ಒಟ್ಟು 9 ಕಡೆಗಳಲ್ಲಿ , 7 ದಾಸರು , 9 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಎಲ್ಲಾರು ಮಾಡುವುದು ಹೊಟ್ಟೆಗಾಗಿ ಗೇಣುಬಟ್ಟೆಗಾಗಿಪ ವೇದಶಾಸ್ತ್ರ ಪಂಚಾಂಗವ ಓದಿಕೊಂಡು ಅನ್ಯರಿಗೆಬೋಧನೆಯ ಮಾಡುವುದು ಹೊಟ್ಟೆಗಾಗಿ ಗೇಣುಬಟ್ಟೆಗಾಗಿ 1 ಚಂಡಭಟರಾಗಿ ನಡೆದು ಕತ್ತಿ ಢಾಲು ಕೈಲಿ ಹಿಡಿದುಖಂಡ ತುಂಡ ಮಾಡುವುದು ಹೊಟ್ಟೆಗಾಗಿ ಗೇಣು ಬಟ್ಟೆಗಾಗಿ 2 ಅಂಗಡಿ ಮುಂಗಟ್ಟನ್ಹೂಡಿ ವ್ಯಂಗ್ಯ ಮಾತುಗಳನ್ನಾಡಿಭಂಗ ಬಿದ್ದು ಗಳಿಸುವುದು ಹೊಟ್ಟೆಗಾಗಿ ಗೇಣು ಬಟ್ಟೆಗಾಗಿ 3 ಕುಂಟೆ ತುದಿಗೆ ಕೊರಡು ಹಾಕಿ ಹೆಂಟೆ ಮಣ್ಣು ಸಮನು ಮಾಡಿರೆಂಟೆ ಹೊಡೆದು ಬೆಳೆಸುವುದು ಹೊಟ್ಟೆಗಾಗಿ ಗೇಣು ಬಟ್ಟೆಗಾಗಿ 4 ಬೆಲ್ಲದಂತೆ ಮಾತಾನಾಡಿ ಎಲ್ಲರನ್ನು ಮರುಳು ಮಾಡಿಸುಳ್ಳು ಬೊಗಳಿ ತಿಂಬುವುದು ಹೊಟ್ಟೆಗಾಗಿ ಗೇಣು ಬಟ್ಟೆಗಾಗಿ 5 ಕೊಟ್ಟಣವನು ಕುಟ್ಟಿಕೊಂಡು ಕಟ್ಟಿಗೆಯನು ಹೊತ್ತುಕೊಂಡುಕಷ್ಟ ಮಾಡಿ ಉಣ್ಣುವುದು ಹೊಟ್ಟೆಗಾಗಿ ಗೇಣು ಬಟ್ಟೆಗಾಗಿ 6 ತಾಳ ದಂಡಿಗೆ ಶ್ರುತಿ ಮೇಳ ತಂಬೂರಿಯ ಹಿಡಿದುಕೊಂಡುಸೂಳೆಯಂತೆ ಕುಣಿಯುವುದು ಹೊಟ್ಟೆಗಾಗಿ ಗೇಣು ಬಟ್ಟೆಗಾಗಿ 7 ಸಂನ್ಯಾಸಿ ಜಂಗಮ ಜೋಗಿ ಜಟ್ಟಿ ಮೊಂಡ ಬೈರಾಗಿನಾನಾ ವೇಷಗಳೆಲ್ಲ ಹೊಟ್ಟೆಗಾಗಿ ಗೇಣು ಬಟ್ಟೆಗಾಗಿ 8 ಹಳ್ಳದಲ್ಲಿ ಕುಳಿತುಕೊಂಡು ಕಲ್ಲು ದೊಣ್ಣೆ ಹಿಡಿದುಕೊಂಡುಕಳ್ಳತನವ ಮಾಡುವುದು ಹೊಟ್ಟೆಗಾಗಿ ಗೇಣು ಬಟ್ಟೆಗಾಗಿ 9 ಅಂದಣ ಪಲ್ಲಕ್ಕಿ ಏರಿ ಮಂದಿ ಮಾರ್ಬಲ ಕೂಡಿಚಂದದಿಂದ ಮೆರೆಯುವುದು ಹೊಟ್ಟೆಗಾಗಿ ಗೇಣು ಬಟ್ಟೆಗಾಗಿ 10 ಉನ್ನತ ಕಾಗಿನೆಲೆಯಾದಿಕೇಶವನಾ ಧ್ಯಾನವನ್ನುಮನಮುಟ್ಟಿ ಮಾಡುವುದು ಮುಕ್ತಿಗಾಗಿ ಆನಂದಕಾಗಿ 11
--------------
ಕನಕದಾಸ
ಏನೆಂದು ಬಣ್ಣಿಸಲಿ ಎಲೆ ಧನವೆ ನಿನ್ನ ಮಾಣುವ ವಿಷಯಸುಖ ಅಹುದೆನಿಪ ಪರಿಯ ಪ ಏರಿಸುವಿ ಹಿರಿಕುದುರೆ ತೋರಿಸುವಿ ದುರ್ಮದವ ಹಾರಿಸುವಿ ಸುವಿಚಾರ ಮೀರಿಸುವಿ ಸುಪಥ ದೂರಿಸುವಿ ಮಹನೀತಿ ಘೋರಿಸುವಿ ಬಡವರನು ಕಾರಿಸುವಿ ತಿಂದನ್ನ ಧಾರುಣಿಯೊಳು 1 ಮೆರೆಸುವಿ ಅಂದಣದಿ ಸುರಿಸುವಿ ದುರ್ವಚನ ನರಸುವಿ ಎಡಬಲದಿ ಪರಿಪರಿಯ ಜನರ ತರಿಸುವಿ ಸತಿಸುತರ ಇರಿಸುವಿ ಅರಮನೆಯೊಳ್ ಮರೆಸುವಿ ಮಹಿಮರ ಸಂದರುಶನದ ಸುಖವ 2 ವೇದಶಾಸ್ತ್ರಕಿಳಿಸುವಿ ವಾದನುಡಿ ಕಲಿಸುವಿ ನೀ ಸಾಧುಸಜ್ಜನರ ನಿಜಬೋಧ ತೋರಿಸುವಿಯೋ ಭೇದನಿಕ್ಕುತ ವೈರ ಸಾಧಿಸುತ ಪರಲೋಕ ಸಾಧನೆಯ ಕೆಡಿಸ್ಯಮಬಾಧೆಗಾನಿಸುವಿ 3 ತೊಡಿಸುವಿ ವಿಧವಿಧದ ಒಡವೆವಸ್ತ್ರಂಗಳನು ನುಡಿಸುವಿ ಕಡೆತನಕ ಕಡುದುಗುಡ ಬಡಿಸುವಿ ಬಲುಜಂಬ ನಡೆಸುವಿ ದುಷ್ಷಥದಿ ಕೆಡಿಸುವಿಯೋ ಸಲೆ ಪುಣ್ಯಪಡೆದ ನರಜನುಮ 4 ಇನ್ನೆಷ್ಟು ಬಣ್ಣಿಸಲಿ ನಿನ್ನ ಕರುಣದ ಗುಣವ ನಿನ್ನ ನಂಬಲು ಬಿಡದೆ ಕುನ್ನಿಯೆಂದೆನಿಸಿ ಪನ್ನಂಗಶಯನ ಮಮ ಸನ್ನುತಾಂಗ ಶ್ರೀರಾಮ ನುನ್ನತಂಘ್ರಿಯ ಧ್ಯಾನವನ್ನು ಅಗಲಿಸುವಿ 5
--------------
ರಾಮದಾಸರು
ದಂಡು ಬರುತಿದೆ ಆರೇರ ದಂಡು ಬರುತಿದೆ ಬಂದೆವು ನಾಲ್ಕು ಮಂದಿ ಪ ಅಮ್ಮ ಲಿಮ್ಮಿ ಬೊಮ್ಮಿ ನಾನು ಸುಮ್ಮನೊಂದು ಮರೆಯಲಿರಲು ಜಮ್ಮನವರು ಬಂದು ಹಿಡಿದು ಗುಮ್ಮಿಹೋದರು ನಮ್ಮನ್ನೆಲ್ಲ 1 ಅತ್ತೆಮಾವ ಮೈದುನರು ಎತ್ತಹೋದರೋ ಕಣ್ಣಲಿಕಾಣೆ ಕತ್ತೆ ಹೆಣ್ಣೆ ಹೋಗು ಎಂದು ಬತ್ತಲೆಬಿಟ್ಟರು ಎನ್ನ 2 ದಿಂಡ್ಯ ದಿಂಡ್ಯ ಜವ್ವನೆಯರು ಕಂಡ ಕಂಡೆಗೆ ಹೋಗಿ ಬೇಗ ದಂಡಿನವಗೆ ಸಿಕ್ಕಿ ಕೆಟ್ಟು