡಿಯಿಲ್ಲ ಎನ ಗಪರೂಪ ಊಟಾದರ್ಹಿಗ್ಗಿಲ್ಲ ಕಪಟದಿ ಬೈದರೆ ಅಹಿತಿಲ್ಲ ಜನ ನಿಪುಣನೆಂದರೆ ಎನಗ್ಹಿತವಿಲ್ಲ ಸುಪಥದಿ ನಡೆಸೆನ್ನ ಸಫಲನೆನಿಸಿ ನಿಮ್ಮ ಗುಪಿತ ಮಂತ್ರ ಮಾಡನುಕೂಲ 1 ಪರಮ ಬಡತನವಿರೆ ಪರವಿಲ್ಲ ಬಲು ಸಿರಿ ಸಂಪದವಿರೆ ಹರುಷಿಲ್ಲ ಸಿರಿವರ ನಿಮ್ಮಯ ಚರಣ ಸ್ಮರಣೆವೊಂದೆ ಸ್ಥಿರಮಾಡು ಮರೀದಂತೆ ಗೋಪಾಲ 2 ಕಾಮಿನಿಯರ ಪ್ರೇಮ ನಿಜವಿಲ್ಲ ಮತ್ತು ಹೇಮ ಮುತ್ತು ರತ್ನ ಇರೋದಲ್ಲ ಭೂಮಿಸೀಮೆಯ ಸುಖವಿಲ್ಲ ಇದು ನೇಮವಲ್ಲೊಂದಿನ ಬಟ್ಟಬೈಲ ಕ್ಷೇಮಮಂದಿರ ಭಕ್ರಪ್ರೇಮದಿ ಕೊಡು ಶ್ರೀರಾಮ ನಿಮ್ಮಡಿ ಭಕ್ತಿ ನುತಪಾಲ 3
--------------
ರಾಮದಾಸರು
ಯಾಕೆ ನಿನ್ನವರೊಳು ದೂರದೃಷ್ಟಿ ಪ್ರಭುವೆ ಲೋಕಬಂಧು ದಯಾಸಿಂಧು ದಾಸಜನರರಸ ಪ ಭ್ರಷ್ಟನಿವ ನಿತ್ಯದಲಿ ಮುಟ್ಟಿ ಸ್ನಾನಗೈಯನೆಂದು ಬಿಟ್ಟಿ ಬೇಸರ ಮಾಡಿ ಸಿಟ್ಟಗೆದ್ದಿರುವ್ಯೋ ಪುಟ್ಟಿ ಜತೆಗೂಡಿಲ್ಲೆ ಬಿಟ್ಟು ಅಗಲುವ ದೇಹ ಎಷ್ಟು ತೊಳೆದರೇನೆಂದು ಗಟ್ಟಿಮಾಡಿಬಿಟ್ಟೆ 1 ಕಡುಹೀನ ಕುಲಯೋಗ್ಯ ಮಡಿ ಅರಿಯ ಇವನೆಂದು ಕಡುಗೋಪದಿಂದೆನ್ನ ನುಡಿಕೇಳದಿರುವ್ಯೋ ಮುಡಿಚೆಟ್ಟಿನಲಿ ಬಂದು ಕಡುಹೊಲಸು ತುಂಬಿರ್ದ ಜಡದೇಹಕ್ಯಾತರ ಮಡಿಯೆಂದು ಬಿಟ್ಟೆ 2 ನಿತ್ಯನೇಮವರಿಯದ ಅತ್ಯನಾಚಾರಿಯೆಂದು ನಿತ್ತರಿಸದೆನ್ನ ಮುಖವೆತ್ತಿ ನೋಡದಿರುವ್ಯೋ ಪಿತ್ತ ರಕ್ತ ಮಜ್ಜ ಮಾಂಸ ಮತ್ತೆ ಮಲ ಮೂತ್ರ ಕ್ರಿಮಿ ಹೊತ್ತ ಭಾಂಡಿದೆಂದರಿತು ನಿತ್ಯನೇಮ ಬಿಟ್ಟೆ 3 ಸತ್ಯಕರ್ಮದ ಮಹಿಮೆ ಗೊತ್ತಿಲ್ಲದಧಮ ಮಹ ಧೂರ್ತ ಪಾತಕಿಯೆಂದು ಮರ್ತೆನ್ನಬಿಟ್ಟ್ಯೋ ಎತ್ತನೋಡಲು ನೀನೆ ಸುತ್ತಿ ವ್ಯಾಪಿಸಿ ಜಗವ ಹೊತ್ತು ಆಳುವುದರಿತು ಸತ್ಕರ್ಮ ಬಿಟ್ಟೆ 4 ನೀನೆ ನಿರ್ಮಿಸಿದಭವ ನಾನಾಲೋಕ ವೇದಶರ್ಮ ನೀನೆ ವಿಶ್ವಾತ್ಮಕನೈ ನೀನೆ ಸೂತ್ರಧಾರಿ ಧ್ಯಾನದಾಯಕ ಮಮಪ್ರಾಣ ಶ್ರೀರಾಮ ನಿನ್ನ ಧ್ಯಾನವೊಂದೆ ಅಧಿಕೆಂದು ನಾನಾಕರ್ಮ ಮರೆದೆ 5
--------------
ರಾಮದಾಸರು
ಸಾಸಿರ ಮಾತುಗಳ್ಯಾಕೊ ಎಲೆಮನ ಕೇವಲ ಹರಿನಾಮವೊಂದೆ ಸಾಕೊ ಪ ಸ್ನಾನವುಯಾಕೊ ಮೌನವುಯಾಕೊ ದಾನವಾರಿಯಧ್ಯಾನವೊಂದೆ ಸಾಕೊ 1 ಮಂತ್ರವುಯಾಕೊ ತಂತ್ರವುಯಾಕೊ ಮಂತ್ರಮೂರ್ತಿ ಚಿಂತೆಯೊಂದೆ ಸಾಕೊ 2 ಹೋಮವುಯಾಕೊ ನೇಮವುಯಾಕೊ ಸ್ವಾಮಿ ಶ್ರೀರಾಮನ ಭಕ್ತಿಯೊಂದೆ ಸಾಕೊ 3
--------------
ರಾಮದಾಸರು
ನಿನ್ನಯ ಬಲವೊಂದಿದ್ದರೆ ಸಾಕಯ್ಯ ಸೀತಾನಾಥ ಮಿಕ್ಕಅನ್ಯರ ಬಲವಿನ್ನ್ಯಾಕೆ ಬೇಕಯ್ಯ ಸೀತಾನಾಥ ಪತನ್ನ ಮುಖವ ಕಂಡ ಜನರಿಂ ಕೇಳ್ವುದಕಿಂತ ಸೀತಾನಾಥತನು ಉನ್ನತವಾದಂಥ ಕನ್ನಡ್ಯೊಂದೇ ಸಾಕೊ ಸೀತಾನಾಥತನ್ನಿಷ್ಟಗರೆವಂಥ ಸುರಧೇನೊಂದೆ ಸಾಕೊ ಸೀತಾನಾಥ ಮತ್ತುಇನ್ನು ಬನ್ನಬಡುತಾನಂತಾಕಳ್ಯಾಕೊ ಸೀತಾನಾಥ 1ವರಹೆಣ್ಣು ಹೊನ್ನು ಮಣ್ಣಿನಕಿಂತ ಸೀತಾನಾಥಸ್ಥಿರ ಸ್ಮರಿಸಿದ್ದನ್ನೀವಂಥ ಸುರತರೊಂದೆ ಸಾಕೊ ಸೀತಾನಾಥಪರಮಚಿಂತಾಮಣಿಯ ಸಾಧ್ಯವೊಂದೆ ಸಾಕೊ ಸೀತಾನಾಥಪರಿಪರಿಮಂತ್ರ ತಂತ್ರದಿ ಸಿದ್ಧಿಗಳ್ಯಾಕೊ ಸೀತಾನಾಥ2ಪಾಮರ್ಹಲವು ಬಂಧುಬಳಗ ಬಲದಕಿಂತ ಸೀತಾನಾಥ ಮಹಾಸ್ವಾಮಿಪ್ರೇಮವೆಂಬ ಪರುಷವೊಂದೆ ಸಾಕೊ ಸೀತಾನಾಥಕಾಮಿಸ್ಹಲವು ದೈವ ಭಜಿಸಲಿನ್ಯಾತಕೊ ಸೀತಾನಾಥ ಶ್ರೀರಾಮ ನಿಮ್ಮಯ ನಿಜ ಧ್ಯಾನವೊಂದೆ ಬೇಕೊ ಸೀತಾನಾಥ 3
--------------
ರಾಮದಾಸರು