ಒಟ್ಟು 4 ಕಡೆಗಳಲ್ಲಿ , 4 ದಾಸರು , 4 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಇಂದು ನಿನ್ನಪಾದ ಸನ್ನಿಧಿಯ ಘನ್ನ ದರುಶನದಿಂದಲಿಪ ಮುನ್ನ ದುರಿತಗಳೆಲ್ಲವು ಛಿನ್ನಛಿನ್ನವುಮಾಡಿ ಬನ್ನಬಡಿಸದೆ ಎಮ್ಮ ಸಲಹುವಸ್ವಾಮಿ ಅ.ಪ ಸುಮನಸರೊಡೆಯ ಕಾಲನಾಮಕನಾಗಿಪ್ಪ ಮೋದ ನಾಮ ವತ್ಸರದಿ ವಿಮ¯ ಚೈತ್ರಕೃಷ್ಣಪಕ್ಷದಶಮಿ ಸೌಮ್ಯವಾಸರದಿ ದ್ಯುಮಣಿ ಉದಯಕಾಲದಲಿ ಮಮಕುಲಸ್ವಾಮಿಯೆ ಎನ್ನ ವಂಶಜಾಪ್ತರ ಅಮಿತಶ್ರಮ ಪರಿಹರಿಸಿ ಈಗ ಶ್ರೀಮನೋಹರ ನಿನ್ನ ವಿಶ್ವರೂಪವ ತೋರ್ದೆ ಪ್ರೇಮ ಇಂದಿಗೆ ಆಯಿತೆ ಅಮಿತಜನ ಬಂಧು 1 ನಿನ್ನ ದರುಶನವೆಂದಿಗಂದಿಗಾಗಲಿ ಎಂದು ನಿನ್ನ ಧ್ಯಾನವನೆ ಮಾಡಲು ಸನ್ನುತಾಂಗನೆ ನೀನೆ ಘನ್ನ ಕರುಣವು ಮಾಡಿ ಎನ್ನ ಯತ್ನವು ಇಲ್ಲದೆ ನಿನ್ನ ದರುಶನಕ್ಕಾಗಿ ಅನ್ಯರಿಂದ ಪ್ರೇರಿಸಿ ಎನ್ನಲ್ಲಿ ಮನವು ಪುಟ್ಟಿಸಿದೆ ಪನ್ನಗಾಚಲನಿಲಯ ನಿನ್ನ ಮಹಿಮೆ ಎಂತುಂಟೋ ಎನ್ನನಿಲ್ಲಿಗೆ ತಂದು ಘನ್ನ ದರುಶನವಿತ್ತೆ 2 ಪಂಕಜೋದ್ಭವನಯ್ಯ ಮಂಕುಕವಿಸಿದೆ ಪಯಣ ಶಂಕೆಯ ಪರಿಹರಿಸಿ ಸಂಕಟಹರಿಸಿ ನಿನ್ನ ಕಿಂಕರರೊಳು ಸೇರಿಸಿ ಬಿಂಕದಲಿ ಗಿರಿಯನೇರಿಸಿ ಪಂಕಜನಾಭ ಮುಕುಂದ ಗೋವಿಂದ ಶಂಕರನುತಪೂಜಿತ ಶಂಖತೂರ್ಯಾದಿ ವಾದ್ಯಗಳಿಂದಲಿ ಶ್ರೀ ವೇಂಕಟೇಶ ನಿನ್ನ ನೋಡಿದೆ ಬಿಡದೇ 3
--------------
ಉರಗಾದ್ರಿವಾಸವಿಠಲದಾಸರು