ಕೊಂಡು ಬಾಳ್ವುದೊಳ್ಳಿತಲ್ಲ 3 ರಂಡೆ ಮುಂಡೆರೆಂದವರು ಬಿಡರು ಕಂಡಮಾತ ಹೇಳುತೇನೆ ಪೆಂಡಾರರಿಗೆ ಸಿಕ್ಕು ಕೆಟ್ಟು ಗಂಡು ಕೂಸು ಪಡೆಯದಿರಿ 4 ಮಾನವುಳ್ಳ ಹೆಣ್ಮಕ್ಕಳು ನಾನು ಪೇಳ್ವಮಾತಕೇಳಿ ತಾನೆ ಸೇರಿ ಲಕ್ಷ್ಮೀರಮಣ ಧ್ಯಾನವನ್ನು ಮಾಡುಕಂಡ್ಯಾ 5
--------------
ಕವಿ ಪರಮದೇವದಾಸರು
ದಾಸನಾಗೋ ಭವಪಾಶನೀಗೋ - ವಿಶೇಷನಾಗೋ ಪ ಏಸೊ ಕಾಯಂಗಳ ಕಳೆದು ಎಂಬತ್ತ್ನಾಲ್ಕು ಲಕ್ಷ ಜೀವರಾಶಿಯನ್ನು ದಾಟಿ ಬಂದೆ ಈ ಶರೀರ ತಾನಲ್ಲ ತನ್ನದಲ್ಲಆಶೆಯು ತರವಲ್ಲ ಸ್ಥಿರವಲ್ಲ ಮುಂದೆ ಬಾಹೋದಲ್ಲಆಶಾಕ್ಲೇಶ ದೋಷವೆಂಬ ಅಬ್ಧಿಯೊಳು ಮುಳುಗಿ ಯಮನಪಾಶಕ್ಕೊಳಗಾಗದೆ ನಿರ್ದೋಷಿಯಾಗೊ - ಸಂತೋಷಿಯಾಗೊಅ ಕಾಶಿ ವಾರಣಾಸಿ ಕಂಚಿ ಕಾಳಹಸ್ತಿ ರಾಮೇಶ್ವರಏಸು ದೇಶ ತಿರುಗಿದರೆ ಬಾಹೋದೇನೊ - ಅಲ್ಲಿ ಆಹೋದೇನೊದೋಷನಾಶೆ ಕೃಷ್ಣವೇಣಿ ಗಂಗೆ ಗೋದಾವರಿ ಭವನಾಶಿ ತುಂಗಭದ್ರೆ ಯಮುನೆ ವಾಸದಲ್ಲಿ - ಉಪವಾಸದಲ್ಲಿಮೀಸಲಾಗಿ ಮಿಂದು ಜಪತಪ ಹೋಮನೇಮಗಳಏಸು ಬಾರಿ ಮಾಡಿದರೂ ಫಲವೇನೊ - ಇದು ಚೆಲುವೇನೊವಾಸುದೇವನೆಂಬ ಒಳಗಿಹ ಹಂಸನ ಸೇರಿಲೇಸನುಂಡು ಮೋಸಗೊಳದೆ ಮುಕ್ತನಾಗೊ - ನೀ ಶಕ್ತನಾಗೊ1 ಅತ್ತಲೋ ಇತ್ತಲೋ - ಎತ್ತಲೋ ಈ ಸಂಸಾರಬತ್ತಲೆಗೆ ಬತ್ತಲೆ ನಿತ್ಯವಲ್ಲ - ಪರಿಮಿತಿ ಇಲ್ಲಕತ್ತಲೆ ಕಾವಳದೊಳು ಕಾಣಲಾರದೆ ನೀನುಸತ್ಯವೆಂಬ ದಾರಿಯನು ಸೇರಲಿಲ್ಲ - ಲೇಸು ತೋರಲಿಲ್ಲಉತ್ತಮ ಅ ಉ ಮ ಎಂಬ ಓಂಕಾರ ಬೀಜಾಕ್ಷರಚಿತ್ತದಲಿ ಗ್ರಹಿಸು ನೀ ಬಿಡಬೇಡ - ಬಿಟ್ಟು ಕೆಡಬೇಡಹೊತ್ತಾರೆಯಲೊ ಬೈಗಿನಲೊ ಆಗಲೊ ಈಗಲೊ ಕಾಯನಿತ್ಯವೆಂದು ಸ್ಥಿರವೆಂದು ನಂಬಬೇಡ - ನಿನಗೆ ಡಂಬ ಬೇಡ 2 ಆಯಿತೊ ಹೋಯಿತೊ ಏನಾಯಿತೊ ಈ ದೇಹಕ್ಕೆತಾಯಿ ಯಾರೊ ತಂದೆ ಯಾರೊ ಮಡದಿ ಯಾರೊ ಮಕ್ಕಳ್ಯಾರೊಮಾಯದೊಳು ಸಿಲುಕಿ ಬಲು ಕಾಲದಿಂದ ಶ್ರೀರಘುರಾಯನೆಂಬ ವಸ್ತುವಿನ ಸ್ಮರಣೆ ಬಿಟ್ಟು - ಭವದಿ ಮಮತೆ ಇಟ್ಟುನಾಯ ಬಾಯ ಅರಿವೆಯಂತೆ ನಾನಾ ಕೋಟಲೆಯಲಿ ಬಿದ್ದುಬಾಯಿ ಬಾಯಿ ಬಿಡುತಲಿ ಸಾವುದೇನೊ - ನೀ ನೋವುದೇನೊತ್ರಾಯಿ ತ್ರಾಯಿ ತ್ರಾಯಿಯೆಂದು ತ್ರೈಲೋಕ್ಯದೊಡೆಯ ಪುಣ್ಯದಾಯಕನ ಹೊಂದಿ ನೀ ಧನ್ಯನಾಗೊ - ಮುಕ್ತ ಮಾನ್ಯನಾಗೊ 3 ಸಿರಿ ಕಮಲೇಶನನ್ನುಒಂದು ಬಾರಿ ಅರುಹಿಂದ ನೆನೆಯಲಿಲ್ಲ - ಮನ ತಣಿಯಲಿಲ್ಲಬಂದು ಬಂದು ಭ್ರಮೆಗೊಂಡು ಮಾಯಾಮೋಹಕೆ ಸಿಕ್ಕಿನೊಂದು ಬೆಂದು ಒಂದರಿಂದ ಉಳಿಯಲಿಲ್ಲ - ಬಂಧ ಕಳೆಯಲಿಲ್ಲಸಂದೇಹವ ಮಾಡದಿರು ಅರಿವು ಎಂಬ ದೀಪ ಹಿಡಿದುಇಂದು ಕಾಣು ದೇಹದಲಿ ಪಿಂಡಾಂಡ - ಹಾಗೆ ಬ್ರಹ್ಮಾಂಡಇಂದಿರಾ ರಮಣನ ಧ್ಯಾನವನ್ನು ಮಾಡಿ ವಿವೇಕದಿ ಮುಕುಂದನಿಂದ ಮುಕುತಿಯ ಬೇಡು ಕಂಡ್ಯ - ನೀ ನೋಡು ಕಂಡ್ಯ 4 ತುಂಬಿ ಲಂಡ
--------------
ಕನಕದಾಸ
ನಿನ್ನ ನಂಬಿದವರಿಗೆ ಇನ್ನು ಕೊರತೆಗಳುಂಟೆ ಪನ್ನಗಾದ್ರಿನಿವಾಸ ಶ್ರೀ ವೆಂಕಟೇಶ ಪ. ಬನ್ನ ಬಡಿಸದೆ ಎನ್ನ ಧ್ಯಾನವನ್ನು ಮರೆವರು ಭಕ್ತರಂದು ಬನ್ನ ಬಿಡಿಸಿ ಪೊರೆವೆ ಕರುಣದಿ ಅ.ಪ. ಅಧಿಕ ಸಂಸಾರದಿ ಪದೆಪದೆಗೆ ತೊಡರುಗಳ ಬದಿಗನಾಗಿದ್ದವರಿಗೆ ಕೊಟ್ಟು ಸದಮಲಾನಂದ ಪರೀಕ್ಷಿಸುವೆ ತವಕದಿ ಚದುರಿಸುತ ಮನವನ್ನು ಅದುಭುತನೆ ನಸುನಗುತ ನೀನೋಡುತ್ತ ಹೆದರಿ ಬೆದರಿ ನಿನ್ನ ಧ್ಯಾನಕ್ಕೊದಗಲಿ ಮನವೆಂಬೆಯಲ್ಲದೆ ಮಧುರವಾಣಿಯ ತೋರಿ ಸಲಹಲು ವದಗಿ ಕಾಯುವೆ ಭಕ್ತರನ್ನು (ಚದುರ ನಿನಗೆಣೆಗಾಣೆ ಜಗದೊಳು) 1 ಜಾಣರೊಳತಿ ಜಾಣತನ ತೋರುತ್ತ ಕಾಣಿಸಿ ಕಾಣದಂತಿರುತ ಭಕ್ತರೊಳು ಗಾಣಕೆ ಸಿಲ್ಕಿದ ಎಳ್ಳು ಸಚ್ಛದೆಣ್ಣೆ ಮಾಣದೆ ಬರುವ ತೆರ ತೋರುವೆ ಜನಕೆ ಕಾಣದಿಹ ಕಾಮಕ್ರೋಧದ್ಹಿಂಡಿಯ ಮಾಣದೆ ಬೇರ್ಪಡಿಪೆಯಲ್ಲದೆ ಇದು ಕಾಣ್ವರು ನಿನ್ನ ಚರಣದಂಘ್ರಿಯ ಕಾಣುತಲೆ ಸ್ತುತಿಮಾಡಿ ಹಿಗ್ಗುತಲಿಹರು 2 ದಿಟ್ಟಮೂರುತಿ ಕೇಳೊ ಕೊಟ್ಟರೊಳ್ಳಿತು ಕಷ್ಟ ಉತ್ಕøಷ್ಟವಾಗಲಿ ಹರಿಯೆ ಎನ್ನ ದೊರೆಯೆ ಕಟ್ಟಕಡೆ ನಿನ ಧ್ಯಾನ ಕೊಟ್ಟು ಕಾಯುವ ಭಾರ ಘಟ್ಟಿ ಕಂಕಣ ಕಟ್ಟಿ ನಿಂತಿಹೆ ಶ್ರೀ ಶ್ರೀನಿವಾಸ ಎನ್ನ ದುಷ್ಟತನವೆಲ್ಲ ಕುಟ್ಟಿ ಕೆಡಹುವೆ ಕಟ್ಟಕಡೆಗೆ ನಿನ್ನ ಪಾದಾಂಗುಷ್ಠ ಸೇರಲಿಯೆಂದಾ ಭಕ್ತರ ಬೆಟ್ಟದೊಡೆಯನೆ ಸಲಹುತಿರುವೆ ಉತ್ಕøಷ್ಟ ಮೂರುತಿ ಭಕ್ತರಿಷ್ಟದಾಯಕ 3
--------------
ಸರಸ್ವತಿ ಬಾಯಿ
ಮಧ್ವಮತವ ಪೊಂದದವನ ಭಕುತಿಯಾತಕೆ ಪ ಊಧ್ರ್ವಪುಂಡ್ರ ತಿದ್ದದವನ ಕರ್ಮವ್ಯಾತಕೆಅ.ಪ ದಾನವನ್ನು ಮಾಡದವನ ದ್ರವ್ಯವ್ಯಾತಕೆ | ಸ್ನಾನವನ್ನು ಮಾಡದವನ ಮೌನವ್ಯಾತಕೆ | ಮಾನಿನಿಯು ಇಲ್ಲದವನ ಬದುಕು ಯಾತಕೆ | ಧ್ಯಾನವನ್ನು ಅರಿಯದವನ ಪೂಜೆ ಯಾತಕೆ 1 ವಂಶವನ್ನುದ್ಧರಿಸದಂಥ ಮಗನು ಯಾತಕೆ | ಹಿಂಸೆಯನ್ನು ಪಡಿಸುವಂಥ ಅರಸು ಯಾತಕೆ || ಸಂಸಾರವನು ಒಲ್ಲದಂಥ ಸತಿಯು ಯಾತಕೆ | ಕಂಸಾರಿಯನು ತಿಳಿಯದಂಥ ಜ್ಞಾನವ್ಯಾತಕೆ 2 ಬಂಧು ಬಳಗ ಬಿಟ್ಟು ಉಂಬ ನೆಂಟರ್ಯಾತಕೆ | ಕಂದರನ್ನು ಮಾರುತಿಪ್ಪ ತಂದೆಯಾತಕೆ || ಬಂದ ಅತಿಥಿಗನ್ನವಿಕ್ಕದ ಸದನವ್ಯಾತಕೆ | ನಿಂದೆಗಳು ಮಾಡುತಿಹನಾಚಾರವ್ಯಾತಕೆ 3 ಗುರೂಪದೇಶವಿಲ್ಲದಂಥ ಮಂತ್ರವ್ಯಾತಕೆ | ಹಿರಿಯರನ್ನು ಸಾಕದವನ ಪುಣ್ಯವ್ಯಾತಕೆ || ಚರಿಸಿ ತೀರ್ಥಯಾತ್ರೆ ಮಾಡದ ದೇಹವ್ಯಾತಕೆ | ವರ-ಪ್ರಸಾದವೀಯದಂಥ ದೇವರ್ಯಾತಕೆ4 