ಒಟ್ಟು 1 ಕಡೆಗಳಲ್ಲಿ , 1 ದಾಸರು , 1 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಭಕುತಿಯ ಪಾಲಿಸು ಜೀಯಾ ಮುಂದೆ ಮುಕುತಿಗೊಡವೆ ಯಾಕೆ ನೀನೊಲಿದ ಮೇಲೆ ಪ ತನುವೆ ನಿನ್ನಾಧೀನವೆನಿಸು ಇದು ಅನುದಿನ ಕೊಡು ಏಕಪ್ರಕಾರ ಮನಸು ಧನ ವಡವೆಯ ಕಂಡ ಕನಸು ಎಂದು ನಿತ್ಯ ನಿನ್ನಂಘ್ರಿ ನೆನಸು 1 ತತ್ವದ ಮತದೊಳಗಿರುಸು ಪುಶಿ ಉತ್ತರ ಮತವೆಂಬ ಮಾರ್ಗವ ಮೆರೆಸು ಉತ್ತಮರೊಳಗೆನ್ನನಿರಿಸು ಭವ ವತ್ತುವ ನಿನ್ನ ನಾಮಮೃತ ಸುರಿಸು 2 ಶ್ರವಣ ಮನನ ಧ್ಯಾನವೀಯೋ ಎನ್ನ ಅವಗುಣವೆಣಿಸದೆ ಕರುಣಾಳು ಕಾಯೊ ಅವಸಾನದಲಿ ನೀನೆ ಗತಿಯೊ ತ್ರೈ ಭುವನೇಶ ವಿಜಯವಿಠ್ಠಲ ನೀ ದೊರೆಯೋ 3
--------------
ವಿಜಯದಾಸ