ಒಟ್ಟು 2 ಕಡೆಗಳಲ್ಲಿ , 1 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಶ್ರೀಶನ ಚರಣದಾಸನಾಗಿರ್ದರೆ ಆಶಾಪಾಶ ನೀಗಿರಬೇಕು ಪ ಈಶನರಿತ ಗುರು ಶಿಷ್ಯನಾಗಿರ್ದರೆ ದೂಷಣ ಭೂಷಣ್ಹೋಗಿರಬೇಕು ಅ.ಪ ಹರಿಸರ್ಮಣಾಮೃತ ಸುರಿವನಾಗಿರ್ದರೆ ಧರೆಯ ಭೋಗ ಮೀರಿರಬೇಕು ಪರತತ್ತ್ವದ ಮೂಲರಿತವನಾದರೆ ಮರವೆ ಮಾಯ ಹಾರಿರಬೇಕು 1 ವೇದ ವೇದಾಂತವ ಸಾಧಕನಾದರೆ ವಾದ ವಾಂಛಲ್ಯವ ತೊಡೆದಿರಬೇಕು ಬೋಧ ಪಡೆದು ನಿಜ ಸಾಧುವಾದರೆ ನಾದಶಬ್ದವಡಗಿರಬೇಕು 2 ಮಾನಸಪೂಜೆಯ ಖೂನ ಬಲ್ಲ್ಯಾದರೆ ತಾನು ತನ್ನನು ಅರಿತಿರಬೇಕು ಧ್ಯಾನವಿಡಿದು ನಿಜಜ್ಞಾನಿಯಾದರೆ ಮಾನಭಿಮಾನಕ್ಹೊರತಿರಬೇಕು 3 ಬೋಗದ್ವಾಸನ್ಹಿಂಗಿ ಭಾಗವತನಾದರೆ ಕೂಗಿನ ನೆಲೆ ತಿಳಿದಿರಬೇಕು ಯೋಗ ಬಲಿಸಿ ಮಹಯೋಗಿಯಾದರೆ ರಾಗರಹಿತನಾಗಿರಬೇಕು 4 ಲಿಂಗವ ಧರಿಸಿ ಜಂಗಮನಾದರೆ ಸಂಗರಹಿತನಾಗಿರಬೇಕು ಅಂಗ ಮೂರು ನೀಗಿ ಲಿಂಗ ತಾನಾದರೆ ಲಿಂಗಾಂಗ ಸಮರಸ ತೋರಬೇಕು 5 ಸತ್ಯವರಿತು ಸತ್ಪುರುಷನಾದರೆ ಸತ್ತಂತೆ ಜಗದೊಳಿರಬೇಕು ಮೃತ್ಯುಗೆಲಿದು ಪರಮಾರ್ಥಿಕನಾದರೆ ಮತ್ರ್ಯರ ಗುಣ ಮರ್ತಿರಬೇಕು 6 ಘೋರ ಭವಾಂಬುಧಿ ಪಾರುಗಂಡಿರ್ದರೆ ಪಾರ ಹಾರೈಕೆ ಅಳೆದಿರಬೇಕು ಸಾರಮೋಕ್ಷ ತನ್ನ ಸೇರಬೇಕಾದರೆ ಧೀರ ಶ್ರೀರಾಮನೊಲಿಸಿರಬೇಕು 7
--------------
ರಾಮದಾಸರು
ಸಿಕ್ಕ ಸಮಯ ನಿಜ ತಿಳಿಯದಲೆ ಬರಿ ಕಕ್ಕುಲಾತಿ ನಿನಗ್ಯಾಕಲೆ ಮರುಳೆ ಪ ಬೊಕ್ಕಸ ಭಂಡಾರವೆಲ್ಲ ಸುಳ್ಳೆ ಸುಳ್ಳೆ ನಿನ್ನ ನಿಕ್ಕುವ ಮನೆ ಊರ್ಹೊರಗಿದೆಲೆ ಅ.ಪ ಮೇಲುಮಾಳಿಗೆಮನೆ ಸ್ಥಿರವಲ್ಲ ಬಹು ಬಾಳುವೆ ಧನಸಿರಿ ನಿನಗಿಲ್ಲ ನಾಳೆ ಬಂದೊದಗಲು ಯಮಶೂಲ ಹಿಂ ಬಾಲಿಸಿ ನಿನಗೊಂದು ಬರೋದಿಲ್ಲ 1 ಬಂಧುರ ಬುವಿಯಧಿಕಾರ ನಿಖಿಲ ಮಹ ಅಂದಣೈಶ್ವರ್ಯ ಛತ್ರ ನಂಬಿಗಿಲ್ಲ ತಂದೆ ತಾಯಿ ಬಂಧು ಬಳಗೆಲ್ಲ ನಿನ ಗೊಂದುಕೊಂದು ಸಂಬಂಧವಿಲ್ಲ 2 ಅತಿರಥರೆಲ್ಲರೀ ಭೂಮಿ ಸುಖ ನೆಚ್ಚಿ ಮತಿಗೆಟ್ಟು ಪೊಂದದಿರತಿ ದು:ಖ ಜತೆಯಲಾರ್ವೊಯ್ಯಲಿಲ್ಲಂತೆಕ್ಕ ಸುಳ್ಳೆ ವ್ಯಥೆ ಬಟ್ಟರು ತಿಳಿಯದಿದರ ಲೆಕ್ಕ 3 ಕ್ಷೋಣೆ ಪಾರುಪತ್ಯತನವೆಲ್ಲ ತಿಳಿ ಆನೆ ಕುದುರೆ ಒಂಟೆ ನಿನ್ನದಲ್ಲ ಕಾಣುವುದೆಲ್ಲ ಮಾಯಭವಜಾಲ ಮತ್ತು ಮನುಷ್ಯಜನುಮ ಸೀಗೋದಲ್ಲ 4 ನಾನು ನೀನೆಂಬುವ ದುಷ್ಟಮದ ಸುಟ್ಟು ಜ್ಞಾನದೊಡನೆ ಗೆಲಿ ಭವಬಾಧೆ ಧ್ಯಾನದಾಯಕ ಶ್ರೀರಾಮಪಾದ ನಿಜ ಧ್ಯಾನವಿಡಿದು ಪಿಡಿ ಮುಕ್ತಿಪದ 5
--------------
ರಾಮದಾಸರು