ಏಕಾದಶಿಯ ಮಾಡದವನ ವ್ರತವು ಯಾತಕೆ | ಏಕಮನಸು ಇಲ್ಲದವನ ನಡತೆ ಯಾತಕೆ || ಸಾಕಿದವನ ಕೊಲ್ಲುವಂಥ ಭಂಟನ್ಯಾತಕೆ | ಲೋಕವಾರ್ತೆ ಬಿಡದವನ ಜಪವು ಯಾತಕೆ 5 ಭಾಷೆ ಬದ್ಧವಿಲ್ಲದವನ ಮಾತು ಯಾತಕೆ | ಕಾಸುವೀಸÀಕೆ ಬಡಿದಾಡುವ ಅನುಜರ್ಯಾತಕೆ || ಲೇಸು ಹೊಲ್ಲೆಹ ನೋಡದಂಥ ಗೆಳೆಯನ್ಯಾತಕೆ | ಆಸೆಯನ್ನು ಬಿಡದ ಸನ್ಯಾಸವ್ಯಾತಕೆ 6 ತಪ್ತ ಮುದ್ರೆಯಿಲ್ಲದವನ ಜನ್ಮವ್ಯಾತಕೆ | ಗುಪ್ತದಲ್ಲಿ ನಡೆಯದಿಪ್ಪ ದಾಸನ್ಯಾತಕೆ || ಆಪ್ತಬಂಧು ವಿಜಯವಿಠ್ಠಲನ ಶ್ರೀ ಚರಣದಿ | ಕ್ಲುಪ್ತ ಮೀರದೆ ನಡೆದ ಮೇಲೆ ನರಕವ್ಯಾತಕೆ 7
--------------
ವಿಜಯದಾಸ
ಕಕ್ಷಾದೇವತೆಗಳ ಮನನ115ಪ್ರಾಣ ಪಾಲೀಸಿಂದ್ರಾನ ರಾಣೀ ದಕ್ಷಾನಿರುದ್ಧಾ |ಮಾನಿನಿರತಿಮನುಗುರುವಾಯು ಕೋಲೆ ||ಮಾನಿನಿರತಿಮನುಗುರುವಾಯು ಯಮಸೋಮ|ಮಾನವಿ ಭಾಸ್ಕರಗೆರಗೂವೆ ಕೋಲೆ 1ವರುಣ ನಾರದವಹ್ನಿತರುಣಿ ಪ್ರಸೂತಿ ಭೃಗು |ಸರಸೀಜಾಸನನ ಪುತ್ರರಾರೊಂದು ಕೋಲೆ ||ಸರಸೀಜಾಸನನ ಪುತ್ರರಾರೊಂದು ಮಂದಿಗಳ |ವರನಾಮ ವಿಸ್ತರಿಸಿ ವಂದಿಪೆ ಕೋಲೆ 2ಅಂಗೀರಾ ಪುಲಸ್ತ್ಯ ಅತ್ರಿ ಮಂಗಳಾಂಗ ಪುಲಹ ಕೃತು |ತುಂಗವಶಿಷ್ಠಿ ಮರೀಚಿಗೊಂದಿಪೆ ಕೋಲೆ ||ತುಂಗವಶಿಷ್ಠ ಮರೀಚಿ ವಿಶ್ವಾಮಿತ್ರನಿಗೆ ಮತ್ಸ್ಯಾ |ನಂಗ ಕಂಡ ವೈವಸ್ವತಗೊಂದಿಸುವೆ ಕೋಲೆ3ನಿರರುತಿ ಪ್ರಾವಾಹಿಮಿತ್ರಗುರುಪತ್ನೀಗೆ ವಂದಿಸುವೆ |ಕರಿಮುಖ ವಿಶ್ವಕ್ಸೇನ ಪೌಲಸ್ತ್ಯ ಕೋಲೆ ||ಕರಿಮುಖ ವಿಶ್ವಕ್ಸೇನ ಪೌಲಸ್ತ್ಯ ಅಶ್ವಿನೀಗ |ಳಿರಳೂ ಹಗಲೂ ನಾ ಸ್ಮರಿಸೂವೆ ಕೋಲೆ 4ಮರುತೂ ನಾಲ್ವತ್ತೊಂಬತ್ತುಗುರುವಿಶ್ವೇದೇವ ಹತ್ತು |ಎರಡು ಅಶ್ವೀನೀ ರುದ್ರರ್ಹನ್ನೊಂದೂ ಕೊಲೆ ||ಎರಡು