ಒಟ್ಟು 1 ಕಡೆಗಳಲ್ಲಿ , 1 ದಾಸರು , 1 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ರಾಮ ಗೋವಿಂದ ಸೀತಾ - ರಾಮ ಗೋವಿಂದ ಪ.ತೃಪ್ತಿಯಹುದೆ ಹೆತ್ತ ತಾಯಿ ಇಕ್ಕದನಕಭಕ್ತಿಯಹುದೆ ಭಕ್ತಜನರ ಸಲಹದನಕಮುಕ್ತಿಯಹುದೆ ಭಾವಶುದ್ದಿ ಇಲ್ಲದನಕಚಿತ್ತಶುಧ್ಧಿ ಆತ್ಮನಿಜವು ತಿಳಿಯದನಕ 1ಓದಲೇಕೊ ಮನದಿ ಜ್ಞಾನವಿಲ್ಲದನಕಭೇದವೇಕೊ ಗತಿಯುಗಮನ ತಿಳಿಯದನಕಕಾದಲೇಕೊ ಭುಜದಿ ಶಕ್ತಿಯಿಲ್ಲದನಕವಾದವೇಕೊಶ್ರುತಿ- ಶಾಸ್ತ್ರ ತಿಳಿಯದನಕ2ನಳನವಿದ್ದರೇನು ತುಂಬಿಯೊದಗದನಕದಳವು ಇದ್ದರೇನು ಧೈರ್ಯಕೊಡದನಕಲಲನೆಯಿದ್ದರೇನು ಪುತ್ರರಿಲ್ಲದನಕಚೆಲುವನಾದರೇನುವಿದ್ಯೆಕಲಿಯದನಕ3ಮನವಿದ್ದೇಕೊಶುಕ - ಪಿಕವಿಲ್ಲದನಕತನುವಿದ್ದೇಕೊ ಪರಹಿತಕೆ ಬಾರದನಕಮನೆಯಿದ್ದೇಕೊ ಅತಿಥಿಯೊಬ್ಬರಿಲ್ಲದನಕಧನವಿದ್ದರೇನು ದಾನ - ಧರ್ಮಕ್ಕೊದಗದನಕ 4ಹರಿಯ ಚಿಂತೆಯಿರಲು ಅನ್ಯ ಚಿಂತೆಯೇತಕೊಹರಿಯ ಧ್ಯಾನವಿರಲು ಅನ್ಯ ಧ್ಯಾನವೇತಕೊಸಿರಿ ಪುರಂದರವಿಠಲನಿರಲು ಭಯವು ಏತಕೊಹರಿಯ ಒಲಿದ ಮನುಜನಿಗೆ ದೈನ್ಯವೇತಕೊ 5
--------------
ಪುರಂದರದಾಸರು