ಗುರುವಿಗೆರಗೀ ತರಣೋಪಾಯವನರಿಯಲಿಲ್ಲಾ ಮನವೇ |
ಮರುಳನೋ ತರಳನೋ ಬಲು ದುರುಳನು ನಾನರಿಯೇ ಪ
ಶ್ರೀನಾಥನಂಘ್ರಿ ಕಮಲಾ ಧ್ಯಾನವಿಲ್ಲ ಮನವೇ |
ಮಾನವನಫ ದಾನವನೋ ನೀದನವೇನೋ ನಾನರಿಯೇ 1
ರತಿಯ ಬಿಟ್ಟು ವಿಷಯದಲ್ಲಿ ಗತಿಯಾ ಜರದೀ ಮನವೇ |
ಹಿತವೇನೋ ಮಿತವೇನೋ ಉನ್ಮತವೇನೋ ನಾನರಿಯೇ 2
ಪೊಡವಿಯೊಳು ನರದೇಹವ ವಿಡಿದು ಬಂದೆ ಮನವೇ |
ನಡಿದೇನೋ ನುಡಿದೇನೋ ಸುಖಪಡಿದೇನೋ ನಾನರಿಯೆ 3
ಭಕ್ತಿ ಜ್ಞಾನಾ ಬಲಿವಾ ಸುವಿರಕ್ತಿ ಇಲ್ಲಾ ಮನವೇ |
ಸಕ್ತನೋ ಯುಕ್ತನೋ ಆಯುಕ್ತನೋ ನಾನರಿಯೆ 4
ಗುರು ಮಹಿಪತಿ ಪ್ರಭು ಶರಣರ ಕಾಯ್ದಾ ಮನವೇ |
ನರವರನೋ ಸುರವರನೋ ಕಲ್ಪತರು ವರನೋ ನಾನರಿಯೆ 5