ಅಶ್ವೀನೀ ರುದ್ರರ್ಹನ್ನೊಂದೂ ವಸುಯಂಟು |ಎರಡಾರು ಸೂರ್ಯರಿಗೆರಗೂವೆ ಕೋಲೆ 5ಭಾರತೀ ಭರತಾಗೆ ಮೂರು ಪಿತೃಗಳಿಗೆ |ಧಾರೂಣೀ ಋಭುವೀಗೆರಗುವೆ ಕೋಲೆ ||ಧಾರೂಣೀ ಋಭುವೀಗೆರಗೂವೆ ತಿಳೀವದು |ನೂರು ಮಂದೆಂದೂ ಕರಸೋರು ಕೋಲೆ 6ಮೂರು ಮಂದೀ ಉಳಿದೂ ಈರೈದು ಒಂದು ಮನು |ಚಾರುನಾಮಗಳ ವರ್ಣೀಪೆ ಕೋಲೆ ||ಚಾರುನಾಮಗಳ ವರ್ಣೀಪೆ ದಯಮಾಡಿ |ಸೂರಿಗಳೆಲ್ಲಾ ಕೇಳ್ವೋದು ಕೋಲೆ 7ಸ್ವಾರೋಚೀಷೋತ್ತುಮಾನು ಶ್ರೀ ರೈವತ ಚಾಕ್ಷುಷಾ |ನಾರಾಯಣನ ದಾಸ ಸಾವರ್ಣಿ ದಕ್ಷಾ ಕೋಲೆ ||ನಾರಾಯಣನ ದಾಸ ಸಾವರ್ಣಿ ದಕ್ಷ ಬ್ರಹ್ಮ |ಮಾರಾರಿದೇವ ಧರ್ಮ ಇಂದ್ರ ಸಾವರ್ಣೀ ಕೋಲೆ 8ಎಂದಿವರೀಗೊಂದೀಸಿ ಮುಂದೆ ಚವನ ಋಷಿ |ನಂದಾನೋಚಿತ್ಥ್ಯ, ಪಾವಕಾ, ಧೃವ, ನಹುಷ ಕೋಲೆ ||ನಂದಾನೋಚಿತ್ಥ್ಯಪಾವಕಧೃವನಹುಷಶಶಿ|ಬಿಂದೂ ಪ್ರಹ್ಲಾದ ಪ್ರಿಯ ವೃತಗೊಂದಿಸುವೆ ಕೋಲೆ9ಶಾಮಲಾ ಗಂಗಾ ಉಷಾ ಸೋಮರಾಣಿ ಸಂಜ್ಞಾ |ಧೀಮಂತ ಪರ್ಜನ್ಯಾಖ್ಯ ಸೂರ್ಯಗೆ ಕೋಲೆ ||ಧೀಮಂತ ಪರ್ಜನ್ಯಾಖ್ಯ ಸೂರ್ಯಗೆ ವಂದಿಸೀ ಅನ |ಭೀ ಮಾನೀ ಸೂರರನ್ನ ಮನದೊಳು ನೆನವೆನೆ ಕೋಲೆ 10ಅನಲರಸೀಬುಧಅಶ್ವಿನಿ ಭಾರ್ಯಾ ಛಾಯಾ ಪುತ್ರ |ಶನಿ ಪುಷ್ಕರಜಾನೂಜ ದೇವತಿಗಳಿಗೆ ಕೋಲೆ ||ಶನಿ ಪುಷ್ಕರಜಾನೂಜ ಮನ ದೇವತೆಗಳಿಗೊಂದಿಪೆ ಸು |ಪ್ರಾಣೇಶ ವಿಠಲಾನಲ್ಲಿರಲೆಂದು ಕೋಲೆ 11ಉರುವಸೀ ಮುಖ್ಯ ಅಪ್ಸರ ಸ್ತ್ರೀಯರೀಗೊಂದಿಸೀ |ಹರಿನಾರಿಯರ ಪಾದಕ್ಕೆರಗೂವೆ ಕೋಲೆ ||ಹರಿನಾರಿಯರ ಪಾದಕ್ಕೆರಗಿ ಪಿತೃಗಂಧರ್ವ |ನರನಾರಪತಿಮನುಷ್ಯೋತ್ತಮರಿಗೊಂದಿಸುವೆ ಕೋಲೆ12ಈ ನಿರ್ಜರರ ಧ್ಯಾನವನ್ನು ಮಾಡುತ್ತಾ |ಪ್ರಾಣೇಶ ವಿಠಲನ ಆ ನಾಭಿಯಿಂದ ||ಪ್ರಾಣೇಶ ವಿಠಲನ ಆ ನಾಭಿಯಿಂದ ಬಂದ |ಜ್ಞಾನಿಗಳ ಸಂತತೀ ನಾ ವರ್ಣಿಸುವೆ ಕೋಲೆ 13
