ಅಂಜಬೇಡ ಬೇಡವೆಲೆ ಜೀವ -ಭವ - |ಭಂಜನ ಹರಿಶರಣರ ತಾವ ಪ.ಬಂದಷ್ಟರಿಂದಲಿ ಬಾಳಿಕೊ - ಬಲು - |ಸಂದೇಹಬಂದಲ್ಲಿ ಕೇಳಿಕೊ ||ನಿಂದಾ - ಸ್ತುತಿಗಳನು ತಾಳಿಕೊ - ಗೋ - |ವಿಂದ ನಿನ್ನವನೆಂದು ಹೇಳಿಕೊ 1ಮಾಧವನಿಗೆ ತನುಮನ ಮೆಚ್ಚು - ಕಾಮ - |ಕ್ರೋಧಾದಿಗಳಕಲಿಮಲ ಕೊಚ್ಚು ||ಮೋದತೀರ್ಥವಚನವೆ ಹೆಚ್ಚು -ಮಾಯಾವಾದಿಮತೆಕೆ ಬೆಂಕಿಯ ಹಚ್ಚು 2ಪರವನಿತೆಯ ರಾಶಿಯ ಬಿಡು - ನೀಹರಿಸರ್ವೋತ್ತಮನೆಂದು ಕೊಂಡಾಡು ||ಪರಮಾತ್ಮನ ಧ್ಯಾನವಮಾಡು - ನಮ್ಮ - |ಸಿರಿಪುರಂದರವಿಠಲನ ನೀನೋಡು3