ಒಟ್ಟು 2 ಕಡೆಗಳಲ್ಲಿ , 2 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಇಂದಿಗೆ ಕಡೆಮಾಡು ಎನ್ನ ಮಂದಬುದ್ದಿ ತಂದೆ ಕೇಳಿ ಮರೆಬಿದ್ದೆ ನಿನ್ನವರ ಸುದ್ದಿ ಪ ಒಪ್ಪಿಡ್ಯವಲಕ್ಕಿಗೆ ಒಪ್ಪಿ ಘನ ಬಡತನವ ಕಪ್ಪುಕುಲದವನಿಂಗೆ ತುಪ್ಪ ಸಕ್ಕರೆಯನ್ನು ಗಪ್ಪತ್ತಿಲುಂಡು ಮುಕ್ತಿ ಸಂಪದ1 ವಿದುರನರ್ಧಾಂಗಿಯ ಸದಮಲದ ತವಪಾದ ಸದನಕೈಯಲು ಪದುಮವದನೆ ಮೈ ಮರೆದು ಕದಳಿಫಲ ಮೇಲ್ಭಾಗ ವದನದಿಕ್ಕಲು ಸವಿದು ಸದುಯಾಂಬುಧೊಲಿದಸಮಪದವಿ ದಯಮಾಡ್ದಿ2 ಅಧಮಾಧಮಾಗಿ ದುರ್ಮದದಿಂದ ಮತಿಗೆಟ್ಟು ಸದಮಲ ಕುಲಪದ್ಧತಿ ವಿಧಿಯನ್ನು ಮರೆತು ಅಧಮಕುಲಜಳಿಗೊಲಿದು ಮದುವ್ಯಾದ ಅಜಮಿಳಗೆ ಒದಗಿ ಬಂದಂತ್ಯಕೆ ನಿಜಪದವಿ ಕರುಣಿಸಿದಿ3 ವರಧರ್ಮ ಹಿತಭಕ್ತ ನರನಿವರ ಲೆಕ್ಕಿಸದೆ ಕರುಣದ್ವಿದುರನ ಮನೆಗೆ ಭರದಿ ಬಂದಿಳಿದಿ ಪರಮಪಾವನ ನಿಮ್ಮ ಚರಣಭಕ್ತ್ಯೊಂದೆನಗೆ ಕರುಣಿಸು ಮತ್ತಾವ ಸಿರಿಯ ನಾನೊಲ್ಲೆ 4 ನಿನ್ನ ಎಂಜಲು ಉಣಿಸಿ ನಿನ್ನವರೊಳಾಡಿಸಿ ನಿನ್ನ ಉನ್ನತ ಧ್ಯಾನವನ್ನೆ ದಯಮಾಡಿ ಮನ್ನಿಸಿ ಸಲಹಯ್ಯ ನಿನ್ನ ದಾಸನೆಂದೆನಿಸಿ ಎನ್ನಯ್ಯ ಶ್ರೀರಾಮ ನಿನ್ಹ್ನೊರತನ್ಯರಿಯೆ 5
--------------
ರಾಮದಾಸರು
ನಾಮ ಧರಿಸಿಹೆಯಾ ಮೂರು ನಾಮ ಧರಿಸಿಹೆಯಾ ಶ್ರೀನಿವಾಸ ಪ. ನೀನೆ ಕರ್ತನೆಂದಾ ಮನುಜರಿಗೆಲ್ಲಾ ನಾನೆ ಸಲಹುವೆನೆಂಬ ಬಿರುದಿನ ಮೂರು ಅ.ಪ. ಅಂಬೆಯ ವಕ್ಷದಿ ಇಂಬಿನೊಳಿಟ್ಟು ಸಂಭ್ರಮದೊಳು ಕುಡಿ ನೋಟದಿಂದಾ ಅಂಬುಜಾಕ್ಷ ಬಡವರ ಧನ ಸೆಳೆಯುತ್ತವರ ಬೆಂಬಿಡದೆ ಕಾವೆನೆಂಬ ಬಿರುದ 1 ಸಿರಿ ಅರಸಾನೆಂಬೊ ಬಿರುದು ಥರವೇ ನಿನಗೆ ಹೊರವೊಳಗಿದ್ದು ಜನವ ನಂಬಿಸಿ ಥರಥರದಾಭರಣ ಸುಲಿಗೆಯಗೊಂಬ ತಿರುಪತಿ ತಿರುಮಲರಾಯ ದೊರೆ 2 ನಿನ್ನ ಧ್ಯಾನ ಮಾಳ್ಪ ಭಕ್ತರು ಬಲೆಗೆ ಸಿಕ್ಕುವರೇನೊ ನಿನ್ನ ಪಾದಧ್ಯಾನವನ್ನೆ ಬಯಸುತ್ತ ನಿನ್ನನೆ ಭಕ್ತಪಾಶದಿ ಕಟ್ಟಿ 3 ಚಾರು ಮುಖನೆ ವಂದ್ಯ ನಿನ್ನ ಹಾರೈಸುವ ಭಕ್ತರ ವೃಂದ ಹಾರ ಹಾಕಿ ಮನ ಸೂರೆ ಕೊಟ್ಟ 4 ಭಕ್ತರ ಕಟ್ಟಿಗೆ ಸಿಕ್ಕಬೇಕಲ್ಲದೆ ಭಕ್ತವತ್ಸಲನೆಂಬೊ ಬಿರುದಿಟ್ಟ ಕಾರಣವೇಕೊ ಯುಕ್ತಿಲಿ ನಿನ್ನ ನೆನೆದು ಸಿಕ್ಕಿಸೀ ಭವ ಕಷ್ಟಕಳೆವರೊ ಶ್ರೀ ಶ್ರೀನಿವಾಸ ನಿನ್ನ ಭಕ್ತರಿಷ್ಟಾ 5
--------------
ಸರಸ್ವತಿ ಬಾಯಿ