--------------
ಪ್ರಾಣೇಶದಾಸರು
ನಿಂದೆಯಾಡಲುಬೇಡ ನೀಚಾತ್ಮ - ನಿನಗೆಂದೆಂದು ದೊರಕನು ಪರಮಾತ್ಮ ಪ.ನರಜನ್ಮಕೆ ಬಂದು ನೀ ನಿಂತಿ -ಪರಿಪರಿ ಮಾಡಿದೆಯೊ ಪರದ ಚಿಂತಿಗರುವದಿಂದ ಹಲ್ಲುತಿಂತಿ - ಇದುಸ್ಥಿರವಲ್ಲ ಮೂರುದಿನದ ಸಂತಿ 1ಪರಸತಿಯರ ಕಂಡು ಹೋಗಿ - ಅಲ್ಲಿಪರಮಾತ್ಮನ ಧ್ಯಾನವನ್ನು ನೀನೀಗಿಪರಲೋಕ ಹೇಗೆ ಕಾಣುವೆ ಕಾಗಿ - ನೀನುಪರಪರಿಯಲಿ ನೋಡಲೊ ಗೂಗಿ 2ಬಾಳಿಗೆ ಒಂದೇ ಫಲವುನೋಡು - ಅಲ್ಲಿಕಳ್ಳಸುಳ್ಳರಿಗೆ ಬಲು ತೋಡುಬಾಳ್ವೆವಂತರ ಹುಡುಕಾಡು - ಶ್ರೀಲೋಲಪುರಂದರವಿಠಲನೊಳಾಡು3
--------------
ಪುರಂದರದಾಸರು
ಹುಚ್ಚುಕುನ್ನಿ ಮನವೇ ನೀಹುಚ್ಚುಗೊಂಬುದು ಘನವೇ ಅಕಚ್ಚುಕದನತನವ ಬಿಟ್ಟುಅಚ್ಯುತನ ಪದವ ಮುಟ್ಟು ಅಪಸ್ನಾನ ಮಾಡಿದರೇನು - ಸಂಧ್ಯಾನವ ಮಾಡಿದರೇನುಹೀನತನವ - ಬಿಡಲಿಲ್ಲಸ್ವಾನುಭಾವ ಕೂಡಲಿಲ್ಲ 1ಜಪವ ಮಾಡಿದರೇನು - ನೀತಪವ ಮಾಡಿದರೇನುಕಪಟ ಕಲ್ಮಷ ಕಳೆಯಲಿಲ್ಲಕಾಮಿತಾರ್ಥಪಡೆಯಲಿಲ್ಲ2ಮೂಗು ಹಿಡಿದರೇನು - ನೀಮುಸುಕನಿಕ್ಕಿದರೇನುಭೋಗಿಶಯನು ವರ್ತಿಸಲಿಲ್ಲದೇವಪೂಜೆ ಮಾಡಲಿಲ್ಲ 3ಗರುವನಾದರೇನು - ನೀಗೊರವನಾದರೇನುಗುರುವಿನ ಸ್ವಾಮ್ಯವ ತಿಳಿಯಲಿಲ್ಲಗುರುವುಪದೇಶ ಪಡೆಯಲಿಲ್ಲ 4ಹೋಮ ಮಾಡಿದರೇನು - ನೀನೇಮವ ಮಾಡಿದರೇನುರಾಮನಾಮ ಸ್ಮರಿಸಲಿಲ್ಲಮುಕುತಿ ಪಥವ ಪಡೆಯಲಿಲ್ಲ 5ನವದ್ವಾರವ ಕಟ್ಟು ನೀನಡುವಣ ಹಾದಿಯ ಮುಟ್ಟುಅವಗುಣಗಳ ಬಿಟ್ಟುಭಾನುಮಂಡಲ ಮನೆಯ ಮುಟ್ಟು 6ಏನು ನೋಡಿದರೇನು ನೀನೇನ ಮಾಡಿದರೇನುಧ್ಯಾನವನ್ನು ಮಾಡಲಿಲ್ಲಪುರಂದರವಿಠಲನ ಸ್ಮರಿಸಲಿಲ್ಲ7
--------------
ಪುರಂದರದಾಸರು