ದಾಸರ ಮೊರೆ ಲಾಲಿಸೋ ವೆಂಕಟಾಚಲ ವಾಸ ಬಿನ್ನಪ ಲಾಲಿಸೊ ಪ ಲೇಸು ಭಕುತಿಯು ಮಾಡದಲೆ ಬಲು ಘಾಸಿಯಾಗುತ ಮನದಿ ನೊಂದು ದಾಸನಾಗದೆ ಕ್ಲೇಶಪಟ್ಟೆನೊ ಈಸುದಿನಗಳ ಕಳೆದೆನೊ ವೃಥಾ1 ತಳಿರು ಪೋಲುವ ನಿನ್ನಯ ಪಾದ- ಕ್ಕೆರಗದೆನ್ನಯ ಸಿರವು ದಣಿಯನೋಡದೆ ನಿನ್ನನು ಮಹಾಪಾಪ ಗಳನೆ ಮಾಡುತ ನೊಂದೆನು 2 ಅನಿಮಿಷೇಶನೆ ನಿನ್ನ ಮಹಿಮೆಯ ಕ್ಷಣಬಿಡದೆ ಧ್ಯಾನವನೆ ಮಾಡುವ ಅನಲಸಖತನಯನಿಗೆ ನಮಿಸುವೆ ಕ್ಷಣ ಬಿಡದೆ ಎನ್ನ ಪೊರೆವ ಕರುಣಿ3 ಕಟಿಯ ಕಾಂಜಿಯ ದಾಮವು ನವರತ್ನದ ಸ್ಫ್ಪಟಿಕ ಮುತ್ತಿನ ಹಾರವು ಲಕುಮಿ ಧರಿಸಿದ ವಕ್ಷ ಕೌಸ್ತುಭಹಾರ ಸ್ಫುಟದಿ ಶೋಭಿಪ ಉರವು 4 ವಟುವಿನಂದದಿ ಪ್ರಕಟನಾಗುತ ಕುಟಿಲ ದಿತಿಜರಿಗಖಿಳ ವಿಧ ಸಂ- ಕಟಗಳನೆ ಸಂಘಟನೆ ಮಾಡುವ ನಟನ ತೆರ ವಟಪತ್ರಶಾಯಿ 5 ನೊಸಲ ಕಸ್ತೂರಿ ತಿಲಕ ರಂಜಿಸುವ ಚಂ- ಪಕವ ಪೋಲುವ ನಾಸಿಕ ಎಸೆದು ಶೋಭಿಪ ಮೌಕ್ತಿಕ ಪೋಲುವ ದಂತ ನಸುನಗುತಿಹ ಹಸನ್ಮುಖ6 ಶಶಿಯ ಧರಿಸಿದ ಅಸಮ ಭಕುತನು ನಿಶಿಹಗಲು ತನ್ನ ಸತಿಗೆ ಬೆಸಸಿದ ಅತಿಶಯದ ಮಹಿಮೆಯನೆ ಕೇಳುವ ಮತಿಯ ಕೊಡು ಮನ್ಮಥನ ಪಿತನೆ 7 ಚಿತ್ತದೊಳಗೆ ನಿನ್ನಯ ಪಾದಾಂಬುಜ ಭಕ್ತಿಯಿಂದಲಿ ಕಾಂಬುವ ಭಕ್ತಜನರ ವೃಂದವ ಕರುಣದಿ ಕಾಯ್ವ ವಿಷ್ಣು ಮೂರುತಿ ಕೇಶವ 8 ಎತ್ತನೋಡಿದರಿಲ್ಲ ನಿನ್ನ ಸಮ ಉತ್ತಮರ ಕಾಣುವುದೆ ಮಿಥ್ಯವೊ ಸತ್ಯವಿದು ಪುರುಷೋತ್ತಮನೆ ಎನ್ನ ಚಿತ್ತದಲಿ ನಲಿನಲಿದು ಶ್ರೀಶ 9 ಕಮಲಸಂಭವ ಪಿತನೆ ಪ್ರಾರ್ಥಿಸುವೆ ಶ್ರೀ- ರಮೆಧರೆಯರಿಂ ಸೇವ್ಯನೆ ಕ್ಷಣಬಿಡದಲೆ ನಿನ್ನನೆ ಚಿಂತನೆ ಮಾಳ್ಪ ಸುಜನರಿಗೊಲಿಯುವನೆ 10 ಶ್ರವಣ ಮನನಕೆ ಒಲಿವ ದೇವನೆ ದಿನದಿನದಿ ನಿನ್ನ ಮಹಿಮೆ ತೋರು ಶ್ರೀ- ಕಮಲನಾಭ ವಿಠ್ಠಲನೆ ಕರುಣದಿ ಶ್ರಮವ ಹರಿಸುಸುಧಾಮ ಸಖನೆ11
