ಒಟ್ಟು 3 ಕಡೆಗಳಲ್ಲಿ , 3 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ತಂದೆ ಮುದ್ದು ಮೋಹನ್ನ ತವ ಚರಣ ಕಾನಮಿಪೆಬಂದೆನ್ನ ಸಲಹ ಬೇಕೋ ಪ ಎಂದೆಂದಿಗೂ ನಿಮ್ಮ ಪದ ಧ್ಯಾನವಿತ್ತು ಭವಬಂಧನವ ಬಿಡಿಸಬೇಕೋ | ಕರುಣೀ ಅ.ಪ. ಅಂಕಿತವನಿತ್ತೆ ಮನಪಂಕ ಹರಿಸೀ ಹರಿಕಿಂಕರರ ಸಂಗ ಸಲಿಸೋ |ಸಂಕಟವ ಪರಿಹರಿಪ ವೆಂಕಟೇಶನ ಪಾದಪಂಕಜಕೆ ಮಧುಪ ನೆನಿಸೋ |ಶಂಕೆಗಳು ಎಂದೆನಿಪ | ಸೊಂಕು ಜಾಡ್ಯವ ಹರಿಸೆಡೊಂಕು ಮನ ವೈದ್ಯನೆನಿಸೋ |ಮಂಕುಮತಿಯಾದೆನಗೆ ಅಕಲಂಕ ಮಹಿಮನನಲೆಂಕತನವನೆ ಇತ್ತು ಕಾಯೋ | ಕರುಣೀ 1 ಪರಿ ಮಾನವ ಎನ್ನ | ಮರುಕದಿಂದಲಿ ನೋಡಿವಿರಕುತಿಯನಿತ್ತು ಸಲಹೋ | ಕರುಣೀ 2 ಲೆಕ್ಕವಿಲ್ಲದ ದೇಹ ಗೇಹಾದಿಗಳ ಪೊಕ್ಕುಸಿಕ್ಕಿನಿಂದಲಿ ನೊಂದೆನೋ |ಕಕ್ಕಸದ ಸಂಸಾರ | ಅಕ್ಕರವು ಎಂದೆನುತಮರ್ಕಟನ ತೆರನಾದೆನೋ |ಸೊಕ್ಕು ಮೂರೈದನ್ನ | ಮುಕ್ಕಿ ಕಾಡುತ್ತಿರಲುನಕ್ಕು ನೀ ನೋಳ್ಪುದೇನೋ |ಪಕ್ಕಿವಹ ದೇವ ಗುರು ಗೋವಿಂದ ವಿಠ್ಠಲನಅಕ್ಕರದಿ ತೋರಯ್ಯಾ | ಕರುಣೀ 3
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ಪಿಡಿದೆತ್ತೊ ಕೈಯ್ಯಾ ಕೃಷ್ಣಯ್ಯ ಪ ಪಿಡಿದೆತ್ತೊ ಕೈಯ್ಯಾ ಪಾಲ್ಗಡಲೊಡೆಯನೆ ಭವ ಕಡಲಿನೊಳಗೆ ಬಿದ್ದು ಬಾಯ್ಬಿಡುವೆ ಬೇಗದಿ ಬಂದು ಅ.ಪ ತಾವರೆನಾಭಾ ಕಾವದÀು | ಎನ್ನ ಜೀವನಲಾಭಾ ಶ್ರೀವ್ಯಾಸಮುನಿಗೊಲಿದವ | ನೆಂದರಿತು ಬಂದೆ ಶ್ರೀವೇಣುಗೋಪಾಲಕೃಷ್ಣ | ಗೋವಳರೊಡೆಯ ಭಾವ ಭಕುತಿಗಳೊಂದನರಿಯೆನು ಹೇವವಿಲ್ಲದೆ ದಿನವ ಕಳೆದೆನು ಸಾವಧಾನವ ಮಾಡಲಾಗದು ಶ್ರೀವರನೇ ನವವಿಧ ಭಕುತಿ ನೀಡುತ 1 ಅನುಮಾನವ್ಯಾಕೆ | ನೀನೆ ಗತಿ ಎನುವೆನು ಬಲ್ಲಿ ಅನುದಿನ ಸೇವಿಪೆ ಅನಘನೆ | ಎನ್ನಘ ಗಣನೆ ಮಾಡದೆ ಮುನ್ನ ಅನುವಾಗಿ ಪಾಲಿಸೊ ಮಾನವೇದ್ಯನೆ ಮನದಿ ನಿರ ತನುದಿನದಿ ನಿನ್ನಯ ಧ್ಯಾನವಿತ್ತು ಮನೋವಿಷಾದವನಳಿಯೆ ನಿನ್ನನು ಮರೆಯೆನುಪಕೃತಿ ಸತತ ಸ್ಮರಿಸುವೆ 2 ಶ್ರೀ ನರಹರಿಯೆ ಭಕುತಜನ | ವನಜದಿನಮಣಿಯೆ ಸಾನುರಾಗದಿ ಕೇಳ್ವೆ | ಹನುಮನ ಮತದಲ್ಲಿ ಅನುಚಾದ ಜ್ಞಾನವ | ಕನಸಿನಲಿ ಮನಸಿನಲಿ ಜನನಿ ಜನಕ ತನುಜೆ ವನಿತೆಯಾ ತನುವಿನಲಿ ನೆಲೆಸಿರುವ ಭ್ರಾಂತಿಯ ಹೀನಗೈಸಿ ಮನೋಭಿಲಾಷೆಯ ಭಾರ ನಿನ್ನದು 3
--------------
ಪ್ರದ್ಯುಮ್ನತೀರ್ಥರು
ಯೇನು ಕರುಣಾಳೋ ದೇವವರೇಣ್ಯ ಯೇನು ಭಕುತರಧೀನನೋ ಪ ಕನ್ನಯ್ಯ ಧ್ಯಾನವಿತ್ತ ನಾರಾಯಣಾ ಅ.ಪ. ಅನಂತಾನಂತ ಜನುಮದಲ್ಲಿ ಅನ್ನೋದಕ ಕಾಣದಿದ್ದ ದರಿ ದ್ರನ್ನ ಕರವನೆ ಪಿಡಿದು ಮೃಷ್ಠಾನ್ನ ಭೋಜನ ಮಾಡಿಸಿ ಒಡನೆ ತಿರುಗೂವ ಕನ್ನಿ ಸಂಕಲ್ಪ ಕೆದುರುಗಾಣದೆ ಘನ್ನ ಮೂರುತಿ ಕೇಶವಾ 1 ಪಾವನವ ಮಾಡಿದನು ಬಲು ಕೃ ಪಾವಲೋಕನ ಪರಮ ಸೂರ್ಯರ್ ರಾವಣಾಸುರ ಮರ್ದನಾ ಕವಿ ಮನ್ನಿಸಿ ತಪ್ಪನೆಣೆಸದೆ ದೇವ ಜಗತ್ರಯ ಜಿತ ಕರಣ ವಸುದೇವ ದೇವಕೀನಂದನಾ2 ದೋಷರಾಶಿಯೊಳಿದ್ದು ಅನುದಿನ ಮೋಸಗೊಳಿಸುವ ಭವವನಧಿ ಮಧ್ಯ ಈಶ ಕಡಕಾಣಲಾರದೆ ಕ್ಲೇಶದಲಿ ಸಂಚರಿಸುತ್ತಿಪ್ಪ ಮಾನೀಶ ಪಶುವನು ನೋಡಿ ವೇಗದಿ ಲೇಸು ಕೊಡುವೆನೆಂದು ಆನಂದ ದಾಸರೊಳಗಿದ್ದ ನರಹರೀ 3 ಡಂಬಕಾ ಭಕುತಿಯನೆ ಬಿಡಿಸೀ ವೆಂಬೋದೆ ನಿರ್ಮಲ ಮಾಡೀ ಪಾದ ಇಂಬು ಬಯಸುವ ಸುಖವೆ ಪಾಲಿಸಿ ಪೊಂಬುಡೆಧರ ಗೋವಿಂದಾ 4 ಜಪತಪಾನುಷ್ಠಾನ ನಾನಾ ವುಪವಾಸ ವ್ರತದಾನ ಧರ್ಮಗ ಳಪರಿಮಿತವಾದ ಯಾಗ ಕನ್ಯಾದಾನ ನಾನಾಲೋಚನ ಸ್ವಪನದಲಿ ಕಾಣಿಸುವ ತಾನೆ ಕೃಪಣರಿಗೆ ವಲಿದಲ್ಲದೆ ಬಿಡ ಚಪಲ ವಿಜಯವಿಠಲಾ5
--------------
ವಿಜಯದಾಸ