ಒಟ್ಟು 1 ಕಡೆಗಳಲ್ಲಿ , 1 ದಾಸರು , 1 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಭವ ಶಿತಿಕಂಠ ನಿನ್ನಪದ ತಾಮರಸಯುಗ್ಮಗಳಿಗಾನಮಿಸುವೆ ಪ ಕಾಮಹರ ಕೈಲಾಸ ಹೇಮಗಿರಿಯಾವಾಸ ರಾಮನಾಮನ ಭಜಿಪ ಉಮೆಯರಸ ಶಂಭೋ ಅ ಮೃತ್ಯುಂಜಯ ಮೃಗಾಂಕ ಕೃತ್ತಿವಾಸ ಕೃಪಾಳೊ ವಿತ್ತÀ್ತಪತಿ ಸಖ ವಿನಾಯಕರ ಜನಕ ಭೃತ್ಯವರ್ಗಕೆ ಬಾಹಪಮೃತ್ಯು ಕಳೆದು ಸಂ ಪತ್ತು ಪಾಲಿಸುವುದು ನಿವೃತ್ತಿ ಸಂಗಮಪ 1 ಗೋಪತಿ ಧ್ವಜ ಘೋರ ಪಾಪ ಸಂಹರಣ ಹರಿ ತೋಪಲೋಪಮ ಕಂಠ ಚಾಪಪಾಣೀ ಶ್ರೀ ಪತಿಯ ಶ್ರೀನಾಭಿ ಕೂಪಸಂಭವತನಯ ನೀ ಪಾಲಿಸೆಮ್ಮನು ವಿರೂಪಾಕ್ಷ ಗುರುವೆ 2 ಭಸಿತ ಭೂಷಿತಡಮರು ತಿಸುಳಗೈಯನೆ ಶಂಭೋ ಕಿಸಲಯೋಪಮ ನವಿರ ಶಶಿಭೂಷಣ ಅಸುರಾರಿ ಶ್ರೀ ಜಗನ್ನಾಥ ವಿಠಲನ ಪದ ಬಿಸಜ ಧ್ಯಾನವನೀಯೊ ಹಸನಾಗಿ ಕಾಯೊ 3
--------------
ಜಗನ್ನಾಥದಾಸರು