--------------
ನಿಡಗುರುಕಿ ಜೀವೂಬಾಯಿ
ಧ್ಯಾನವನೆ ಮಾಡಿ ನವರತ್ನ ಸಿಂಹಾಸನಸಾನಂದದಿಂದ ನಿಮಗರ್ಪಿಸುವೆನುಶ್ರೀ ನಿಧಿಯೆ ಪಾದ್ಯಾಘ್ರ್ಯ ಮಧುಪರ್ಕಗಳನು ಸು-ಮ್ಮಾನದಿಂದರ್ಪಿಸುವೆ ಗೌರಿ ದೇವಿ ಜಯ 1 ತುಂಗಭಧ್ರಾ ಸರಸ್ವತಿ ಯಮುನೆ ಕಾವೇರಿಗಂಗಾದಿ ಶುಭತೀರ್ಥ ಸಲಿಲದಿಂದಮಂಗಲಸ್ನಾನವನೆ ರಚಿಸಿ ಜಡೆವೆಣೆದು ಕುಸುಮಂಗಳಂ ಮುಡಿಗೆ ಮುಡಿಸುವೆನಂಬಿಕೆ 2 ಚಂದ್ರಗಾವಿಯ ಸೀರೆ ಕುಪ್ಪಸವ ತೊಡಿಸುವೆನುಚಂದದಿಂದರಿಸಿನವ ಲೇಪಿಸುವೆನುಚಂದ್ರಕಸ್ತೂರಿ ತಿಲಕ ಕುಂಕುಮದ ರೇಖೆಯನುಅಂದದಿಂದಿಡುವೆ ಶ್ರೀ ಗೌರಿ ನಿಮಗೆ3 ಕಣ್ಣ ಕಪ್ಪಿಟ್ಟು ಕರಯುಗಕೆ ಗಂಧವ ತಿವುರಿಚಿನ್ನದಾಭರಣ ನಿಕರವನಿಡುವೆನುರನ್ನ ದುಂಗುರ ಹಾರ ಪದಕದಿಂದ ಶೃಂಗರಿಸಿನಿನ್ನ ಪದಯುಗವ ಪೂಜಿಪೆನು ಗೌರಿ ಜಯ4 ಚಾರು ಪುನ್ನಾಗ ಪೂಗಸಿರಿಸ ಸುರಹೊನ್ನೆ ಸಂಪಗೆ ಮೊದಲಾದ ಪೂಸರವ ಸಿರಿಮುಡಿಗೆ ಮುಡಿಸುವೆನು ಗೌರಿ ಜಯ 5
--------------
ಕೆಳದಿ ವೆಂಕಣ್ಣ ಕವಿ
ಧ್ಯಾನವನೆಮಾಡುಬಿಂಬಮೂರುತಿಯಆನಂದದಲಿ ಕುಳಿತು ಅಂತರಂಗದಲಿಸದಾಚಾರನಾಗಿ ದ್ವಾದಶ ಗುರುಗಳಿಗೆರಗಿಅಂಗವನು ಚಲಿಸದೆ ಚೆಂದಾಗಿ ದೃಢದಿಂದಭಗವದ್ರೂಪಗಳೆಲ್ಲ ಒಂದು ಸಾರಿ ಸ್ಮರಿಸಿತಿರುಗಿ ಮೆಲ್ಲಗೆ ಮೂರು ರಂಧ್ರದಿಂದಲಿ ನಿನ್ನಆತನೆ ಬಿಂಬಮೂರುತಿಯೆಂದು ತಿಳಿದುಕೊಜ್ಞಾನಪ್ರಕಾಶದಲಿ ನಿನ್ನ ಹೃದಯ-ಗುಣನಾಲ್ಕರಿಂದ ಉಪಾಸನೆಯನುಮಾಡುಮಮತೆಯನು ತೊರೆದು ಮೇಲೊಂದಪೇಕ್ಷಿಸದೆಈಪರಿಧೇನಿಸಲು ದೇವ ಕರುಣವ ಮಾಳ್ಪ
--------------
ಗೋಪಾಲದಾಸರು